ದಿ : 7 ರಂದು ರಕ್ತದಾನ ಶಿಬಿರ- ಸನ್ಮಾನ ಕಾರ್ಯಕ್ರಮ
ಶಿಗ್ಗಾವಿ 31: ಕಬನೂರ ಗ್ರಾಮದಲ್ಲಿ ಭಗತಸಿಂಗ್ ಯುವಸೇನೆ ಹಾಗೂ ಸಮಸ್ತ ನಾಗರೀಕರು, ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾವೇರಿ ಮತ್ತು ತಾಲೂಕ ಆಸ್ಪತ್ರೆ ಶಿಗ್ಗಾವಿ ಇವರ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ ಮತ್ತು ವಯೋ ನಿವೃತ್ತಿ ಹೊಂದಿದ ತಾಲೂಕಿನ ಜನಪ್ರಿಯ ತಜ್ಞ ವೈದ್ಯರಾದ ಡಾ.ಹನುಮಂತಪ್ಪ. ಪಿ. ಹೆಚ್ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ದಿ : 7 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಬನೂರಲ್ಲಿ ಬೆಳಿಗ್ಗೆ 10.30 ಕ್ಕೆ ಹಮ್ಮಿಕೊಂಡಿದ್ದು ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಭಾಗವಹಿಸಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು ಸಂಘಟಕರು ಕೋರಿದ್ದಾರೆ.