ರಾಣೆಬೆನ್ನೂರ

ಬೂತ್ ಸದಸ್ಯರ ಪದಗ್ರಹಣ ಕಾರ್ಯಕರ್ತರ ಸಮಾವೇಶ

ಬೂತ್ ಸದಸ್ಯರ ಪದಗ್ರಹಣ ಕಾರ್ಯಕರ್ತರ ಸಮಾವೇಶ

ರಾಣೆಬೆನ್ನೂರು 26: ವಿಧಾನ ಸಭಾ  ಕ್ಷೇತ್ರದ ಕ್ಷೇತ್ರದ ಮತದಾರರು ಈ ಬಾರಿ ಸಂಪೂರ್ಣ ಬದಲಾವಣೆ ಬಯಸಿದ್ದಾರೆ. ತಾವು ಸಹ  ಚುನಾವಣೆ ಸ್ಪರ್ಧೆಗೆ ಮುಂದಾಗಿದ್ದು ತಾಲೂಕಿನ ಜನತೆ ತಮಗೆ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿ, ಯುವ ಸಮುದಾಯ ತಮ್ಮ ಗೆಲುವಿಗೆ ಕಂಕಣಕಟ್ಟಿ ನಿಂತಿದ್ದಾರೆ  ಎಂದು ನವಯುಗ -2023 ಸಂಸ್ಥಾಪಕ, ಯುವರಾಜಕಾರಣಿ ಸಂತೋಷಕುಮಾರ್ ಪಾಟೀಲ್ ಹೇಳಿದರು. 

 ಅವರು ಸೋಮವಾರ ನಗರ ಹೂರ ವಲಯದ ಲಲಿತ ಭವನದಲ್ಲಿ ನಡೆದ ಭೂತ ಸದಸ್ಯರ ಪದಗ್ರಹಣ ಹಾಗೂ ಯುವ ಕಾರ್ಯಕರ್ತರ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಡಳಿತ ಪಕ್ಷಗಳು ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ರಾಜಕೀಯ ಐತಿಹಾಸಿಕ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದಿರುವ ತಮಗೆ ರಾಜಕೀಯ ಹೊಸದಲ್ಲ ಹೀಗಾಗಿ ಕಳೆದ ವರ್ಷದಿಂದ, ಸಾಂಘೀಕವಾಗಿ ಜನ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ ಎಂದರು.  

ಸಂಘಟನೆಯಲ್ಲಿ ತಾಲೂಕಿನ ಹಿರಿಯ ಮುಖಂಡರು ಸೇರಿದಂತೆ ಶೇಕಡಾ 80ರಷ್ಟು ಸಮಾನ ಮನಸ್ಕ ಯುವಕರು ತಮ್ಮೊಂದಿಗೆ ಕೈಜೋಡಿಸಿದ್ದಾರೆ, ಸ್ಪರ್ಧೆಗೆ ಇಳಿದರೆ ಗೆಲುವು ಖಂಡಿತ ಇದೆ ಅದರಲ್ಲಿ ಯಾವುದೇ ಸಂಶಯ  ಬೇಡ, ಎಂದ ಸಂತೋಷ್ ಕುಮಾರ್ ಪಾಟೀಲ್ ಅವರು, ಜನಮನ್ನಣೆ ಪಡೆದು  ಚುನಾವಣೆಗೆ ಧುಮುಕಲು  ಸನ್ನದ್ದನಾಗಿದ್ದೇನೆ. ವೇದಿಕೆ ಸಿದ್ಧವಾಗಿದೆ ಪಕ್ಷದಿಂದಲೂ  ಅಥವಾ ಪಕ್ಷೇತರವಾಗಿಯೂ ಎನ್ನುವುದನ್ನು ಕಾಲವೇ ನಿರ್ಣಯಿಸುತ್ತದೆ ಎಂದರು. 

 ದಿವ್ಯ ಸಾನಿಧ್ಯ ವಹಿಸಿದ್ದ ದೊಡ್ಡಪೇಟೆ ಪುಟ್ಟಯ್ಯನ ವಿರಕ್ತ ಮಠದ ಶ್ರೀ ಗುರುಬಸವ ಸ್ವಾಮೀಜಿ ಅವರು ಮಾತನಾಡಿ, ಸಮಾಜ ಸೇವೆಗೆ ಪ್ರತಿಯೊಬ್ಬ ನಾಗರಿಕರು ಮುಂಗಾದಾಗ ಮಾತ್ರ  ದೇಶದ ಅಭಿವೃದ್ಧಿ ಸಾಧ್ಯವಿದೆ ಎಂದ ಶ್ರೀಗಳು, ರಾಜಕೀಯ ಎಂದಿಗೂ ನಿಂತ ನೀರಲ್ಲ ಅದು ಸದಾಕಾಲ ಹರಿಯುವ ಗಂಗೆ  ಇದ್ದ ಹಾಗೆ, ಯುವ ಜನಾಂಗ ರಾಜಕೀಯಕ್ಕೆ  ಬಂದಾಗ ಸಾಮಾಜಿಕ ನ್ಯಾಯ ದೊರೆಯಲಿದೆ ಎಂದರು.  

ತಾಲೂಕಿನ 180 ಭೂತಗಳ ಸದಸ್ಯರಿಗೆ ಅಧಿಕೃತವಾಗಿ ಪ್ರಮಾಣ ಪತ್ರವನ್ನು ವಿತರಿಸುವುದರ ಮೂಲಕ ಅವರನ್ನು ನವಯುಗ ಕ್ಕೆ ಬರಮಾಡಿಕೊಂಡು ಅಭಿನಂದಿಸಿ ಗೌರವಿಸಲಾಯಿತು. ನವಯುಗ ಅಧ್ಯಕ್ಷ, ಯುವ ಮುಖಂಡ ಯುವರಾಜ್ ಬಾರಟಕ್ಕೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 

 ಕಾರ್ಯಕ್ರಮದಲ್ಲಿ ವಿವಿಧ ಗ್ರಾಮಗಳ ಮುಖಂಡರಾದ ಸಿದ್ದನಗೌಡ ಪಾಟೀಲ್, ಶುಭಾಷ್ ಗೊಲ್ಲರ್, ಅಶೋಕ್ ಪಾಟೀಲ್, ಉಮೇಶ್ ಬಾರ್ಕಿ ತಿಮ್ಮನ ಗೌಡ ಪಾಟೀಲ,ನಾಗಣ್ಣ ಮಂಜಣ್ಣ ಕ್ಯಾತರಿ, ಸಿದ್ದಪ್ಪ ಶೆಟ್ಟರ್, ಕುಮಾರ್ ಶೆಟ್ಟರ್, ಸಿದ್ದಲಿಂಗಯ್ಯ ಮಠದ, ಬಸನಗೌಡ ಪಾಟೀಲ್, ಗಣೇಶ್ ಗಡ್ಡೇರ, ಶಂಕರಗೌಡ ಎಡಚಿ, ಚರಣ್ ಅಂಗಡಿ, ಬಸವರಾಜ ಕರೂರ್, ಶಿವಕುಮಾರ್ ಹಿರೇಬಿದರಿ, ವೀರಯ್ಯ ಪಾಟೀಲ್, ಮಂಜು ಸಿರೆಗೇರಿ, ಗದಿಗೆಪ್ಪ ಬುಡಮಣ್ಣನವರ್, ಮಾರುತಿ ಹುಲ್ಮನಿ, ಶಶಿ ಜಾಧವ್ ಎಂ.ಬಿ. ಪಾಟೀಲ್, ಆಪ್ತ ಸಹಾಯಕ ಆಸಿಫ್ ನವಾಜ್ ಖತಿಬ್,ದಾದಾಪೀರ್ ಕೊಳೂರು, ಅಮಾನುಲ್ಲಾ ಪಠಾಣ., ಇಬ್ರಾಹಿಂ ನೀಲಗಾರ್, ಅಪ್ರೋಜ್ ಕಲ್ಮನಿ, ಖತಿಬ್ ಸೌದಾಗರ್  ಜಾತನ್ ಗೌಡ್ರು, ದೇವೇಂದ್ರಗೌಡ್ರ, ಸೇರಿದಂತೆ ಮತ್ತಿತರ ಗಣ್ಯರು ನವಯುಗದ ನೂರಾರು ಯುವ ಮುಖಂಡರು, ಕಾರ್ಯಕರ್ತರು ಹಿರಿಯ ಗಣ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ