ಚಿಕ್ಕೋಡಿ

ಅಗ್ನಿಶಾಮಕದಳದಿಂದ ರಕ್ತದಾನ ಶ್ಲಾಘನೀಯ: ನೀಲಗಾರ

ಅಗ್ನಿಶಾಮಕದಳದಿಂದ ರಕ್ತದಾನ ಶ್ಲಾಘನೀಯ: ನೀಲಗಾರ

ಲೋಕದರ್ಶನ ವರದಿ 


ಚಿಕ್ಕೋಡಿ 09: ಎಲ್ಲ ದಾನಕ್ಕಿಂತ ರಕ್ತದಾನ ಮಿಗಿಲಾಗಿದ್ದು, ಆದಿಸೆಯಲ್ಲಿ ಅಗ್ನಿಶಾಮಕದಳವು ಕೇವಲ ಅಗ್ನಿ ನಂದಿಸಿ ಜನರ ಜೀವ ಉಳಿಸುವ ಬದಲು ರಕ್ತದಾನ ಮಾಡುವ ಮೂಲಕ ಜನರ ಜೀವದ ರಕ್ಷಣೆಗೆ ಮುಂದಾಗುತ್ತಿರುವುದು ಶ್ಲಾಘನೀಯವಾಗಿದೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಎಸ್‌.ಎಸ್‌.ನೀಲಗಾರ ಹೇಳಿದರು. 

ಇಲ್ಲಿನ ಅಗ್ನಿಶಾಮ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಮ್ಮಿಕೊಂಡ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.  

ಮುಖ್ಯ ಅತಿಥಿಗಳಾಗಿ ಆಗಮೀಸಿದ ತಾಲೂಕಾ ಆರೋಗ್ಯಾಧಿಕಾರಿ ಡಾ,ವಿಠ್ಠಲ ಶಿಂಧೆ ಮಾತನಾಡಿ, ಸಮಾಜದಲ್ಲಿ ಒಬ್ಬ ವ್ಯಕ್ತ ಆರೋಗ್ಯವಾಗಿರಲು ವರ್ಷದಲ್ಲಿ ಮೂರು ಬಾರಿ ರಕ್ತದಾನ ಮಾಡಬಹುದಾಗಿದೆ. ಹೆಚ್ಚು ಹೆಚ್ಚು ರಕ್ತದಾನ ಮಾಡುವುದರಿಂದ ಮನುಷ್ಯನ ಆರೋಗ್ಯ ಚೆನ್ನಾಗಿರುತ್ತದೆ. ರಕ್ತದಾನ ಮಾಡುವುದರಿಂದ ಮತ್ತೊಬ್ಬರ ಜೀವ ಉಳಿಸಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರು ರಕ್ತದಾನ ಮಾಡಲು ಮುಂದೆ ಬರಬೇಕು ಎಂದರು. 

ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ, ಸಂತೋಷ ಕೊಣ್ಣೂರೆ ಹಾಗೂ ಐಡಿಎಫ್‌ಸಿ ಬ್ಯಾಂಕ ಅಧಿಕಾರಿ ಮಹೇಶ ಮಾತನಾಡಿದರು. ಬೆಳಗಾವಿ ಬ್ಲಡ್ ಬ್ಯಾಂಕ ಅಧಿಕಾರಿ ಪಾಟೀಲ ಇದ್ದರು. 


ಸುದ್ದಿ ಓದಿ