ರಾಷ್ಟ್ರೀಯ

ಯುಪಿಯಲ್ಲಿ ಕಟ್ಟಡ ಕುಸಿತ , ಅವಶೇಷಗಳ ಅಡಿಯಲ್ಲಿ ಹಲವರ ಶಂಕೆ

ಯುಪಿಯಲ್ಲಿ   ಕಟ್ಟಡ ಕುಸಿತ , ಅವಶೇಷಗಳ ಅಡಿಯಲ್ಲಿ ಹಲವರ ಶಂಕೆ

ಕಾನ್ಪುರ, ನವೆಂಬರ್ 24: ಕಾನ್ಪುರ ಜಿಲ್ಲೆಯಲ್ಲಿ  ಮೂರು ಮಹಡಿಗಳ  ಕಟ್ಟಡವು ಕುಸಿದು ಅದರ  ಅವಶೇಷಗಳ ಅಡಿಯಲ್ಲಿ ಹಲವು ಜನರು ಸಿಕ್ಕಿಕೊಂಡಿರುವ ಶಂಕೆಯಿದೆ.

ಈ ದುರ್ಘಟನೆ  ಘಟನೆ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಅನ್ವರ್ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಕುಲಿ ಬಜಾರ್ ಪ್ರದೇಶದಲ್ಲಿ ಈ ಅವಘಡ ಸಂಭವಿಸಿದೆ. ಕಟ್ಟಡವು ಅತ್ಯಂತ ಶಿಥಿಲಾವಸ್ಥೆಯಲ್ಲಿತ್ತು. ಇದರಲ್ಲಿ ವಾಸಿಸುತ್ತಿದ್ದ ಅನೇಕ ಜನರು ಭಗ್ನಾವಶೇಷಗಳ ಅಡಿ ಸಿಕ್ಕಿಹಾಕಿಕೊಂಡಿದ್ದಾರೆ ಶಂಕಿಸಲಾಗಿದೆ .

 

ಘಟನಾ ಸುದ್ದಿ ತಿಳಿಯುತ್ತಿದ್ದಂತೆ  ಪೊಲೀಸರು , ಆಗ್ನಿಶಾಮಕ ಸಿಬ್ಬಂದಿ  ರಕ್ಷಣಾ ಕಾರ್ಯದಲ್ಲಿ ನಿರತವಾಗಿದ್ದು  ರಕ್ಷಣಾ ಕಾರ್ಯ ಪ್ರಗತಿಯಲ್ಲಿದ್ದು, ಅವಶೇಷಗಳ ಅಡಿಯಿಂದ ಸದ್ಯ ಓರ್ವನನ್ನು ಸುರಕ್ಷಿತವಾಗಿ ಹೊರ ಕರೆತರಲಾಗಿದೆ ಎಂದೂ  ಹೇಳಲಾಗಿದೆ . ಇದರ ಬಗ್ಗೆ ಹೆಚ್ಚಿನ  ಮಾಹಿತಿ ದೊರಕಬೇಕಿದೆ. 

ಸುದ್ದಿ ಓದಿ