ಮಾನವೀಯ ಮೌಲ್ಯಗಳು ಅಡಕವಾದಾಗ ಸಮುದಾಯದಲ್ಲಿ ನೆಮ್ಮದಿ ಸಾಧ್ಯ : ಡೋಣೂರ
ಸಿಂದಗಿ11: ಪ್ರತಿಯೊಬ್ಬರಲ್ಲಿ ಮಾನವೀಯ ಮೌಲ್ಯಗಳು ಅಡಕವಾದಾಗ ಮಾತ್ರ ಸಮುದಾಯದಲ್ಲಿ ನೆಮ್ಮದಿ ಕಾಣಲು ಸಾಧ್ಯ ಎಂದು ಕಲಬುರಗಿಯ ಕೇಂದ್ರಿಯ ವಿಶ್ವವಿದ್ಯಾಲಯದ ಕಲಸಚಿವ ಡಾ.ಬಸವರಾಜ ಡೋಣೂರ ಹೇಳಿದರು.
ಶನಿವಾರ ಪಟ್ಟಣದ ಪಿಇಎಸ್ ಕಾಲೇಜಿನ ಸಭಾಭವನದಲ್ಲಿ ಪಿಇಎಸ್ ಸಂಸ್ಥೆ ಸಿಂಧಗಿ, ಲಾಯನ್ಸ್ ಕ್ಲಬ್ ಸಿಂದಗಿ ಹಾಘೂ ಮಾತೋಶ್ರೀ ಗುರುಬಸಮ್ಮ ಹಣಮಂತ್ರಾಯ ಸೋಮಾಪೂರ ಸೇವಾ ಸಂಸ್ಥೆ ಸಿಂದಗಿ ಇವರ ಸಂಯುಕ್ತಾಶ್ರಯದಲ್ಲಿ ಲಾಯನ್ಸ್ ಕ್ಲಬ್ ತಾಲೂಕಾ ಅಧ್ಯಕ್ಷ ಕೆ.ಎಚ್. ಸೋಮಾಪೂರ ಅವರ ಪತಂಗ ಕಥಾ ಸಂಲನ, ಸಕ್ಕಾಸರಗಿ ಕತಾ ಸಂಕಲನ, ಗಂಗೆತ್ತು ಕವನ ಸಂಕಲನ ಈ ಮೂರು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಕೃತಿಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಮಾನವೀಯ ಮೌಲ್ಯಗಳ ಬೆಳವಣಿಗೆಯಲ್ಲಿ ಮೌಲ್ಯಾಧಾರಿತ ಕೃತಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಮೌಲ್ಯಾಧಾರಿತ ಕೃತಿಗಳ ಅಧ್ಯಯನ ನಮ್ಮಲ್ಲಿ ಮೌಲ್ಯಗಳ ಶಕ್ತಿ ತುಂಬುತ್ತವೆ. ವಿಶ್ರಾಂತ ದೈಹಿಕ ನಿರ್ದೇಶಕ, ಲಾಯನ್ಸ್ ಕ್ಲಬ್ ತಾಲೂಕಾ ಅಧ್ಯಕ್ಷ ಕೆ.ಎಚ್. ಸೋಮಾಪೂರ ಅವರು ರಚಿಸಿದ ಮೂರು ಮೌಲ್ಯಾಧಾರಿತ ಕೃತಿಗಳು ಇಂದು ಲೋಕಾರ್ಪಣೆ ಗೊಂಡಿವೆ. ಇಂಧ ಕೃತಿಗಳು ಹೆಚ್ಚು ಹೆಚ್ಚು ಪ್ರಕಟವಾಗಬೇಕು. ಸಮುದಾಯದಲ್ಲಿ ಮೌಲ್ಯಗಳನ್ನು ಬೆಳೆಸುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಸಾನಿಧ್ಯ ವಹಿಸಿದ ಸ್ಥಳೀಯ ಸಾರಂಗಮಠ-ಗಚ್ಚಿನಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಮಾತನಾಡಿ, ಮೌಲ್ಯಾಧಾರಿತ ಕೃತಿಗಳನ್ನು ಮನುಷ್ಯನ್ನು ರೂಪಿಸುತ್ತವೆ. ವಿಶ್ರಾಂತಿ ಜೀವನದಲ್ಲಿ ಕ್ರೀಯಾಶೀಲರಾಗಿರುವ ಕೆ.ಎಚ್. ಸೋಮಾಪೂರ ಅವರ ಮೂರು ಕೃತಿಗಳು ಮೌಲ್ಯಾದಾರಿತ ಕೃತಿಗಳಾಗಿವೆ. ಅವು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬಲ್ಲವು. ಅವರಿಂದ ಇನ್ನೂ ಹೆಚ್ಚು ಹೆಚ್ಚು ಕೃತಿಗಳು ಸಾಹಿತ್ಯ ಲೋಕಕ್ಕೆ ಸೇರ್ಪಡೆಯಾಲಿ ಎಂದು ಶುಭ ಹಾರೈಸಿದರು.
ಕೆಂಭಾವಿಯ ಸರಕಾರಿ ಬಾಲಕಿಯರ ಪ್ರೌಢಶಾಲೆ ಶಿಕ್ಷಕ, ಸಾಹಿತಿ ನಿಂಗನಗೌಡ ದೇಸಾಯಿ ಅವರು ಪತಂಗ ಕಥಾ ಸಂಕಲನ, ಕಲಬುರಗಿಯ ವಿಶ್ರಾಂತ ಪ್ರಾಚಾರ್ಯ, ಹಿರಿಯ ಸಾಹಿತಿ ಡಾ.ಶ್ರೀಶೈಲ ನಾಗರಾಳ ಅವರು ಸಕ್ಕಾಸರಗಿ ಕಥಾ ಸಂಕಲನ, ಆಲಮೇಲದ ಹಿರಿಯ ಸಾಹಿತಿ ಸಿದ್ದರಾಮ ಉಪ್ಪಿನ ಅವರು ಗಂಗೆತ್ತು ಕವನ ಸಂಕಲನ ಕೃತಿಗಳನ್ನು ಅವಲೋಕನ ಮಾಡಿದರು.
ಅಧ್ಯಕ್ಷತೆ ವಹಿಸಿದ ಪಿಇಎಸ್ ಸಂಸ್ಥೆಯ ಗೌರವಕಾರ್ಯದರ್ಶಿ ಬಿ.ಪಿ. ಕರ್ಜಗಿ ಮಾತನಾಡಿ, ಮಾನವನ ಬದುಕಿಗೆ ಪುಸ್ತಕಗಳು ಸಾಕμÀ್ಟು ಮಾರ್ಗದರ್ಶನ ನೀಡುತ್ತವೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಕೆ.ಎಚ್. ಸೋಮಾಪುರ ಅವರು ರಚಿಸಿದ ಕೃತಿಗಳಲ್ಲಿ ಮೌಲ್ಯಗಳು ಅಡಗಿವೆ ಎಂದು ಹೇಳಿದರು.
ಲಾಯನ್ಸ್ ಕ್ಲಬ್ ತಾಲೂಕಾ ಅಧ್ಯಕ್ಷ ಕೆ.ಎಚ್. ಸೋಮಾಪೂರ ಅವರ ಪತಂಗ ಕಥಾ ಸಂಲನ, ಸಕ್ಕಾಸರಗಿ ಕತಾ ಸಂಕಲನ, ಗಂಗೆತ್ತು ಕವನ ಸಂಕಲನ ಈ ಮೂರು ಕೃತಿಗಳನ್ನು ಕಲಬುರಗಿಯ ಕೇಂದ್ರಿಯ ವಿಶ್ವವಿದ್ಯಾಲಯದ ಕಲಸಚಿವ ಡಾ.ಬಸವರಾಜ ಡೋಣೂರ ಅವರು ಲೋಕಾರ್ಪಣೆ ಮಾಡಿದರು.
ಲೇಖಕ, ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಎಚ್. ಸೋಮಾಪೂರ ಆಶಯ ನುಡಿಗಳನ್ನಾಡಿದರು. ಪ್ರಾಚಾರ್ಯ ಜಿ.ಎಸ್. ಕಡಣಿ, ಪ್ರಕಾಶಕ ಪ್ರಜ್ವಲರೆಡ್ಡಿ ಸೋಮಾಪೂರ, ಪ್ರಾಚಾರ್ಯ ಆರ್.ಬಿ. ಗೋಡಕರ ಅವರು ವೇದಿಕೆ ಮೇಲೆ ಇದ್ದರು.
ಕೃಷಿಕ ಸಮಾಜದ ತಾಲೂಕಾ ಅಧ್ಯಕ್ಷ ಶಿವಪ್ಪಗೌಡ ಬಿರಾದಾಡಿ, ಇಂಡಿ ಕ್ಷೇತ್ರ ಸಮನ್ವಯಾಧಿಕಾರಿ ಚಿದಾನಂಧ ಬಂಢಗಾರ, ಹಿರಿಯ ಸಾಹಿತಿ ಡಾ.ಚನ್ನಪ್ಪ ಕತ್ತಿ, ಸಾಹಿತಿ ಡಾ.ರಮೇಶ ಕತ್ತಿ, ಪ್ರಕಾಶ ಕೋರಿ, ಪ್ರೊ. ರ.ವಿ. ಗೋಲಾ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ, ಲೇಖಕ ಎಸ್.ಕೆ. ಗುಗ್ಗರಿ, ಎಂ.ಆರ್. ಲೋಣಿ, ಎಸ್.ಬಿ. ಚಾಗಶೆಟ್ಟಿ, ಎಸ್.ವಾಯ್. ಬೀಳಗಿ, ಪ್ರಾಚಾರ್ಯ ಎಂ.ಎಸ್. ಹಯ್ಯಾಳಕರ, ವಿಶ್ರಾಂತ ಪ್ರಾಚಾರ್ಯ ಬಿ.ಎಂ. ಬಿರಾದಾರ, ಚಂದ್ರಶೇಖರ ನಾಗರಬೆಟ್ಟ, ಶರಣಪ್ಪ ಕುರಡೆ, ಬಿ.ಜಿ. ಕಲಶೆಟ್ಟಿ, ಎಸ್.ಎಸ್. ಮಲ್ಲೇದ ಸೇರಿದಂದ ಪಿಇಎಸ್ ಸಂಸ್ಥೆಯ ಅಂಗ ಶಿಕ್ಷಣ ಸಂಸ್ಥೆಗಳ ಉಪನ್ಯಾಸಕರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಸಾಹಿತ್ಯಾಶಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಆಢಳಿತಾಧಿಕಾರಿ ಐ.ಬಿ. ಬಿರಾದಾರ ಸ್ವಾಗತಿಸಿದರು. ಜಿ.ಎಸ್. ಕಡಣಿ ನಿರೂಪಿಸಿದರು. ಬಸವರಾಜ ಸೋಮಾಪೂರ ವಂದಿಸಿದರು.