ಹೊಸದಾಗಿ ಕಟ್ಟುವುದಕ್ಕಿಂತ ಹಳೆ ದೇವಾಲಯಗಳನ್ನು ಜಿರ್ಣೋದ್ಧಾರಗೊಳಿಸಿ: ಫಕೀರದಿಂಗಾಲೇಶ್ವರ ಶ್ರೀ
ಲೋಕದರ್ಶನ ವರದಿ
ರಾಣಿಬೆನ್ನೂರ 17: ಗುಡಿ ಕಟ್ಟುವುದು ಸುಲಭವಲ್ಲ. ಇವೇಲ್ಲವೂ ಪೂರ್ವ ಜನ್ಮದ ಪುಣ್ಯ ಮತ್ತು ದೈವ ಲಿಖಿತ. ದೈವ ಲಿಖಿತವಿಲ್ಲದೇ ಯಾವುದೇ ಕೆಲಸ ಕಾರ್ಯಗಳು ಮತ್ತು ಧರ್ಮ ಕಾರ್ಯಗಳು ನಡೆಯಲು ಸಾಧ್ಯ ವಿಲ್ಲ. ಮಾಡುವ ಮನಸ್ಸು ಪ್ರಾಮಾಣಿಕ ಪ್ರಯತ್ನ ಮತ್ತು ಸಾಧಿಸುವ ಅಚಲ ವಿಶ್ವಾಸ ಇರಬೇಕಾಗುತ್ತದೆ. ಇಲ್ಲಿನ ಪ್ರಾಚೀನ ದೇವಾಲಯ ನಿರ್ಮಾಣ ವಾಗಿರುವುದು ಬನಶಂಕರಿಯ ಕೃಪೆಯಿಂದಲೇ ಸಾಧ್ಯವಾಗಿದೆ ಎಂದು ಶಿರಹಟ್ಟಿ ಫಕ್ಕೀರೇಶ್ವರ ಸಂಸ್ಥಾನ ಮಠದ ಜಗದ್ಗುರು ಫಕ್ಕೀರದಿಂಗಾಲೇಶ್ವರ ಮಹಾ ಸ್ವಾಮಿಗಳು ನುಡಿದರು.
ಅವರು ಬುಧವಾರ ಮುಂಜಾನೆ ಇಲ್ಲಿನ ಕುರುಬಗೇರಿ ಪಾಚೀನ ಬನಶಂಕರಿ ದೇವಸ್ಥಾನದ ಆವರಣದಲ್ಲಿ ನಡೆದ ಮಂಡಲ ಪೂಜಾ ಮತ್ತು ಚಂಡಿಕಾ ಹವನ ಹೋಮ, ಪೂರ್ಣಾಹುತಿ, ಧಾರ್ಮಿಕ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಹೊಸ ಗುಡಿಗಳನ್ನು ಕಟ್ಟುವುದಕ್ಕಿಂತ ನಮ್ಮ ಪೂರ್ವಜರು ಕಟ್ಟಿಸಿದ ಹಳೆಯ ಗುಡಿಗಳನ್ನು ಜೀರ್ಣೋದ್ಧಾರಗೊಳಿಸಿ ಅದರ ಮೂಲಕ ಧರ್ಮ ಜಾಗೃತಿಯ ಕೆಲಸ ನಡೆಯಬೇಕಾಗಿದೆ. ಇದರಿಂದಲೇ ಪ್ರತಿಯೊಬ್ಬ ಮನುಷ್ಯನ ಜೀವನ ಸಾರ್ಥಕತೆ ಪಡೆಯಲಿದೆ ಎಂದರು.
ಶಿರಹಟ್ಟಿ ಸಂಸ್ಥಾನಮಠಕ್ಕೆ 500ಕ್ಕೂ ಹೆಚ್ಚು ವರ್ಷಗಳ ಭವ್ಯ ಇತಿಹಾಸ ಪರಂಪರೆ ಇದೆ. ಯಾವುದೇ ಜಾತಿ.ಮತ ಪಂಥ ಬೇಧ ಭಾವ ಇಲ್ಲಿಲ್ಲ. ಸಂಪೂರ್ಣ ಜ್ಯಾತ್ಯಾತೀತ ಮಠವಾಗಿದೆ. ತಾವು ಸಹ ಅಂದಿನಿಂದ ಇಂದಿನ ವರೆಗೂ ಜ್ಯಾತ್ಯಾತೀತ ನಿಲುವಿನಲ್ಲಿ ಧರ್ಮ ಜಾಗೃತಿ ಕೆಲಸ ಮಾಡುತ್ತಾ ಬಂದಿದ್ದರಿಂದಲೇ ಇಂದು ಈ ಮಠಕ್ಕೆ 14ನೇ ಪಟ್ಟಾಧ್ಯಕ್ಷನಾಗಿ ಬಂದಂತಾಗಿದೆ ಎಂದು ಶ್ರೀಮಠದ ಇತಿಹಾಸವನ್ನು ವಿಶ್ಲೇಷಿಸಿ ಮಾತನಾಡಿದ ಜಗದ್ಗುರುಗಳು ನಾಡಿನಾಧ್ಯಾಂತ 56 ಶಾಖಾ ಮಠಗಳಿವೆ. ಕಳೆದ 18 ವರ್ಷಗಳಿಂದ ತಮ್ಮೊಂದಿಗೆ ಮಠದ ಅಧಿಕಾರತ್ವಕ್ಕಾಗಿ ಚರ್ಚೆ ನಡೆಯುತ್ತಲೆ ಸಾಗಿತ್ತು. ನಾನು ಅದನ್ನು ನಿರಾಕರಿಸುತ್ತಾ ಬಂದಿದ್ದೆ. ಇಂದು ಹಿರಿಯ ಜಗದ್ಗುರುಗಳ ಸಂಕಲ್ಪವೋ ಏನೋ ಎಂಬಂತೆ ಮಠದ ಪಿಠಾಧಿಕಾರವನ್ನು ವಹಿಸಿಕೊಂಡಿದ್ದೇನೆ. ತಮ್ಮ ಜೀವಿತದ ಕೊನೆಯ ವರೆಗೂ ಪೀಠ ಪರಂಪರೆಯಂತೆ ತಮ್ಮ ಪ್ರಾಮಾಣಿಕ ಕರ್ತವ್ಯವನ್ನು ನಿಭಾಯಿಸಲು ಪ್ರತಿಜ್ಞೆ ಮಾಡಿದ್ದೇವೆ ಎಂದರು.
ನಿವೃತ್ತ ಕಾರ್ಯದರ್ಶಿ ಶಿಗ್ಗಾವಿಯ ರುದ್ರ್ಪ ಕಮ್ಮಾರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಧರ್ಮ ಮತ್ತು ಸಂಸ್ಕೃತಿ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸಾಗರ ತಾಲೂಕಿನ ಹಳೇ ಇಕ್ಕೇರಿ ಶ್ರೀ ಶಾರದಾಂಬಾ ದೇವಸ್ಥಾನದ ಪ್ರಧಾನ ಅರ್ಚಕರಾದ ಗೀರೀಶ ಶರ್ಮಾ ಸಂಗಡಿಗರು, ನಗರಸಭಾ ಅಧ್ಯಕ್ಷೆ ರೂಪಾ ರಾ ಚಿನ್ನಿಕಟ್ಟಿ, ಬಿಜೆಪಿ ಮುಖಂಡರಾದ ಸಿದ್ದಣ್ಣ ಚಿಕ್ಕಬಿದರಿ, ಭಾರತಿ ಕು ಜಂಬಗಿ, ಭಾರತಿ ಮ ಅಳವಂಡಿ, ನ್ಯಾಯವಾಧಿ ಕೆ.ಎನ್.ಕೋರಧಾನ್ಯಮಠ, ಶಿವಪುತ್ರ್ಪ ಕೊಪ್ಪದ, ಕರಬಸಪ್ಪ ಮಾಕನೂರು, ಮಹೇಶಪ್ಪ ಕೊಪ್ಪದ, ವನಿತಾ ಗುತ್ತಲ. ಪ್ರಭಾವತಿ ತಿಳವಳ್ಳಿ, ಪ್ರಕಾಶ ಪೂಜಾರ ಸೇರಿದಂತೆ ಮತ್ತಿತರ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ, ಸಮಿತಿ ಅಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಈ ಭಾಗದಲ್ಲಿ ಐತಿಹ್ಯ ಪರಂಪರೆಯ ಪ್ರಾಚೀನ ದೇವಾಲಯವನ್ನು ಭಕ್ತರ ಮುಕ್ತ ಮನಸ್ಸಿನ ಸಹಾಯ, ಸಹಕಾರದಿಂದ ಕೇವಲ ಎರಡುವರೆ ವರ್ಷಗಳ ಅವಧಿಯಲ್ಲಿ 1.50 ಕೋಟಿ ಅಧಿಕ ವೆಚ್ಚದಲ್ಲಿ ಸುಂದರ ದೇವಾಲಯವನ್ನು ನಿರ್ಮಿಸಲಾಗಿದೆ. ಇದೇಲ್ಲವೂ ತಮಗೆ ಸಾವಿರಾರೂ ನಾಗರೀಕರು ನೀಡಿದ ಸಹಕಾರದಿಂದ ಮಾತ್ರ ಸಾಧ್ಯವಿದೆ. ಡಿಸೆಂಬರ್ ನಲ್ಲಿ ದೇವಸ್ಥಾನ ಲೋಕಾರೆ್ಣಗೊಂಡಿದ್ದು, ಮಂಡಲ ಕಾರ್ಯಕ್ರಮ ನಡೆದಿದೆ. ಪ್ರತಿ ಹುಣ್ಣಿಮೆಯಂದು ಪ್ರಸಾಧ ವಿತರಣೆ ಇಲ್ಲಿದೆ. ಭವಿಷ್ಯದ ದಿನಗಳಲ್ಲಿ ಈ ಭಾಗದ ಜನ ಸಾಮಾನ್ಯರ ಅನುಕೂಲತೆಗಾಗಿ ಕಲ್ಯಾಣ ಮಂಟಪಹೊಂದನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದ ಅವರು, ದಾನಿಗಳಿಗೆ ತಮ್ಮ ಕೃತಜ್ಞತೆ ಸಮರ್ಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ಮರಿಸ್ವಾಮಿ ಪೂಜಾರ, ಕಾರ್ಯದರ್ಶಿ ಶ್ರೀಮತಿ ನಿರ್ಮಲಾ ಪೂಜಾರ, ಶಂಕ್ರ್ಪ ಬುರಡಿಕಟ್ಟಿ, ಬಸಪ್ಪ ನೇಲೊಗಲ್, ನಾಗರಾಜ ಊದಗಟ್ಟಿಗೌಡ್ರ, ಜ್ಯೋತಿ ಕೊಪ್ಪದ, ಸೋಮಶೇಖರ ಹಾವನೂರು, ನಾಗರಾಜ ಕೊಪ್ಪದ, ನಾಗರಾಜ ಮಾಕನೂರು, ಕುಮಾರ ಗೌಡಶಿವಣ್ಣನವರ, ಶಿವಪುತ್ರ್ಪ ಬಣಗಾರ, ಚಿದಾನಂದ ಬಡಿಗೇರ, ಬಸವರಾಜ ಮೈಲಾರ, ಪ್ರಕಾಶ ಬುರಡಿಕಟ್ಟಿ, ಶಿವರಾಜ ಹುಗ್ಗಿ ಸೇರಿದಂತೆ ಮತ್ತಿತರ ಗಣ್ಯರು, ಸಮಿತಿ ಮುಖಂಡರು, ಕಾರ್ಯರ್ತರು ಉಪಸ್ಥಿತರಿದ್ದರು. ಸಾವಿತ್ರಾ ಪೂಜಾರ ಸಂಗಡಿಗರು ಪ್ರಾರ್ಥಿಸಿದರು. ಕೋಶಾಧ್ಯಕ್ಷ ಶಿವಪ್ಪ ಹೆದ್ದೇರಿ ಸ್ವಾಗತಿಸಿದರು. ಶಿಕ್ಷಕಿ ಇಂದಿರಾ ಕೊಪ್ಪದ ನಿರೂಪಿಸಿ, ಪ್ರಕಾಶ ಗಚ್ಚಿನಮಠ ವಂದಿಸಿದರು. ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.