ರಾಷ್ಟ್ರೀಯ

ಸಿಬಿಡಿಟಿಯಿಂದ 39 ಲಕ್ಷಕ್ಕೂ ಅಧಿಕ ತೆರಿಗೆದಾರರಿಗೆ 1,26,909 ಕೋಟಿ ರೂ ಮರುಪಾವತಿ

ಸಿಬಿಡಿಟಿಯಿಂದ 39 ಲಕ್ಷಕ್ಕೂ ಅಧಿಕ ತೆರಿಗೆದಾರರಿಗೆ 1,26,909 ಕೋಟಿ ರೂ ಮರುಪಾವತಿ

ನವದೆಹಲಿ, ಅ 29 :ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಈ ವರ್ಷದ ಏಪ್ರಿಲ್ 1 ರಿಂದ ಅಕ್ಟೋಬರ್ 27ರವರೆಗೆ 39 ಲಕ್ಷಕ್ಕೂ ಅಧಿಕ ತೆರಿಗೆದಾರರಿಗೆ 1,26,909 ಕೋಟಿ ರೂ. ಮರುಪಾವತಿಸಿದೆ. 37 ಲಕ್ಷ 21 ಸಾವಿರ ತೆರಿಗೆದಾರರಿಗೆ 34,532 ಕೋಟಿ ರೂ. ಆದಾಯ ತೆರಿಗೆ ಮರುಪಾವತಿ ಮತ್ತು 92 ಸಾವಿರ ತೆರಿಗೆದಾರರಿಗೆ ರೂ. 92,376 ಕೋಟಿ ರೂ ಕಾರ್ಪೊರೇಟ್‍ ತೆರಿಗೆ ಮರುಪಾವತಿ ಮಾಡಲಾಗಿದೆ ಎಂದು ಸಿಬಿಡಿಟಿ ಟ್ವೀಟ್‌ನಲ್ಲಿ ತಿಳಿಸಿದೆ. ಕೋವಿಡ್‍-19ರ ಬಿಕ್ಕಟ್ಟಿನ ಸಮಯದಲ್ಲಿ ತೆರಿಗೆದಾರರಿಗೆ ಅನುಕೂಲವಂತಾಗಲು ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ಸಿಬಿಡಿಟಿ ತಿಳಿಸಿದೆ. 

  


ಸುದ್ದಿ ಓದಿ