ಶಿಗ್ಗಾವ್

ಉಪಚುನಾವಣೆ ಕ್ಷೇತ್ರದ ಸಂಪೂರ್ಣ ಜವಾಬ್ದಾರಿ ಬೊಮ್ಮಾಯಿಯವರಿಗೆ ನೀಡಬೇಕು

ಉಪಚುನಾವಣೆ  ಕ್ಷೇತ್ರದ ಸಂಪೂರ್ಣ ಜವಾಬ್ದಾರಿ  ಬೊಮ್ಮಾಯಿಯವರಿಗೆ ನೀಡಬೇಕು

ಶಿಗ್ಗಾವಿ 13: ಕ್ಷೇತ್ರದ ಜನರ ನಾಡಿಮಿಡಿತಗಳನ್ನು ಅರಿತಿರುವ ಬಸವರಾಜ ಬೊಮ್ಮಾಯಿ ಕ್ಷೇತ್ರದ ಜನರ ಮನ ಮನಗಳಲ್ಲಿ ಅಚ್ಚಳಿಯದೇ ಹಾಗೇ ಮನೆಯ ಮಗನಾಗಿ ಉಳಿದಿದ್ದಾರೆ ಆದ್ದರಿಂದ ಉಪಚುನಾವಣೆಯಲ್ಲಿ  ಕ್ಷೇತ್ರದ ಸಂಪೂರ್ಣವಾದ ಜವಾಬ್ದಾರಿಯನ್ನು ಬಸವರಾಜ ಬೊಮ್ಮಾಯಿಯವರಿಗೆ ನೀಡಬೇಕು ಎಂದು ಪಕ್ಷದ ವರಿಷ್ಠರಿಗೆ ಭಾಜಪ ಮುಖಂಡ ಗಂಗಾಧರ ಸಾತಣ್ಣವರ ಆಗ್ರಹಿಸಿದರು. 

ಪಟ್ಟಣದ ಬಸವರಾಜ ಬೊಮ್ಮಾಯಿಯವರ ನಿವಾಸದಲ್ಲಿ ಸುದ್ದಿ ಘೋಷ್ಠಿ ಉದ್ದೇಸಿಶಿ ಮಾತನಾಡಿದ ಅವರು ಈ ಕ್ಷೇತ್ರವು 1952 ರಿಂದ 2008 ರವರೆಗೆ ಪಕ್ಷೇತರ, ಕಾಂಗ್ರೇಸ್, ಜೆ.ಡಿ.ಎಸ್ ಪಕ್ಷದವರೇ 40 ವರ್ಷಗಳ ಕಾಲ ಆಡಳಿತ ನಡೆಸಿದರು ಕೂಡಾ ನಂಜುಂಡಪ್ಪ ವರಧಿಯನ್ವಯ ಈ ಕ್ಷೇತ್ರವು ಹಿಂದುಳಿದ ಕ್ಷೇತ್ರವೆಂದು ಹಣೆಪಟ್ಟಿ ಇತ್ತು ಬೊಮ್ಮಾಯಿ ಆಡಳಿತ ಚುಕ್ಕಾಣೆ ಹಿಡಿದ ಮೇಲೆ ಕ್ಷೇತ್ರವನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸುವ ಮೂಲಕ ಹಿಂದುಳಿದ ಕ್ಷೇತ್ರ ಹಣೆಪಟ್ಟಿಯಿಂದ ಹೊರಗೆ ತಂದ ಕೀರ್ತಿ  ಬೊಮ್ಮಾಯಿಯವರಿಗೆ ಸಲ್ಲುತ್ತದೆ. 

ಆಕಾಂಕ್ಷಿ ಶಶಿದರ ಯಲಿಗಾರ ಮಾತನಾಡಿ ಕ್ಷೇತ್ರದ ಸಂಪೂರ್ಣವಾದ ಜವಾಬ್ದಾರಿಯನ್ನು ಬೊಮ್ಮಾಯಿಯವರಿಗೆ ನೀಡಬೇಕು ಆಗ ಮಾತ್ರ ಪಕ್ಷದ ಅಭ್ಯರ್ಥಿ ವಿಜಯ ಸಾಧಿಸಲು ಸಾಧ್ಯ ಇಲ್ಲವಾದಲ್ಲಿ ಕ್ಷೇತ್ರವನ್ನು ಉಳಿಸಿಕೊಳ್ಳುವುದು ಬಹಳ ಕಷ್ಟದಾಯಕ ಎಂದರು. 

ದಲಿತಮುಖಂಡ ಡಿ.ಎಸ್‌.ಮಾಳಗಿ ಮಾತನಾಡಿ ಉಪಚುನಾವಣೆಯಲ್ಲಿ ನಾನು ಆಕಾಂಕ್ಷಿ ಬೊಮ್ಮಾಯಿ ಯಾರ ಹೆಸರನ್ನು ಅಂತಿಮ ಗೋಳಿಸುತ್ತಾರೆ ಅವರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಬೇಕು  ಹಾಗೂ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ 100 ಕೋಟಿ ಅನುದಾನವನ್ನು ಕೊಟ್ಟಿದ್ದೇವೆ ಎಂದು ತಪ್ಪು ಕಲ್ಪನೆಯನ್ನು ಬಿಂಬಿಸಿದ್ದಾರೆ ಅದಲ್ಲದೇ ಬೊಮ್ಮಾಯಿಯವರು ಕ್ಷೇತ್ರಕ್ಕೆ 300 ಕೋಟಿ ಬಿಡುಗಡೆ ಮಾಡಿದ ಹಣವನ್ನು ರದ್ದು ಪಡಿಸಿದ ಕಾಂಗ್ರೇಸ ಸರಕಾರಕ್ಕೆ ನಾಚಿಕೆಯಾಗಬೇಕು ಎಂದು ಹರಿಹಾಯ್ದರು.  

ಶಿವಪ್ರಸಾದ ಸುರಗೀಮಠ ಮಾತನಾಡಿ ಬಸವರಾಜ ಬೊಮ್ಮಾಯಿಯವರು ನೇತೃತ್ವದಲ್ಲಿ ಉಪ ಚುನಾವಣೆ ನಡೆಯಬೇಕು ಎಂದರು. ಡಾ.ಶೋಭಾ ನಿಸ್ಸಿಮಗೌಡ್ರ, ಗಂಗಾಧರ ಬಾಣದ, ಸುಭಾಸ ಚವ್ಹಾಣ, ಶಶೀಧರ ಹೊನ್ನಣ್ಣವರ, ನವೀನ ರಾಮಗೇರಿ ಮಾತನಾಡಿದರು. 

ಪುರಸಭೆ ಅದ್ಯಕ್ಷ ಸಿದ್ದಾರ್ಥಗೌಡ ಪಾಟೀಲ, ವಿಶ್ವನಾಥ ಹರವಿ, ಹನುಮಂತ ಮುದಿಗೌಡ್ರ, ಗಂಗಾಧರ ಬಾಣದ, ಡಾ.ಮಲ್ಲೇಶಪ್ಪ ಹರಿಜನ, ಪರುಶರಾಮ ಸೊನ್ನದ, ರಮೇಶ ವನಹಳ್ಳಿ, ದಯಾನಂದ ಅಕ್ಕಿ, ಮಂಜುನಾಥ ಬ್ಯಾಹಟ್ಟಿ, ಸಂತೋಷ ದೊಡ್ಡಮನಿ, ಹೊನ್ನಪ್ಪ ಹೂಗಾರ, ಶಿವಶಂಕರ ಗೌರಿಮಠ, ಪ್ರತೀಕ ಕೊಳೇಕರ, ಸಂತೋಷಗೌಡ ಪಾಟೀಲ, ಮಲ್ಲಿಕಾರ್ಜುನ ಹಡಪದ, ಮಂಜುನಾಥ ಮಿರ್ಜಿ ಸೇರಿದಂತೆ ಬೊಮ್ಮಾಯಿ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು. ರೇಣುಕನಗೌಡ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು. 


ಸುದ್ದಿ ಓದಿ