ಬೈಲಹೊಂಗಲ

ಸೋಮೇಶ್ವರ ಸಕ್ಕರೆ ಕಾರ್ಖಾನೆಯ ಬಾಯ್ಲರ್ ಪ್ರದೀಪನ ಪೂಜೆ

ಸೋಮೇಶ್ವರ ಸಕ್ಕರೆ ಕಾರ್ಖಾನೆಯ ಬಾಯ್ಲರ್ ಪ್ರದೀಪನ ಪೂಜೆ

ಬೈಲಹೊಂಗಲ 23: ಆಡಳಿತ ಮಂಡಳಿ, ಕಾರ್ಮಿಕರು, ರೈತರೆಲ್ಲರೂ ಸೇರಿಕೊಂಡು ಉತ್ತಮವಾಗಿ ಕಾರ್ಯ ನಿರ್ವಹಿಸಿದಲ್ಲಿ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಅಭಿವೃದ್ಧಿ ಪಥದತ್ತ ಸಾಗುತ್ತದೆ ಎಂದು ಬೈಲಹೊಂಗಲ ಮೂರುಸಾವಿರ ಮಠದ ಪ್ರಭು ನೀಲಕಂಠ ಸ್ವಾಮೀಜಿ ಹೇಳಿದರು. 

ಅವರು ಬುಧವಾರ ಸಮೀಪದ ಬೆಳವಡಿಯ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯ ಬಾಯ್ಲರ್ ಪ್ರದೀಪನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ದಿ. ರಮೇಶ ಬಾಳೇಕುಂದರಗಿ ಈ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಬೇಕೆಂದು ಕನಸು ಕಂಡು ಕಾರ್ಖಾನೆ ಸ್ಥಾಪಿಸಿ ಕನಸು ಸಾಕಾರಗೊಳಿಸಿದ್ದರು. ಇಲ್ಲಿ ಕಾರ್ಖಾನೆ ಸ್ಥಾಪನೆ ಮಾಡಿರುವದರಿಂದ ಕಾರ್ಮಿಕರ ಬದುಕಿಗೆ, ರೈತರು ಕಬ್ಬನ್ನು ಬೆಳೆಯಲು ಸಹಕಾರ ಮಾಡಿದರು. ಅವರ ಮಾರ್ಗದರ್ಶನದಲ್ಲಿ ಎಲ್ಲರೂ ಹೆಜ್ಜೆ ಹಾಕುವದು ಅವಶ್ಯವಾಗಿದೆ ಎಂದರು. 

ಜಡಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದಿ. ರಮೇಶ ಬಾಳೇಕುಂದರಗಿ ಬಹಳಷ್ಟು ಪರಿಶ್ರಮ ಪಟ್ಟು ನಿರ್ಮಿಸಿದ ಕಾರ್ಖಾನೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಎಲ್ಲರೂ ಸಹಕಾರ ನೀಡುವದು ಅವಶ್ಯವಾಗಿದೆ ಎಂದರು. 

ಹಿರಿಯ ನಿರ್ದೆಶಕ ಮಲ್ಲಪ್ಪ ಮುರಗೋಡ ಮಾತನಾಡಿ, ಈ ಭಾಗದ ರೈತರು ಒಳ್ಳೆಯ ಕಾರ್ಖಾನೆ ಎಂದು ಗುರುತಿಸಿ ಇಲ್ಲಿ ಸಾಕಷ್ಟು ಕಬ್ಬು ನುರಿಸಲು ಕಳಿಸುತ್ತಾರೆ. ಸಕ್ಕರೆ ಕಾರ್ಖಾನೆ ರೈತರ ಆಶಾಕಿರಣವಾಗಿ ಮುಂದುವರೆಯಲು  ವ್ಯವಸ್ಥಾಪಕ ನಿರ್ದೆಶಕರು, ಸಿಬ್ಬಂದಿ ಉತ್ತಮ ರೀತಿಯಿಂದ ಕಾರ್ಯ ನಿರ್ವಹಣೆ ಮಾಡಿ ಸಾಧನೆಯತ್ತ ಕೊಂಡೊಯ್ಯುತ್ತಿದ್ದಾರೆ. ಬೃಹತ್ ಪ್ರಮಾಣದಲ್ಲಿ ಮೊದಲ ಬಾರಿಗೆ ಇಥೆನಾಲ್ ಘಟಕ ಸ್ಥಾಪನೆಗೆ ಕಾರ್ಯಯೋಜನೆ ರೂಪಿಸಲಾಗುತ್ತಿದೆ ಎಂದರು. 

ತುರಮರಿ ಡಾ.ಮಹಾಂತೇಶಶಾಸ್ತ್ರೀ ಹಿರೇಮಠ ಹೋಮ, ಹವನ ಪೂಜೆ ನೇರವೇರಿಸಿದರು. ಅದೃಷ್ಯಪ್ಪ ಕೊಟಬಾಗಿ ದಂಪತಿಗಳು ಪೂಜೆ ನೆರವೇರಿಸಿದರು.  

ನಿರ್ದೆಶಕರಾದ ಗುರುಪುತ್ರ​‍್ಪ ಹೊಸಮನಿ, ನಿಂಗಪ್ಪ ಚೌಡನ್ನವರ, ಪಾರಿಶಪ್ಪ ಬಾಂವಿ, ಅಶೋಕ ಬಾಳೇಕುಂದರಗಿ, ಶಿವಪುತ್ರ​‍್ಪ ಅವ್ವಕ್ಕನ್ನವರ, ಮಲ್ಲಪ್ಪ ಯರಿಕಿತ್ತೂರ, ಕಾರ್ಖಾನೆ ಅಧೀಕ್ಷಕ ಅಶೋಕ ಬೊಮ್ಮನ್ನವರ, ಕಾರ್ಖಾನೆ ಸಿಬ್ಬಂದಿ, ರೈತರು ಪಾಲ್ಗೊಂಡಿದ್ದರು. 


ಸುದ್ದಿ ಓದಿ