ಸರ್ವರನ್ನು ಸಮಾನ ಕಾಣುವ ಪ್ರಾದೇಶಿಕ ಪಕ್ಷ ಜೆಡಿಎಸ್ ಅಧಿಕಾರಕ್ಕೆ ತನ್ನಿ: ಸುರ್ವ
ಲೋಕದರ್ಶನ ವರದಿ
ಕುಷ್ಟಗಿ 19: ದೇಶಕ್ಕೆ ಮಾರಕವಾಗಿರುವ ಎರಡೂ ರಾಷ್ಟ್ರೀಯ ಪಕ್ಷಗಳನ್ನು ಕಿತ್ತೂಗೆದು ಜಾತಿ ಧರ್ಮ ತಾರತಮ್ಯ ತೋರದ ಸರ್ವರಿಗೂ ಸಮಾನತೆ ಹಾಗೂ ಸಹೋದರತೆ ಕಾಣುವ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷವನ್ನು ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ತರಬೇಕು ಎಂದು ಜಾತ್ಯತೀತ ಜನತಾದಳದ ಆಕಾಂಕ್ಷಿ ಅಭ್ಯರ್ಥಿ ತುಕಾರಾಮ ಸುರ್ವ ಅವರು ಹೇಳಿದರು.
ಕುಷ್ಟಗಿ ತಾಲೂಕಿನ ಪಟ್ಟಲಚಿಂತಿ ಗ್ರಾಮದಲ್ಲಿ ಜೆಡಿಎಸ್ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ಅವರು
ಜಾತಿ ವಿಷ ಬೀಜ ಬಿತ್ತುವ ಕಾಂಗ್ರೆಸ್-ಬಿಜೆಪಿ ಪಕ್ಷಗಳನ್ನು ನಂಬಬೇಡಿ ಸಮಾಜವನ್ನು ಜಾತಿ ಆಧಾರದ ಮೇಲೆ ಒಡೆದು ರಾಜಕೀಯ ಲಾಭ ಪಡೆಯುವ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳನ್ನು ನಂಬಬೇಡಿ ಎಂದು ಹೇಳಿದರು.
ತಾಲೂಕಾಧ್ಯಕ್ಷ ಬಸವರಾಜ ನಾಯಕ ಕಾಂಗ್ರೆಸ್ ಮತ್ತು ಬಿಜೆಪಿಯ ಪಕ್ಷ ತೊರೆದುಬಂದ ನೂರಾರು ಕಾರ್ಯಕರ್ತರನ್ನು ಪಕ್ಷದ ಶಾಲು ಹೊದಿಸುವುದರ ಮೂಲಕ ಅಧಿಕೃತವಾಗಿ ಜೆಡಿಎಸ್ ಪಕ್ಷಕ್ಕೆ ಸ್ವಾಗತಿಸಿಕೊಂಡರು.
ಈ ಸಂದರ್ಭದಲ್ಲಿ ರಾಜ್ಯ ಜಂಟಿ ಕಾರ್ಯದರ್ಶ ಸಿ.ಎಂ ಹಿರೇಮಠ, ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ್ ಜಾಲಿಹಾಳ ವಕೀಲರು, ತಾಲೂಕು ಘಟಕದ ಅಧ್ಯಕ್ಷ ಬಸವರಾಜ ನಾಯಕ, ಸೈಯದಸಾಬ ಗಂಧೆಣ್ಣಿ, ಅಲ್ತಾಫ್ ನದಾಫ್ ಸೇರಿದಂತೆ ಗ್ರಾಮದ ನೂರಾರು ಮುಖಂಡರು ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು