ಚಿಕ್ಕೋಡಿ

ಡಾ. ಮಗದುಮ್ಮ ಅವರ ಹುಟ್ಟು ಹಬ್ಬದ ನಿಮಿತ್ಯ 22 ರಂದು ರಕ್ತದಾನ ಶಿಬಿರ

ಡಾ. ಮಗದುಮ್ಮ ಅವರ ಹುಟ್ಟು ಹಬ್ಬದ ನಿಮಿತ್ಯ 22 ರಂದು ರಕ್ತದಾನ ಶಿಬಿರ

ಚಿಕ್ಕೋಡಿ 21: ತಾಲೂಕಿನ ಅಂಕಲಿಯ ಗೋಮಟೇಶ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ. ಎನ್‌.ಎ.ಮಗದುಮ್ಮ ಅವರ ಹುಟ್ಟು ಹಬ್ಬದ ನಿಮಿತ್ಯ ಜು.22 ರಂದು ಬೃಹತ್ ರಕ್ತದಾನ ಶಿಬಿರ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಸುರೇಶ ಚೌಗುಲೆ ತಿಳಿಸಿದರು. ತಾಲೂಕಿನ ಅಂಕಲಿಯ ಗೋಮಟೇಶ ಶಿಕ್ಷಣ ಸಂಸ್ಥೆಯ ಸಭಾಭವನದಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸಂಸ್ಥೆಯ ಡಾ.ಎನ್‌.ಎ.ಮಗದುಮ್ಮ ಆಯುರ್ವೆದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕಾರ್ಯಕ್ರಮಗಳು ನಡೆಯಲಿದ್ದು, ಬೆಳಗ್ಗೆ 9 ಗಂಟೆಗೆ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಹಾಲು ಮತ್ತು ಹಣ್ಣು ವಿತರಣೆ ಮಾಡಲಾಗುವುದು.10 ಗಂಟೆಗೆ ವೈಕ್ಷಾರೋಪಣ ಕಾರ್ಯಕ್ರಮ, 11 ಗಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಅಂಕಲಿ ಮತ್ತು ಗೋಮಟೇಶ ಶಿಕ್ಷಣ ಸಂಸ್ಥೆ ಅಂಕಲಿ ಇವರ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ. ಡಾ. ನ್‌.ಎ.ಮಗದುಮ್ಮ ಸೆಂಟ್ರಲ್ ಪಬ್ಲಿಕ್ ಶಾಲೆಯ 8,9 ಮತ್ತು 10ನೇ ತರಗತಿಗಳನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು. 

 ಡಾ.ಎನ್‌.ಎ.ಮಗದುಮ್ಮ ಅವರ ಹುಟ್ಟು ಹಬ್ಬದ ಆಚರಣೆ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಜನರಲ್ಲಿ ಆಯುರ್ವೆದ ವೈದ್ಯಕೀಯ ಪದ್ದತಿಯ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ಉಚಿತವಾಗಿ 54 ಲಕ್ಷ ಮೊತ್ತದ 14000 ಜನರಿಗೆ ಆಯುರ್ ರಕ್ಷಾ , ಬಾಲ ರಕ್ಷಾ ಮತ್ತು ಸ್ವಾಸ್ಥ ರಕ್ಷಾ ಕಿಟ್‌ಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಹೇಳಿದರು. 

ಈ ಭಾಗದ ಗ್ರಾಮೀಣ ವಿದ್ಯಾರ್ಥಿಗಳಿಗೆ ಮತ್ತಷ್ಟು ಅನುಕೂಲ ಕಲ್ಪಿಸುವ ಉದ್ದೇಶದಿಂದ ಸೆಂಟ್ರಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಿಗಾಗಿ ನೀಟ್, ಸಿಇಟಿ, ಜೆಇಇ, ಐಐಟಿ ಮುಂತಾದ ಪರೀಕ್ಷೆಗಳ ಕುರಿತು ತರಬೇತಿ ಕೊಡಲು ತರಬೇತಿ ಕೇಂದ್ರ ಆರಂಭಿಸಲಾಗುತ್ತಿದ್ದು, ಅಂದು ಅದರ ಉದ್ಘಾಟನೆ ನೆರವೇರಲಿದೆ ಎಂದರು. ಸಂಸ್ಥೆಯ ಕೋಶಾಧ್ಯಕ್ಷೆ ಲಲಿತಾ.ಎನ್‌.ಮಗದುಮ್ಮ, ಪ್ರಾಚಾರ್ಯರಾದ ಎನ್‌.ಎಸ್‌.ನಿಡಗುಂದೆ, ಬಸವಣ್ಣಿ ಸಂಗಪ್ಪಗೋಳ, ರಾಮಗೊಂಡ ಪಾಟೀಲ, ವರ್ಷಾ ಥೋರಾಟ, ಯಾಕುಬ ತಾಂಬಟ. ಪ್ರವೀಣ ಪಾಟೀಲ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ