ಶಾಸಕರ ಸಹಾಯ ಧನದಿಂದ ಕೊಳವೆಬಾವಿ
ಗುರ್ಲಾಪೂರ 30 : ಮೂಡಲಗಿ ತಾಲೂಕಿನ ಯಾದವಾಡ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ನೀರಿನ ಸೌಲಭ್ಯಕ್ಕಾಗಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ತಮ್ಮ ಸ್ವಂತ ಹಣದಲ್ಲಿ ಕೊಳವೆ ಬಾವಿಗೆ (ಬೋರ್ ವೆಲ್) ಕೊಲೆಯಲು ಸಹಾಯ ಮಾಡಿದ್ದಾರೆ.ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನೀರಿನ ಕೊರತೆ ಇದೆ ಎಂದೂ ಶಾಸಕರ ಗಮನಕ್ಕೆ ತಂದಾಕ್ಷಣ, ಒಂದೇ ದಿನದಲ್ಲಿ ಸಮಸ್ಯೆಗೆ ಪರಿಹಾರ ನೀಡಿದ್ದಾರೆ ಅಂತ ಮಾಜಿ ಉಪಾಧ್ಯಕ್ಷರಾದ ಕಲ್ಮೇಶ ಗಾಣಿಗಿ ಸಂತೋಷ ವ್ಯಕ್ತಪಡಿಸಿದರು.
ಕೊಳವೆಬಾವಿ ಪೂಜೆಯಲ್ಲಿ ಭಾಗಿಯಾಗಿ ಮಾತನಾಡಿದರು, ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವ ನಿಟ್ಟಿನಲ್ಲಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರು ತಮ್ಮ ಸ್ವಂತ ಹಣದಲ್ಲಿ ಕೊಳವೆಬಾವಿ ಕೊರೆಯುವುದಕ್ಕೆ ಸಹಾಯ ಮಾಡಿದ್ದಾರೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ, ಕೈಗೊಂಡಿರುವ ಈಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆವ್ಯಕ್ತಪಡಿಸಿದಾರೆ. ಕೊಳವೆಭಾವಿ ನಿರ್ಮಾಣದಿಂದ ಶಾಲೆಯ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗೆ ನಿರಂತರವಾಗಿ ನೀರಿನ ಸೌಲಭ್ಯ ದೊರೆತಂತಾಗಿದೆ.
ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಶಾಸಕರ ಮೊದಲು ಆದ್ಯತೆಯಾಗಿದ್ದು. ಶಾಲೆಯ ಅಗತ್ಯಗಳಿಗೆ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರು ಸದಾ ಸ್ಪಂದಿಸುವರು ಎಂದರು. ವೆಂಕಟೇಶ ದಾಸರ, ಬಸವರಾಜ ಕೇರಿ, ಶಿವ ಬಸು ಗಾಣಿಗಿ, ಭೀಮಶಿ ಮೋಳ್ಯಾಗೋಳ, ನಿಲಯ ಪಾಲಕ, ಚನ್ನಬಸು ತೋಟಗಿ, ಪ್ರಾಚಾರ್ಯ ಜಿ.ಎಮ್.ಸಕ್ರಿ, ಶಿಕ್ಷಕರಾದ ವಿ.ಎಸ್.ವಾಲೀಕಾರ, ಜಿ.ಪಿ.ಕೋಳಿ, ಸತೀಶ ಬಾಗಿ, ಲಕ್ಕಪ್ಪ ದಾಸವಾಳ, ವಿಜಯ ಚಾಂದಾವರಿ ಇನ್ನು ಅನೇಕರು ಭಾಗಿಯಾಗಿದ್ದರು.