ಸಿಎಂ ಬೊಮ್ಮಾಯಿಯವರು ನುಡಿದಂತೆ ನಡೆದಿದ್ದಾರೆ: ಹಡಪದ
ಲೋಕದರ್ಶನ ವರದಿ
ಶಿಗ್ಗಾವಿ : ಹಡಪದ ಸಮಾಜದ ಬಹುದಿನಗಳ ಬೇಡಿಕೆಯಾಗಿದ ಹಡಪದ ಅಭಿವೃದ್ಧಿ ನಿಗಮನವನ್ನ ಸಿಎಂ ಬಸವರಾಜ ಬೊಮ್ಮಾಯಿಯವರು ಈಡೇರಿಸಿದ್ದು ಭರವಸೆ ನೀಡಿ ನುಡಿದಂತೆ ನಡೆದಿದ್ದಾರೆ ಎಂದು ಶಿಗ್ಗಾವಿ ತಾಲೂಕಾ ಹಡಪದ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಹಡಪದ ತಿಳಿಸಿದ್ದಾರೆ.
ಶಿಗ್ಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ಇತ್ತೀಚೆಗೆ ತಂಗಡಗಿ ಪೀಠದಲ್ಲಿ ನಡೆದ ಒಂದು ಲಕ್ಷಕ್ಕೂ ಹೆಚ್ಚು ಜನ ಸೇರಿದ್ದ ಹಡಪದ ಸಮಾಜದ ಜನಜಾಗೃತಿ ಸಮಾವೇಶದಲ್ಲಿ ಸಿಎಂ ಬೊಮ್ಮಾಯಿಯವರು ಭರವಸೆ ನೀಡಿದಂತೆ ಹಡಪದ ಅಭಿವೃದ್ಧಿ ನಿಗಮ ಮಾಡಿರುವುದು ಸಮಾಜದ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ಅವರ ತಳ ಸಮುದಾಯಗಳ ಬಗ್ಗೆ ಇರುವ ಖಾಳಜಿ ತೋರಿಸುತ್ತದೆ ಸಮಾಜದ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ ಎಂದರು.
ಶಿಗ್ಗಾವಿ ತಾಲೂಕಿನಲ್ಲಿಯೂ ಸಹಿತ ಹಡಪದ ಅಪ್ಪಣ್ಣ ಸಮಾಜದ ಬಗ್ಗೆ ಅಪಾರ ಖಾಳಜಿಯುಳ್ಳವರಾಗಿರುವ ಬೊಮ್ಮಾಯಿಯವರು ಕುನ್ನೂರ ಗ್ರಾಮದಲ್ಲಿ ಸಭಾಭವನ ನಿಮರ್ಾಣಕ್ಕೆ 10 ಲಕ್ಷ ಮತ್ತು ಸಂಸದ ಅನುದಾನದಲ್ಲಿ 5 ಲಕ್ಷ ನೀಡಿದ್ದು ಸಭಾಭವನ ಮತ್ತು ಅಪ್ಪಣ್ಣನವರ ದೇವಸ್ಥಾನ ನಿಮರ್ಾಣವಾಗಿ ಉದ್ಘಾಟನೆಗೆ ಸಿದ್ದವಾಗಿದೆ ಜೊತೆಗೆ ಕೆಂಗಾಪೂರದಲ್ಲಿ ಸಭಾಭವನ ನಿರ್ಮಾಣಕ್ಕೆ 16 ಲಕ್ಷಗಳನ್ನ ನೀಡಿದ್ದು ಸಮಾಜದ ಜೊತೆಗಿರುವ ಭರವಸೆ ನೀಡಿದ್ದಾರೆ ಎಂದರು.
ಗೌರವಾದ್ಯಕ್ಷ ಬಸವರಾಜ ಹಡಪದ, ಹಡಪದ ಅಪ್ಪಣ್ಣ ಕ್ರೇ,ಕೋ.ಆಫ್ ಸೊಸೈಟಿ ಅಧ್ಯಕ್ಷ ಮುತ್ತು ರಾಜ ಕ್ಷೌರದ, ಸಮಜದ ಉಪಾಧ್ಯಕ್ಷ ಶಿವರಾಜ ಕ್ಷೌರದ, ಕಾರ್ಯದರ್ಶಿ ರುದ್ರಪ್ಪ ಹಡಪದ, ಖಜಾಂಚಿ ಜಗದೀಶ ಹಡಪದ ಸಮಾಜದ ಭಾಂಧವರು ಇದ್ದರು