ಮನರಂಜನೆ

ಹಸೆಮಣೆಗೆ ಸಿದ್ದವಾದ ಬಾಲಿವುಡ್ ಬೆಡಗಿ ಕತ್ರಿನಾ ಕೈಫ್....

ಹಸೆಮಣೆಗೆ ಸಿದ್ದವಾದ  ಬಾಲಿವುಡ್ ಬೆಡಗಿ ಕತ್ರಿನಾ ಕೈಫ್....

ಮುಂಬೈ , ನ 18:  ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಮತ್ತು ವಿಕಿ ಕೌಶಲ್ ಅವರುಗಳು ಮುಂದಿನ ತಿಂಗಳು ಮದುವೆಯಾಗಲು ನಿಶ್ಚಯ ಮಾಡಿದ್ದಾರೆ. 

ಈ ವಿಷಯವನ್ನು ಬಾಲಿವುಡ್ ಬೆಡಗಿ ಕತ್ರಿನಾ ಕೈಫ್  ಬಹಿರಂಗಪಡಿಸಿದ್ದು ಜಗತ್ತಿನ ಸೆಲೆಬ್ರಿಟಿಗಳು ನಾಯಕರು ವಿವಾಹ ಕಾರ್ಯಕ್ರಮಕ್ಕೆ ಆಗಮಿಸಬೇಕು,ಸಾಕ್ಷಿಯಾಗಬೇಕು   ಎಂಬುದನ್ನು ಹೊರ ಹಾಕಿದ್ದಾರೆ ಎನ್ನಲಾಗಿದೆ. . 

ಈಗಾಗಲೇ ವಿಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಈ ಬಗ್ಗೆ ಮದುವೆ ಬಗ್ಗೆ ಮತ್ತು ಜೊತೆಜೊತೆಯಾಗಿ ಸುತ್ತಾಟದ ಬಗ್ಗೆ ಹಲವು ರೋಚಕ ವರದಿಗಳು ಕೇಳಿಬರುತ್ತಿದ್ದವು. ಈ ಸನ್ನಿವೇಶದಲ್ಲಿ ಮುಂದಿನ ತಿಂಗಳು ಹಸೆಮೆಣೆ ಏರುತ್ತಿರುವುದಾಗಿ  ಕತ್ರಿನಾ ಕೈಫ್  ಹೇಳಿಕೊಂಡಿದ್ದಾರೆ. 

ಅಂದಹಾಗೆ ಈ ಮದುವೆ ರಾಜಸ್ತಾನದಲ್ಲಿ  ನಡೆಯಲು ಕುಟುಂಬದ ಸದಸ್ಯರು ನಿರ್ಧಾರ ಮಾಡಿದ್ದಾರೆ ಇಬ್ಬರು  ತಮ್ಮ ಮದುವೆ ಅಚ್ಚುಕಟ್ಟಾಗಿ ನಡೆಯಬೇಕು ಎಂಬ ಉದ್ದೇಶದಿಂದ ಮದುವೆ ಸಿದ್ಧತೆಯಲ್ಲಿ ಸಕ್ರೀಯವಾಗಿ ತೊಡಗಿಕೊಂಡಿದ್ದಾರೆ ಎಂದೂ ಅವರ ಅಪ್ತರು  ಹೇಳುತ್ತಿದ್ದಾರೆ ಎನ್ನಲಾಗಿದೆ.   

ಸುದ್ದಿ ಓದಿ