ಬೈಲಹೊಂಗಲ

ರಕ್ತದ ಕೊರತೆ ನೀಗಿಸಲು ರಕ್ತದಾನ ಸಹಕಾರಿ: ಕೃಷ್ಣಭಟ್

ರಕ್ತದ ಕೊರತೆ ನೀಗಿಸಲು ರಕ್ತದಾನ ಸಹಕಾರಿ: ಕೃಷ್ಣಭಟ್

ಬೈಲಹೊಂಗಲ ನವೆಂಬರ್ 04: ರಕ್ತದ ಕೊರತೆಯಿಂದ ಜೀವನ್ಮರಣಗಳ ಮಧ್ಯೆ ಹೋರಾಡುತ್ತಿರುವರನ್ನು ರಕ್ತದಾನ ಮಾಡುವ ಮೂಲಕ ಬದುಕಿಸಲು ಸಾಧ್ಯ ಎಂದು ಉತ್ತರ ಕರ್ನಾಟಕ ಪ್ರಾಂತದ ವಿಶ್ವಹಿಂದೂ ಪರಿಷತ ಸಹ ಕೋಶಾಧ್ಯಕ್ಷ ಕೃಷ್ಣ ಭಟ್ ಹೇಳಿದರು.

ಅವರು ಪಟ್ಟಣದ ಗಣಾಚಾರಿ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಹಿಂದು ಪರಿಷದ್ ಹಾಗೂ ಬಜರಂಗ್ ದಳ ತಾಲೂಕು ಘಟಕದ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಬೃಹತ್ ರಕ್ತದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸಾನಿಧ್ಯ ವಹಿಸಿದ ಮೂರು ಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವಕರು ರಕ್ತದಾನ ಮಾಡುವದರ ಮುಖಾಂತರ ಇನ್ನೊಂದು ಜೀವಕ್ಕೆ ಜೀವದಾನ ಮಾಡುವದÀಕ್ಕೆ ಮುಂದಾಗಬೇಕು ಎಂದರು.

ಡಾ. ವiಹಾಂತಸ್ವಾಮಿ ಆರಾಧ್ರಿಮಠ ಡಾ. ಮಹಾಂತೇಶ ರಾಮಣ್ಣವರ. ಬೀಮ್ಸ ವೈದ್ಯಾಧಿಕಾರಿ ಸುನಿತಾ, ತಾಲೂಕಾ ಆರೋಗ್ಯಾಧಿಕಾರಿ ಡಾ. ಸಂಜಯ ಸಿದ್ದನ್ನವರ, ವಿಹಿಂಪ ಗೌರವ ಅಧ್ಯಕ್ಷ ಡಾ, ಚಿದಂಬರ ಕುಲಕರ್ಣಿ ವೇದಿಕೆಯಲ್ಲಿದ್ದರು.

ಡಾ. ಸಿ.ಬಿ. ಗಣಾಚಾರಿ, ಸಂತೋಷ ಕೊಳವಿ, ಡಾ. ಶರಣ ಅಂಗಡಿ, ಅಶೋಕ ಸವದತ್ತಿ, ಮಲ್ಲಿಕಾರ್ಜುನ ಎಣಗಿಮಠ, ವಿಶ್ವ ಹಿಂದು ಪರಿಷದ್À ಹಾಗು ಬಜರಂಗ ದಳದ ಮತ್ತು ಗ್ರಾಮಿಣ ಕಾರ್ಯಕರ್ತರು ಹಾಜರಿದ್ದರು. ಬಜರಂಗ ದಳದ ಮಂಜುನಾಥ ಜಾಧವ, ಗಂಗಾಧರ ತೋರಣಗಟ್ಟಿ, ಮಂಜುನಾಥ ಆದರಗಿ, ಗಂಗಪ್ಪ ವಣ್ಣೂರ, ಮಂಜುನಾಥ ಕಂಠಿ, ಮಹಾಂತೇಶ ಮಾಟನವರ, ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು. ಶಿಬಿರದಲ್ಲಿ ಸುಮಾರು 45ಕ್ಕೂ ಹೆಚ್ಚು ರಕ್ತದಾನಿಗಳು ರಕ್ತದಾನ ಮಾಡಿದರು.

ತಾಲೂಕು ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ ಸ್ವಾಗತಿಸಿದರು. ರಾಜು ಬಡಿಗೇರ ನಿರೂಪಿಸಿದರು. ಬಸವರಾಜ ಈಟಿ ವಂದಿಸಿದರು.

ಸುದ್ದಿ ಓದಿ