ಬಾಲಿವುಡ್ ಡ್ರಗ್ಸ್ ಪ್ರಕರಣ.. ಶಾರುಖ್ ಖಾನ್ ರಿಂದ 50 ಲಕ್ಷ ಪಡೆದಿದ್ದರು...!.
ಮುಂಬೈ, ನ 4 : - ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಪಿತೂರಿ ನಡೆಸಿದ್ದ ಆರೋಪ ಎದುರಿಸುತ್ತಿರುವ ಸ್ಯಾಮ್ ಡಿಸೋಜಾ ಮತ್ತೊಂದು ಹೊಸ ವಿಷಯ ಬಹಿರಂಗಪಡಿಸಿದ್ದಾರೆ.
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಅಧಿಕಾರಿಗಳು ಹಡಗಿನ ಮೇಲೆ ದಾಳಿ ನಡೆಸಿದ ನಂತರ ಆರ್ಯನ್ ಖಾನ್ ಅವರನ್ನು ಬಿಟ್ಟು ಬಿಡಲು ಪ್ರಕರಣದ ಸಾಕ್ಷಿಯಾಗಿರುವ ಕಿರಣ್ ಗೋಸಾವಿ ಶಾರುಖ್ ಖಾನ್ ಮ್ಯಾನೇಜರ್ ಪೂಜಾ ದದ್ಲಾನಿ ಅವರಿಂದ 50 ಲಕ್ಷ ರೂ. ಪಡೆದುಕೊಂಡಿದ್ದರು ಎಂದು ಆರೋಪಿಸಿದ್ದಾರೆ. ಆದರೆ, ಎನ್ ಸಿ ಬಿ ಆರ್ಯನ್‌ನನ್ನು ಬಂಧಿಸಿದ ಕಾರಣ ನಂತರ ಹಣವನ್ನು ಅವರಿಗೆ ಹಿಂತಿರುಗಿಸಲಾಗಿದೆ. ಈ ವ್ಯವಹಾರದ ಮಧ್ಯಸ್ಥಿಕೆವಹಿಸಿದ್ದ ಎಂಬ ಅನುಮಾನಗಳಿರುವ ಸ್ಯಾಮ್‌ವಿಲ್ಲೆ ಡಿಸೋಜಾ ಈ ವಿಷಯ ಬಹಿರಂಗಪಡಿಸಿದ್ದಾರೆ.
ಆರ್ಯನ್ ಖಾನ್ ಬಿಡುಗಡೆಗೊಳಿಸಲು ಎನ್ ಸಿ ಬಿ ಅಧಿಕಾರಿಗಳ ಪರವಾಗಿ ಮಧ್ಯವರ್ತಿಗಳು 25 ಕೋಟಿ ರೂ.ಗೆ ಬೇಡಿಕೆ ಇರಿಸಿದ್ದರು ಎಂಬ ಆರೋಪಗಳು ಕೇಳಿಬಂದಿದ್ದವು. ಈ ಆರೋಪಗಳ ಸತ್ಯಾಸತ್ಯತೆ ತಿಳಿಯಲು ಮಹಾರಾಷ್ಟ್ರ ಸರ್ಕಾರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದೆ. ಇದೆಲ್ಲ ತಿಳಿದ ಸ್ಯಾಮ್ ಡಿಸೋಜಾ ಸಿಟ್ ತನ್ನನ್ನು ಬಂಧಿಸಲಿದೆ ಎಂಬ ಭಯದಿಂದ ಬಾಂಬೆ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಆರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಕಿರಣ್ ಗೋಸ್ವಾಮಿ ಹಾಗೂ ಪ್ರಭಾಕರ್ ಸಾಯಿಲ್ ಪ್ರಕರಣದಲ್ಲಿ ಸಾಕ್ಷಿಗಳಲ್ಲ, ಅವರೇ ನಿಜವಾದ ಸಂಚುಕೋರರು ಎಂದು ಡಿಸೋಜಾ ಆರೋಪಿಸಿದ್ದಾರೆ.