ಶಿಗ್ಗಾವ್

ಸಿದ್ದರಾಮಯ್ಯ ಆರೋಪಕ್ಕೆ ಬೊಮ್ಮಾಯಿ ತಿರುಗೇಟು

ಸಿದ್ದರಾಮಯ್ಯ ಆರೋಪಕ್ಕೆ ಬೊಮ್ಮಾಯಿ ತಿರುಗೇಟು

ಸಿದ್ದರಾಮಯ್ಯ ಆರೋಪಕ್ಕೆ ಬೊಮ್ಮಾಯಿ ತಿರುಗೇಟು 

ಶಿಗ್ಗಾವಿ 05: ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಗ್ಗಾವಿ ಸವಣೂರು ಕ್ಷೇತ್ರದಲ್ಲಿ ಒಂದೇ ಒಂದು ಮನೆ ಕಟ್ಟಿಸಿಲ್ಲ ಮಾಡಿದ್ದ ಆರೋಪಕ್ಕೆ  ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪ್ರವಾಹದ ಸಂದರ್ಭದಲ್ಲಿ ಶಿಗ್ಗಾವಿ ತಾಲೂಕಿನ ಹಿರೇಮಣಕಟ್ಟಿ ಗ್ರಾಮದಲ್ಲಿ ತಮ್ಮ ಅವಧಿಯಲ್ಲಿ 5 ಲಕ್ಷ ರೂ. ನೀಡಿ ನಿರ್ಮಿಸಿದ ಮನೆಯ ಮುಂದೆ  ಫಲಾನುಭವಿಯೊಂದಿಗೆ ನಿಂತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.  

  ತಾಲೂಕಿನ ಹಿರೇಮಣಕಟ್ಟಿ ಒಂದೇ ಗ್ರಾಮದಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚು ಮನೆ ನಿರ್ಮಿಸಿದ್ದು, ಶಿಗ್ಗಾವಿ ಸವಣೂರು ಕ್ಷೇತ್ರದಲ್ಲಿ ಸುಮಾರು ಹನ್ನೇಡರಡುವರೇ ಸಾವಿರ ಮನೆ ನಿರ್ಮಿಸಿರುವುದಾಗಿ ಹಾಗೂ ಕರ್ನಾಟಕ ರಾಜ್ಯದ ಇತಿಹಾಸದಲ್ಲಿಯೇ ತಮ್ಮ ಅವಧಿಯಲ್ಲಿ ಅತಿ ಹೆಚ್ಚು ಮನೆ ನಿರ್ಮಿಸದ ಕೀರ್ತಿ ಬಸವರಾಜ ಬೊಮ್ಮಾಯಿಯವರಿಗೆ ಸಲ್ಲುತ್ತದೆ. ಈ ಸಂದರ್ಭದಲ್ಲಿ ಗ್ರಾಮಸ್ಥರು, ಕಾರ್ಯಕರ್ತರು, ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ