ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಬೌದ್ಧ ಪೌರ್ಣಿಮೆ, ಸತ್ಯನಾರಾಯಣ ಪೂಜೆ
ರಾಣೇಬೆನ್ನೂರು : ಇಲ್ಲಿನ ಸಿದ್ದೇಶ್ವರ ನಗರದ ಶ್ರೀ ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಬೌದ್ಧ ಪೌರ್ಣಿಮೆಯ ನಿಮಿತ್ತ ಸರ್ವ ಧರ್ಮ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮವು ಆಯೂಜಿ ಸಲಾಗಿತ್ತು. ಸೂರ್ಯೋದಯ ಕಾಲ ದೇವಸ್ಥಾನ ಆವಣದಲ್ಲಿರುವ ಆಂಜನೇಯ ಸ್ವಾಮಿ, ನವಗ್ರಹ, ನಾಗದೇವತೆ, ಈ ಬನ್ನಿ ಕಾಳಮ್ಮ ದೇವರ ಮೂರ್ತಿಗಳಿಗೆ ಅಭಿಷೇಕ, ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಅರ್ಚಕ ರಾಮಣ್ಣ ವೈದ್ಯ ಅವರ ನೇತೃತ್ವದಲ್ಲಿ ಸತ್ಯನಾರಾಯಣ ಸ್ವಾಮಿಯ ಸಾಮೂಹಿಕ ಪೂಜಾ ಕಾರ್ಯವು ಮಾಡಲಾಯಿತು.
ಜಿಲ್ಲಾಧ್ಯಕ್ಷ ಹನುಮಂತಪ್ಪ ಮುಕ್ತೇನಹಳ್ಳಿ ಅವರು ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ ಕಾರ್ಯಕ್ರಮದಲ್ಲಿ ಸಮಾಜದ ಗಣ್ಯರಾದ ಮಾರುತಿ ಗರಡಿಮನಿ, ಲಕ್ಷ್ಮಣ ಕಡ್ಲಿಬಾಳ, ಬಸವರಾಜ ಐರಣಿ, ಪರಶುರಾಮ ಅಗಡಿ, ರವಿ ಕಿಚಡಿ, ಪ್ರದೀಪ್ ಶಿಗ್ಲಿ, ಮುದ್ದಪ್ಪ ಕಿಚಡಿ, ಪ್ರವೀಣ್ ಗುತ್ತಲ್, ಶಾಂತಮ್ಮ ಕಿಚಡಿ, ಚನ್ನಬಸಮ್ಮ ಕಾಮಣ್ಣನವರ್, ಪ್ರೇಮಾ ಶೆಟ್ಟಿ, ಶಾಂತವೀರಯ್ಯ ಸ್ವಾಮಿ ಸೇರಿದಂತೆ ಮತ್ತಿತರ.ಗಣ್ಯರು, ಭಕ್ತಾದಿಗಳು ಪಾಲ್ಗೊಂಡಿದ್ದರು. ಸ್ವಾಮಿಯ ಪೂಜೆಯ ನಂತರ ಸಾರ್ವಜನಿಕವಾಗಿ ಮಹಾಪ್ರಸಾದ ವಿತರಣೆ ಮಾಡಲಾಯಿತು