ಶಿಗ್ಗಾವ್

ಸಿ.ಎಂ.ಬೊಮ್ಮಾಯಿಗೆ ಅವ್ಯಾಚ ಶಬ್ದಗಳಿಂದ ನಿಂದನೆ ಶಾಸಕ ನೆಹರು ಓಲೇಕಾರ ಪ್ರತಿಕೃತಿ ದಹಿಸಿ ಪ್ರತಿಭಟನೆ

ಸಿ.ಎಂ.ಬೊಮ್ಮಾಯಿಗೆ ಅವ್ಯಾಚ ಶಬ್ದಗಳಿಂದ ನಿಂದನೆ ಶಾಸಕ ನೆಹರು ಓಲೇಕಾರ ಪ್ರತಿಕೃತಿ ದಹಿಸಿ ಪ್ರತಿಭಟನೆ

ಶಿಗ್ಗಾವಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅವರ ಧರ್ಮ ಪತ್ನಿಗೆ ಮತ್ತು ಕುಟುಂಬ ವರ್ಗದವರಿಗೆ ಅವ್ಯಾಚ ಶಬ್ದಗಳಿಂದ ಶಾಸಕ ನೆಹರು ಓಲೇಕಾರ ಮಾತನಾಡಿದ್ದಕ್ಕಾಗಿ ಇಂದು ಪಟ್ಟಣದ ಚೆನ್ನಮ್ಮ ವೃತ್ತದ ಬಳಿಯಿಂದ ಪ್ರತಿಭಟನೆ ಮೇರವಣಿಗೆ ಪ್ರಾರಂಭವಾಗಿ ನೆಹರು ಓಲೇಕಾರ ವಿರುದ್ದ ಘೋಷಣೆ ಕೂಗುತ್ತಾ ಪಟ್ಟಣದ ಪಿ.ಎಲ್‌.ಡಿ ಬ್ಯಾಂಕ ವೃತ್ತದ ಬಳಿ ಶಾಸಕ ನೆಹರು ಓಲೇಕಾರ ಪ್ರತಿಕೃತಿಯನ್ನು ದಹನ ಮಾಡಿದರು. 

ಮುಖಂಡ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ ಭಾಜಪ ಟಿಕೇಟ ನನಗೆ ಬೊಮ್ಮಾಯಿ ನಿರಾಕರಿಸಿದ್ದಾರೆ ಎಂದು ಶಾಸಕ ನೆಹರು ಓಲೇಕಾರ ಅವ್ಯಾಚ ಶಬ್ದ ಬಳಕೆ ಮಾಡಿದ್ದು ಈ ಕೂಡಲೇ ಶಾಸಕ ನೆಹರು ಓಲೇಕಾರ ಅವರ ಶಾಸಕತ್ವವನ್ನು ರದ್ದುಗೋಳಿಸಬೇಕು ಹಾಗೂ ಅವರನ್ನು ಈ ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು. 

ಮಾಜಿ ತಾಲೂಕ ಪಂಚಾಯತ ಸದಸ್ಯ ನಿಂಗಪ್ಪ ಹರಿಜನ ಮಾತನಾಡಿ ನಮ್ಮ ನೆಚ್ಚಿನ ಮುಖ್ಯಮಂತ್ರಿಗಳಿಗೆ ಅವ್ಯಾಚವಾಗಿ ಮಾತನಾಡಿದ್ದನ್ನು ಖಂಡಿಸುತ್ತೇವೆ ಅಲ್ಲದೇ ಅವರು ಬಂದು ಕ್ಷಮೆಯಾಚಿಸಬೇಕು ಇಲ್ಲದಿದ್ದರೆ ಅವರ ಮನೆಯ ಮುಂದೆ ಉಗ್ರ ಹೋರಾಟ ಮಾಡುತ್ತೇವೆ ಎಂದರು. 

ತಾಲೂಕ ದಲಿತ ಸಮಾಜ ಅಧ್ಯಕ್ಷ ಹನುಮಂತಪ್ಪ ಮಾದರ ಮಾತನಾಡಿ ನಮ್ಮ ನಾಯಕರು ಮತ್ತು ಮುಖ್ಯಮಂತ್ರಿಗಳಿಗೆ ಅವಹೇಳನಕಾರಿ ಬೈದಿದ್ದನ್ನು ತಾಲೂಕ ದಲಿತ ಸಮಾಜ ಖಂಡಿಸುತ್ತದೆ ಏಕೆಂದರೆ ಒಂದು ಉನ್ನತ ಹುದ್ದೆಯಲ್ಲಿರುವ ಹಾಗೂ ನಮ್ಮ ಪ್ರತಿಯೊಂದು ಸಮಸ್ಯೆಗೂ ಸ್ಪಂದಿಸುವ ಬೊಮ್ಮಾಯಿಯವರಿಗೆ ಈ ಕೂಡಲೇ ಬಂದು ಕ್ಷಮೆಯಾಚಿಸಬೇಕು ಎಂದು ಹೇಳಿದರು. 

ದಲಿತ ಮುಖಂಡೆ ನೀಲವ್ವ ಕಾಲವಾಡ ಮಾತನಾಡಿ ಶಾಸಕ ನೆಹರು ಓಲೇಕಾರ ಅವರು ಮುಖ್ಯಮಂತ್ರಿ ಹಾಗೂ ಧರ್ಮಪತ್ನಿ ಹಾಗೂ  ತಾಯಿಯವರನ್ನು ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಕ್ಕಾಗಿ ಇಂದು ತಾಲೂಕಿನ ದಲಿತ ಮತ್ತು ಕ್ಷೇತ್ರದ ಜನ ಪ್ರತಿಭಟನೆ ಮೂಲಕ ಖಂಡಿಸುತ್ತೇವೆ ಆದಷ್ಟು ಬೇಗ ಬಂದು ಕ್ಷಮೆಯಾಚಿಸಬೆಂಕೆಂದರು. 

ಈ ಸಂದರ್ಭದಲ್ಲಿ ಕರೆಯಪ್ಪ ಕಟ್ಟಿಮನಿ, ಡಾ.ಮಲ್ಲೇಶಪ್ಪ ಹರಿಜನ,  ಬಸನಗೌಡ ರಾಮನಗೌಡ್ರ, ಶಿವಾನಂದ ಮ್ಯಾಗೇರಿ, ನರಹರಿ ಕಟ್ಟಿ, ರೇಣುಕನಗೌಡ ಪಾಟೀ, ಬಸವರಾಜ ನಾರಾಯಣಪೂರ, ಗಂಗಾಧರ ಸಾತಣ್ಣವರ, ದೇವಣ್ಣ ಚಾಕಲಬ್ಬಿ, ತಿಪ್ಪಣ್ಣ ಸಾತಣ್ಣವರ, ಕಿರಣ ಅವರಾದಿ, ಶ್ರೀಕಾಂತ ಬುಳ್ಳಕ್ಕನವರ, ರೂಪಾ ಬನ್ನಿಕೊಪ್ಪ, ಸುಭಾಸ ಚವ್ಹಾಣ, ದಯಾನಂದ ಅಕ್ಕಿ, ಸಿದ್ದಾರ್ಥಗೌಡ ಪಾಟೀಲ, ರಮೇಶ ವನಹಳ್ಳಿ, ಶಿವಪ್ರಸಾದ ಸುರಗೀಮಠ, ಉಮೇಶ ಗೌಳಿ, ಗಂಗಾಧರ ಬಾಣದ, ಬಿ.ಟಿ.ಇನಾಮತಿಗೌಡ್ರ, ನಿಂಗನಗೌಡ್ರ ದೊಡ್ಡಮನಿ, ಎಂ.ಎನ್‌.ವೇಂಕೋಜಿ, ಹನುಮರೆಡ್ಡಿ ನಡುವಿನಮನಿ, ಶರೀಫಸಾಬ ನಧಾಪ, ಸಂಗಮೇಶ ಕಂಬಾಳಿಮಠ, ಹೊನ್ನಪ್ಪ ಹೂಗಾರ, ಪ್ರಕಾಶ ವೆರ್ಣೇಕರ, ಸಿದ್ದು ಅಕ್ಕಿ, ಪ್ರಶಾಂತ ಬಡ್ಡಿ, ಸಂಜೀವ ಬಾರಿಗಿಡದ, ನವೀನ ಸಾಸನೂರ, ವಿಶ್ವನಾಥ ಗಾಣಿಗೇರ, ಮುನ್ನಾ ಬಿಸ್ತಿ ವೀಣಾ ಹಿರೇಮಠ, ಭಾರತೀ ರಾಂಪೂರಮಠ, ರೂಪಾ ಹೊನ್ನಣ್ಣನವರ ಸೇರಿದಂತೆ ನೂರಾರು ಕಾರ್ಯಕರ್ತರು, ಬೊಮ್ಮಾಯಿ ಅಬಿಮಾನಿ ಬಳಗದವರು ಇದ್ದರು. 


ಸುದ್ದಿ ಓದಿ