ಬೈಲಹೊಂಗಲ

ಭೂತಮಟ್ಟದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಶ್ರಮಿಸಿ: ತೆಂಗಿನಕಾಯಿ

ಭೂತಮಟ್ಟದಲ್ಲಿ ಪಕ್ಷವನ್ನು ಮತ್ತಷ್ಟು  ಬಲಪಡಿಸಲು ಶ್ರಮಿಸಿ: ತೆಂಗಿನಕಾಯಿ

ಬೈಲಹೊಂಗಲ 24: ಲಕ್ಷಾಂತರ ಕಾರ್ಯಕರ್ತರು ತಮ್ಮ ಪರಿಶ್ರಮದೊಂದಿಗೆ  ಬಿಜೆಪಿ ಪಕ್ಷದ ಗೆಲುವಿಗಾಗಿ ದುಡಿಯುತ್ತಿರುವದರಿಂದ ಇಂದು ಬಿಜೆಪಿ ಪ್ರಪಂಚದಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ, ಈ ನಿಟ್ಟಿನಲ್ಲಿ ಭೂತಮಟ್ಟದಲ್ಲಿ ಕಾರ್ಯಕರ್ತರು ಪಕ್ಷವನ್ನು ಮತ್ತಷ್ಟು  ಬಲಪಡಿಸಲು ಶ್ರಮಿಸಬೇಕೆಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ ಹೇಳಿದರು. 

ಅವರು ಮಂಗಳವಾರ ಪಟ್ಟಣದ ಬ್ಯಾಡ್ಮಿಂಟನ್ ಹಾಲದಲ್ಲಿ  ಮಂಡಲದ  ಪದಾಧಿಕಾರಿಗಳ, ಮಹಾಶಕ್ತಿ ಕೇಂದ್ರ, ಶಕ್ತಿ  ಕೇಂದ್ರ ಹಾಗೂ ಬೂತ್ ಅಧ್ಯಕ್ಷರ ಸಮಾವೇಶ ಉದ್ಘಾಟಸಿ ಮಾತನಾಡಿ, ಬಿಜೆಪಿ ಕಾರ್ಯಕರ್ತರ ಪರಿಶ್ರಮದಿಂದ ಇಂದು ಅನೇಕರು ನಾಯಕರಾಗುತ್ತಿದ್ದಾರೆ. ನಿಮ್ಮೆಲ್ಲರ ಪರಿಶ್ರಮದಿಂದ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 17 ವರ್ಷದಿಂದ ಸಂಸದರಾಗಿ ಕೇಂದ್ರ ರೈಲ್ವೆ ಸಚಿವರಾಗಿ ಉತ್ತಮ ಕಾರ್ಯಗಳನ್ನು ಮಾಡುವುದರೊಂದಿಗೆ ಈ ಭಾಗದ ಅಭಿವೃದ್ಧಿ ಹರಿಕಾರ ಸುರೇಶ್ ಅಂಗಡಿ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಲೋಕಸಭಾ ಉಪಚುನಾವಣೆಯಲ್ಲಿ 5 ಲಕ್ಷಕ್ಕಿಂತ ಹೆಚ್ಚಿನ ಅಂತರದೊಂದಿಗೆ ಗೆಲುವು ಸಾಧಿಸಲು ನಿಮ್ಮ ಶ್ರಮ ಅಗತ್ಯವಾಗಿದೆ ಎಂದರು.

ಬಿಜೆಪಿ ಶಿಸ್ತುಬದ್ಧ ಪಕ್ಷವಾಗಿದ್ದು ಅಭ್ಯರ್ಥಿ ಆಯ್ಕೆ ಹಿರಿಯರ ಮೇಲಿದೆ. ಆದರೆ ಪಕ್ಷದ ಪದಾಧಿಕಾರಿಗಳು ಒಂದು ತಿಂಗಳಿಂದ ಬಿಜೆಪಿಯ ಚುನಾವಣಾ ತಯಾರಿ ನಡೆದಿದ್ದು ಎಲ್ಲಾ ಕಾರ್ಯಕರ್ತರನ್ನು ಅವರ ಜವಾಬ್ದಾರಿಗೆ ಅನುಗುಣವಾಗಿ ಜೋಡಿಸಲಾಗಿದೆ. ಈ ಉಪಚುನಾವಣೆಯಲ್ಲಿ ಬೈಲಹೊಂಗಲ ಮತಕ್ಷೇತ್ರದಿಂದ 50 ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆ ಕೊಡಬೇಕೆಂದರು. 

ಬೆಳಗಾವಿ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಸಂಜಯ್ ಪಾಟೀಲ್ ಮಾತನಾಡಿ, ಬಿಜೆಪಿ ಕಾರ್ಯಕರ್ತರಾದ ನಾವು ಅಭ್ಯರ್ಥಿಯ ಬಗ್ಗೆ ಕಾಯದೆ ಸದಾ ಪಕ್ಷದ ಪರವಾಗಿ ಕೆಲಸವನ್ನು ಮಾಡುತ್ತಿದ್ದೇವೆ. ಅನ್ಯ ಪಕ್ಷಗಳಿಗಿಂತ ನಮ್ಮ ಪಕ್ಷದ ಕಾರ್ಯಕರ್ತರು ದೇಶ ಸೇವೆ ಮಾಡುವ ಭಾವನೆಯಂತೆ ಪಕ್ಷದ ಕೆಲಸಗಳನ್ನು ಅತ್ಯಂತ ಶ್ರದ್ಧೆಯಿಂದ ಮಾಡುವುದರಿಂದ ಅತಿಹೆಚ್ಚಿನ ಮತಗಳ ಅಂತರದಲ್ಲಿ ಖಂಡಿತವಾಗಿ ವಿಜಯ ಸಾಧಿಸಲಿದ್ದೆವೆ ಎಂದರು.

ಬೆಳಗಾವಿ ವಿಭಾಗ ಸಂಘಟನಾತ್ಮಕ ಕಾರ್ಯದರ್ಶಿ ಪ್ರಕಾಶ್ ಅಕ್ಕಲಕೋಟ ಮಾತನಾಡಿ, ಪ್ರತಿಯೊಂದು ಮನೆಗೆ ನಮ್ಮ ಕಾರ್ಯಕರ್ತರು ಭೇಟಿಯಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಮನೆ, ಮನೆಗೆ ಮುಟ್ಟಿಸುವ ಕೆಲಸವಾಗಬೇಕು.  ಪ್ರತಿಯೊಂದು ಮತವು ಅತಿ ಅಮೂಲ್ಯ. ಮತದಾರರನ್ನು ಭೂತದವರೆಗೆ ಕರೆದೊಯ್ದು ಬಿಜೆಪಿಗೆ ಮತ ನೀಡುವಂತೆ ಅವರ ಮನಸ್ಸನ್ನು ಪರಿವರ್ತನೆ ಮಾಡುವತ್ತ ನಮ್ಮ ಪದಾಧಿಕಾರಿಗಳು ಕಾರ್ಯಕರ್ತರು ಪರಿಶ್ರಮ ಹಾಕಬೇಕೆಂದರೆ ಎಂದರು.

ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಮಾಜಿ ಶಾಸಕ ಜಗದೀಶ್ ಮೆಟಗುಡ್ ಮಾತನಾಡಿ, ಪಟ್ಟಣದ 12 ನೇ ವಾಡನ 9 ಪುರಸಭೆ ಮತ್ತು ಲೋಕಸಭಾ ಉಪಚುನಾವಣೆಗೆ ಕಾರ್ಯಕರ್ತರು ಸನ್ನದರಾಗಿ ಕೇಂದ್ರ, ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಪ್ರತಿ ಮನೆ, ಮನೆಗಳಿಗೆ ಮುಟ್ಟಿಸಿ ಮತದಾರರ ಮನವೊಲಿಸಿ ಹೆಚ್ಚಿನ ಮತಗಳನ್ನು ನೀಡಿ, ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕೆಂದರು. 

ವೇದಿಕೆ ಮೇಲೆ ಜಿಲ್ಲಾ ಪ್ರಭಾರಿ ಮಾಜಿ ಸಚಿವ  ಶಶಿಕಾಂತ್ ನಾಯಕ, ವಿಭಾಗದ ಸಹನ ಸಂಘಟನಾ ಕಾರ್ಯದರ್ಶಿ ಬಸವರಾಜ ಯಂಕಂಚಿ,  ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಮೋಹಿತೆ, ಸುಭಾಷ ಪಾಟೀಲ್, ಸಂದೀಪ್ ದೇಶಪಾಂಡೆ, ಖಜಾಂಚಿ ಮಲ್ಲಿಕಾರ್ಜುನ್ ಮಾಧಮ್ಮನವರ , ಜಿಲ್ಲಾ ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡರ, ಜಿಲ್ಲಾ ಸಾಮಾಜಿಕತಾಣ ಸಂಚಾಲಕ ನಿತಿನ ಚೌಗಲೆ, ಉಪಾಧ್ಯಕ್ಷ ರತ್ನಾ ಗೋಧಿ, ಪುರಸಭೆ ಸದಸ್ಯ  ಗುರು ಮೆಟಗುಡ್, ಬಿಜೆಪಿ ಮುಖಂಡ ಗುರುಪಾದ ಕಳ್ಳಿ, ಯುವ ಮೊರ್ಚಾ ಅಧ್ಯಕ್ಷ ಬಸವರಾಜ್ ನೇಸರಗಿ, ಮಾಜಿ ಅಧ್ಯಕ್ಷ ಮಡಿವಾಳಪ್ಪ ಹೋಟಿ ಪ್ರಧಾನ ಕಾರ್ಯದರ್ಶಿಗಳಾದ ಲಕ್ಕಪ್ಪ ಕಾರ್ಗಿ, ಮಲ್ಲಿಕಾರ್ಜುನ್ ದೇಸಾಯಿ ಮುಂತಾದವರು ಇದ್ದರು.

ವಿಜಯ ಮೆಟಗುಡ್,  ಜಿಪಂ ಸದಸ್ಯ ಜಿಪಂ ಸದಸ್ಯ ಬಸವರಾಜ್ ಬಂಡಿವಡ್ಡರ್, ತಾಪಂ ಸದಸ್ಯ ಸುರೇಶ್ ಮ್ಯಾಕಲ್, ಶಿವಾನಂದ್ ಪೂಜಾರಿ, ಪುರಸಭೆ ಸದಸ್ಯರಾದ ಬಸವರಾಜ ಶಿಂತ್ರಿ, ಮಹೇಶ್ ಹರಕುಣಿ, ಸುನಿಲ್ ಮರಕುಂಬಿ,  ಪ್ರಕಾಶ್ ಭರಮಗೌಡರ, ಭರಮನಾಯ್ಕ  ಮಲ್ಲೂರ್, ಗೌಡಪ್ಪ ಹೊಸಮನಿ ಸೇರಿದಂತೆ ನೂರಾರು ಪದಾಧಿಕಾರಿಗಳು ಇದ್ದರು.

ಅಧ್ಯಕ್ಷ ಮಡಿವಾಳಪ್ಪ ಚಳಕೊಪ್ಪ ಸ್ವಾಗತಿಸಿದರು, ಮಲ್ಲಿಕಾರ್ಜುನ್ ಗೌಡತಿ ನಿರೂಪಿಸಿದರು,  ಸಂತೋಷ ಹಡಪದ ವಂದಿಸಿದರು.

ಸುದ್ದಿ ಓದಿ