ಭಾರತದ ಅಭಿವೃದ್ಧಿ ಪಥದತ್ತ ಬಜೆಟ್ : ನರಹರಿ
ಶಿಗ್ಗಾವಿ,24 : ಕೊಟ್ಟ ಮಾತಿನಂತೆ ಪಡಿತರಿಗೆ ಪ್ರತಿ ತಿಂಗಳು ತಲಾ 5 ಕೆ.ಜಿ.ಯಂತೆ ಉಚಿತ ಅಕ್ಕಿಯನ್ನು ಕೊಡುವದರ ಜೊತೆಗೆ, ಉಚಿತ ವಿದ್ಯುತ್ ಯೋಜನೆ ಅಡಿಯಲ್ಲಿ ಮನೆಯ ಮೇಲ್ಚಾವಣಿಯಲ್ಲಿ ಸೌರ ಫಲಕ ಅಳವಡಿಸಿ ಪ್ರತಿ 300 ಯುನಿಟ್ ಬಡವರಿಗೆ ಉಚಿತವಾಗಿ ವಿದ್ಯುತ್ ನೀಡುತ್ತಿರುವ ನಮ್ಮಕೇಂದ್ರ ಸರಕಾರವು ಬಡವರಿಗೆ ನಿಜವಾದ ಗ್ಯಾರಂಟಿ ಸರಕಾರವಾಗಿದೆ ಹಾಗೂ ಈ ಬಜೆಟ್ ಭಾರತದ ಅಭಿವೃದ್ದಿಯ ಪಥವಾಗಿದೆ ಎಂದು ಭಾ.ಜ.ಪಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ನರಹರಿ ವಾದಿ ರಾಜಕಟ್ಟಿ ಹೇಳಿದರು.