ಕೋವಿಡ್ನಲ್ಲೂ ರಕ್ತದಾನ ನಿಜಕ್ಕೂ ಶ್ಲಾಘನೀಯ: ರುಕ್ಮಿಣಿ ಸಾವಕಾರ
ಲೋಕದರ್ಶನ ವರದಿ
ರಾಣಿಬೆನ್ನೂರ 28: ಕೋವಿಡ್ನ ಈ ಸಂದರ್ಭದಲ್ಲೂ ರಕ್ತದಾನ ಮಾಡುವುದು ಹಾಗೂ ಹತ್ತಾರು ಜೀವ ಗಳನ್ನು ಉಳಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ. ರಕ್ತವನ್ನು ಕೃತಕವಾಗಿ ತಯಾ ರಿಸಲು ಸಾಧ್ಯವಿಲ್ಲವಾದ್ದರಿಂದ ರಕ್ತದಾನವನ್ನೇ ಅವಲಂಭಿಸ ಬೇಕಾದ ಅನಿವಾರ್ಯತೆ ಉಂಟಾ ಗಿದೆ. ಆರೋಗ್ಯಯುತರಾದ ವಯಸ್ಕರು ಯಾವುದೇ ಅಡ್ಡ ಪರಿಣಾಮಗಳನ್ನು ಅನುಭವಿಸದೆ ರಕ್ತದಾನ ಮಾಡಬಹುದು ಎಂದು ಓಂ ಗ್ರೂಪ್ ಆಫ್ ಇನ್ಸಟ್ಯೂಟ್ ಷನ್ ಅಧ್ಯಕ್ಷೆ ರುಕ್ಮಿಣಿ ಸಾವಕಾರ ಹೇಳಿದರು.
ಬುಧವಾರದಂದು ನಗರದ ಹೊರವಲಯದ ಓಂ ಪಬ್ಲಿಕ್ ಪಿಯು ಕಾಲೇಜಿನಲ್ಲಿ ಓಂ ಗ್ರೂಪ್ ಆಫ್ ಇನ್ಸಿಟ್ಯೂಷನ್ಸ್ ಹಾಗೂ ರಾಣೇಬೆನ್ನೂರು ಬ್ಲಡ್ ಬ್ಯಾಂಕ್ ಇವರ ಸಹಯೋಗದಲ್ಲಿ 73ನೇ ಗಣರಾಜ್ಯೋತ್ಸವ ಪ್ರಯುಕ್ತ ಹಮ್ಮಿ ಕೊಳ್ಳಲಾದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕನಿಷ್ಠ ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡುವುದು ಉತ್ತಮ ಅಭ್ಯಾಸವಾಗಿದ್ದು, ರಕ್ತದಾನದ ಲಾಭ ಕುರಿತು ಜಾಗೃತಿಯನ್ನು ಮೂಡಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ದೇಶದಲ್ಲಿ ದಿನ ದಿಂದ ದಿನಕ್ಕೆ ರಕ್ತದ ಬೇಡಿಕೆ ಹೆಚ್ಚು ತ್ತಿದೆ. ಆದರೆ ದೈಹಿಕ ಕ್ಷಮತೆ ಇರು ವ ಅಪಾರ ಸಂಖ್ಯೆಯ ಜನರು ಸ್ವ ಇಚ್ಚೆಯಿಂದ ರಕ್ತದಾನ ಮಾಡ ಲು ಮುಂದೆ ಬಾರದೆ ಇರುವುದಕ್ಕೆ ಅವರಲ್ಲಿಯ ತಪ್ಪು ತಿಳುವಳಿಕೆಯೇ ಕಾರಣ ಎಂದರು.
ಓಂ ಸಮುಹ ಸಂಸ್ಥೆ ಕಾರ್ಯ ದರ್ಶಿ ಡಾಽ ಮನೋಜ್ ಸಾವು ಕಾರ ಮಾತನಾಡಿ, ಕರೋನಾ ಸೋಂಕಿನ ಭೀತಿ ಹಿನ್ನಲೆಯಲ್ಲಿ ರಕ್ತನಿಧಿ ಕೇಂದ್ರಗಳು ಬಂದ್ ಆಗಿ ರಕ್ತದ ಅಭಾವ ಸೃಷ್ಟಿಯಾಗಿದೆ. ರಕ್ತ ದಾನ ಮಾಡಿ ಆಪತ್ತಿನಲ್ಲಿರುವ ವ್ಯಕ್ತಿಯ ಜೀವ ಉಳಿಸಬೇಕು. ಹೆಚ್ಚುತ್ತಿರುವ ಅಪಘಾತ ಹಾಗೂ ಕೊರೋನಾ ಭಿತಿಯಿಂದ ರಕ್ತದ ಕೊರತೆ ಕಾಡುತ್ತಿರುವುದು ಸಹ ಹೆಚ್ಚಾಗಿದೆ ಎಂದರು.
ಆರೋಗ್ಯವಂತ ನಾಗರೀಕರು ರಕ್ತದಾನ ಮಾಡುವ್ಯದರಿಂದ ಗರ್ಭೀಣಿಯರು, ಅಪಘಾತದಲ್ಲಿ ಗಾಯಗೊಂಡವರ ಚಿಕಿತ್ಸೆಗೆ ಅನು ಕೂಲವಾಗಲಿದೆ. ಮನುಷ್ಯ ರಕ್ತ ನೀಡಿದರೆ ಸಣ್ಣಗಾಗುತ್ತಾನೆ ಅಲ್ಲದೇ ಪದೇಪದೇ ಅನಾರೋಗ್ಯಕ್ಕೀಡಾ ಗುತ್ತಾನೆಂಬ ತಪ್ಪು ಕಲ್ಪನೆ ಯಿಂದ ಹೊರಬರಬೇಕು. ರಕ್ತದಾನದಿಂದ ಆರೋಗ್ಯದ ಮೇಲೆ ಯಾವುದೇ ರೀತಿ ಅಡ್ಡ ಪರಿಣಾಮ ಉಂಟಾ ಗುವುದಿಲ್ಲ ಎಂದರು
ಕೈಗಾರಿಕೆ ವಾಣಿಜ್ಯ ಇಲಾಖೆ ಉಪ ನಿರ್ದೇಶಕ ವಿನಾ ಯಕ ಜೋಶಿ, ಶಿಲ್ಪಾ ಸಾವಕಾರ, ನಗರಸಭೆ ಪೌರಾಯುಕ್ತ ಟಿ. ಉದ ಯಕುಮಾರ, ಬ್ಲಡ್ ಬ್ಯಾಂಕಿನ ಶ್ರೀಧರ ಜಿಆರ್, ಡಾ. ಅಬ್ದುಲ್ ನಾಶೀರ, ಶಿವಕುಮಾರ, ಶರಣಪ್ಪ ಸೇರಿದಂತೆ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಮತ್ತು ಬ್ಲಡ್ ಬ್ಯಾಂಕಿನ ಸಿಬ್ಬಂದಿ ಗಳು ಮತ್ತಿತರರು ಇದ್ದರು. ರಕ್ತ ದಾನ ಮಾಡಿದ ಸರ್ವರಿಗೂ ಪ್ರಮಾಣ ಪತ್ರನೀಡಿ ಗೌರವಿ ಸಲಾಯಿತು.
ಓಂ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿಗಳು, ಸಾರ್ವಜನಿಕರು ಸೇರಿದಂತೆ ಒಟ್ಟು 102 ಜನರು ರಕ್ತದಾನ ಮಾಡಿದರು. 160ಕ್ಕೂ ಅಧಿಕ ರಕ್ರದ ಗುಂಪು ತಪಾಸಿಸಿ ಕೊಂಡರು. ವಿಶೇಷವಾಗಿ 14 ಮಹಿಳೆಯರು ರಕ್ತದಾನ ಮಾಡಿ ದರು. 65 ವರ್ಷದ ಮಹಿಳೆ ಹಾಗೂ ಸಂಸ್ಥೆಯ ಅಧ್ಯಕ್ಷೆ ರುಕ್ಮಿಣಿ ದೇವಿ ಸಾವಕಾರ, ಕಾರ್ಯದರ್ಶಿ ಡಾ.ಮನೋಜ ಸಾವಕಾರ, ಮುಖ್ಯಸ್ಥೆ ಶಿಲ್ಪಾ ಮನೋಜ ಸಾವ ಕಾರವರು ಏಕಕಾಕಲಕ್ಕೆ ರಕ್ತದಾನ ಮಾಡಿದ್ದು ವಿಶೇಷವಾಗಿತ್ತು.