ಮುಂದಗೋಡ

ಆರ್ಥಿಕ ಸಂಸ್ಥೆ ಕಟ್ಟುವುದು ಸುಲಭ ಆದರೆ ಬೆಳೆಸುವುದು ಕಷ್ಟ: ಹೆಬ್ಬಾರ

ಆರ್ಥಿಕ ಸಂಸ್ಥೆ ಕಟ್ಟುವುದು ಸುಲಭ ಆದರೆ ಬೆಳೆಸುವುದು ಕಷ್ಟ: ಹೆಬ್ಬಾರ

ಮುಂಡಗೋಡ:ಒಳ್ಳೆಯ ಸಾಲಗಾರರು ಸಿಗದೆ ಇರುವುದು ಸಮಸ್ಯೆ ಉತ್ತಮ ಸಾಲಗಾರರು ಸಿಗದೆ ಹೋದರೆ ಠೇವಣಿದಾರರ ಹಣ ಮರು ಪಾವತಿಸಲು ಆಗುವುದಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.  

ಪಟ್ಟಣದ ಕಲಾಲ ಓಣಿಯಲ್ಲಿ ಮಂಗಳವಾರ ಶಿಕ್ಷಕರ ಪತ್ತಿನ ಸಹಕಾರ ಸಂಘದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಸಂಘಕ್ಕೆ ಕೆಡಿಸಿಸಿ ಬ್ಯಾಂಕ್‌ನಿಂದ ಎಷ್ಟು ಬೇಕೋ ಅಷ್ಟು ಆರ್ಥಿಕ ನೆರವು ನೀಡಲಾಗುವುದು. ಶಿಕ್ಷಕರಿಗಾಗಿ ಅನೇಕ ಹೊಸ-ಹೊಸ ಯೋಜನೆಗಳನ್ನು ಜಾರಿಗೆ ತರಲಾಗಿದೆ. 12-15ವರ್ಷಗಳವರೆಗೆ ಕಂತುಗಳ ಸೌಲಭ್ಯ ನೀಡಿ ಅತಿ ಕಡಿಮೆ ಬಡ್ಡಿ ದರದಲ್ಲಿ ಮನೆಗಳನ್ನು ಕಟ್ಟಲು ನೌಕರಸ್ಥರಿಗೆ ಸಾಲದ ಅನುಕೂಲ ಮಾಡಿ ಕೊಡಲಾಗುವುದು. ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ನಮ್ಮ ಜೊತೆಗೆ ಇದೆ. ಸಂಘವನ್ನು ಬಲಾಢ್ಯವಾಗಿ ಬೆಳೆಸಬೇಕು. ಇಚ್ಛಾ ಶಕ್ತಿ ಎಲ್ಲ ಶಿಕ್ಷಕರಿಗೆ ಇರಬೇಕು. ನಬಾರ್ಡ್‌ ಮತ್ತು ಕೇಂದ್ರದ ಆರ್ಥಿಕ ಹೊಸ ನೀತಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಬದಲಾವಣೆ ತಂದಿದೆ ಎಂದರು.  

ಈ ಸಂದರ್ಭದಲ್ಲಿ ವಾಕರಸಾ ಸಂಸ್ಥೆ ಅಧ್ಯಕ್ಷ ವಿ.ಎಸ್‌.ಪಾಟೀಲ, ಪ.ಪಂ.ಅಧ್ಯಕ್ಷೆ ಜಯಸುಧಾ ಭೋವಿವಡ್ಡರ, ಉಪಾಧ್ಯಕ್ಷ ಶ್ರೀಕಾಂತ ಸಾನು, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎಲ್‌.ಟಿ.ಪಾಟೀಲ, ಗುಡ್ಡಪ್ಪ ಕಾತೂರ, ನಾಗಭೂಷಣ ಹಾವಣಗಿ, ಉದ್ಯಮಿ ಎಮ್‌.ಸಿ.ಕಲಾಲ, ಸಂಘದ ಅಧ್ಯಕ್ಷ ಡಾ.ರಮೇಶ ಅಂಬಿಗೇರ, ನಾಗರತ್ನಾ ನಾಗನೂರ, ದಾಸಪ್ಪ ಎ., ಅಶೋಕ ಶಂಕ್ರಿಕೊಪ್ಪ, ಅಕ್ಕಮಹಾದೇವಿ ಗಾಣಿಗೇರ, ತನುಜಾ ನಾಯ್ಕ, ಸಿದ್ದಾರೂಢ ಅಂಗಡಿ, ಹನುಮಂತ ತಳವಾರ, ಹನುಮಂತ ಅಂದಾನಪ್ಪನವರ, ವಿನೋದ ನಾಯ್ಕ, ಪಾಂಡುರಂಗ ಟಿಕ್ಕೋಜಿ ಹಾಗೂ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ