ಸ್ತನಪಾನ ಸಪ್ತಾಹ ಕಾರ್ಯಕ್ರಮ
August 04, 2026 11:49 PM | By Admin
Breastfeeding Week Program
ಬೆಳಗಾವಿ, 04 : ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಡಿ ರುಕ್ಮಿಣಿ ನಗರ ವಲಯ 1ರ ವ್ಯಾಪ್ತಿಯಲ್ಲಿ ಬರುವ ಹಳೆ ಗಾಂಧಿ ನಗರ ಅಂಗನವಾಡಿ ಕೇಂದ್ರ 135ರಲ್ಲಿ ಸ್ತನಪಾನ ಸಪ್ತಾಹ ಕಾರ್ಯಕ್ರಮವನ್ನು ದಿ. 4ರಂದು ಹಮ್ಮಿಕೊಳ್ಳಲಾಗಿತ್ತು.. ಅಂಗನವಾಡಿ ವಲಯದ ಮೇಲ್ವಿಚಾರಕಿ ಶಾಂತಾ ವಾಯ್ ಗುಡಿ ಇವರು ಭಾಗ್ಯಲಕ್ಷ್ಮೀ, ಪರಿಪಕ್ವ, ಮಾತೃವಂದನಾ, ಗೃಹಲಕ್ಷ್ಮೀ ಸೇರಿದಂತೆ ಇಲಾಖೆಯ ವಿವಿಧ ಯೋಜನೆಗಳ ಕುರಿತು ವಿವರಿಸಿದರು. ಬಾಲವಿಕಾಸ ಸಮಿತಿ ಅಧ್ಯಕ್ಷೆ ಕಲ್ಪನಾ ಸಾವಂತ ಇವರು ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಅನ್ನಪೂರ್ಣ ಮಾಸಕರ, ಶಿಲ್ಪಾ ಮರಚನ್ನವರ, ಆಗಮಿಸಿದ್ದರು. ಕಾರ್ಯಕರ್ತೆ ಅನಿತಾ ಕಾಮನ್ನಾಚೆ ನಿರೂಪಿದರು. ಕಾರ್ಯಕರ್ತೆ ರೇಖಾ ಕುರಾಡೆ ವಂದಿಸಿದರು, ಕಾರ್ಯಕ್ರಮದಲ್ಲಿ ಕಾರ್ಯಕರ್ತೆಯರು, ಸಹಾಯಕಿಯರು, ಪೋಷಕರು ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.