ರಾಣೆಬೆನ್ನೂರ

ಅಂಧರ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿ

ಅಂಧರ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿ

ಲೋಕದರ್ಶನ ವರದಿ 

ರಾಣಿಬೆನ್ನೂರ 08:  ಅಂಗವಿಕಲ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಲು ಪ್ರೇರೇಪಿಸಬೇಕಾಗಿದೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.  

    ಇಲ್ಲಿನ ನಗರಸಭಾ ಕ್ರೀಡಾಂಗಣದಲ್ಲಿ ಸ್ಥಳೀಯ ಸ್ನೇಹದೀಪ ಅಂಧ ಅಂಗವಿಕಲರ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಅಂಧರ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿ ಅಪ್ಪು ನಮನ ಕಪ್‌- 2022 ಉದ್ಘಾಟಿಸಿ ಮಾತನಾಡಿದರು. ಸ್ನೇಹದೀಪ ಸಂಸ್ಥೆಯ ಇಬ್ಬರು ವಿದ್ಯಾರ್ಥಿನಿಯರು ಅಂತಾರಾಷ್ಟ್ರೀಯ ಪ್ಯಾರಾ ಓಲಿಂಪಿಕ್ಸ್‌ಗೆ ಹಾಗೂ ನಾಲ್ವರು ರಾಷ್ಟ್ರಮಟ್ಟದ ಕ್ರಿಕೆಟ್‌ಗೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.  

    ಸಂಸ್ಥೆಯ ಧರ್ಮದರ್ಶಿ ಕೆ.ಜಿ.ಮೋಹನ ಅಧ್ಯಕ್ಷತೆ ವಹಿಸಿದ್ದರು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿರ್ದೇಶಕ ಸಂತೋಷಕುಮಾರ ಪಾಟೀಲ, ನಗರಸಭಾ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಡಿವೈಎಸ್‌ಪಿ ಟಿ.ವಿ.ಸುರೇಶ, ದಾವಣಗೆರಿ ಮಾಜಿ ಪೌರಾಯುಕ್ತ ಮಲ್ಲೇಶಪ್ಪ ಸೀಮೆಎಣ್ಣಿ, ಶಹರ ಪಿಎಸ್‌ಐ ನಾಗರಾಜ, ಪವನಕುಮಾರ ಮಲ್ಲಾಡದ, ಪಂಚಾಕ್ಷರಿ ಪಟ್ಟಣಶೆಟ್ಟಿ, ವಿಜಯಲಕ್ಷ್ಮೀ ಮುಂಡಾಸದ, ವಸಂತಾ ಹುಲ್ಲತ್ತಿ , ಗೀರೀಶ ಬುಡ್ಡನಗೌಡ್ರ , ಸುಜಿತ್‌ಕುಮಾರ ಧನಶೆಟ್ಟಿ, ರವೀಂದ್ರ ಹೆಬಸೂರು ಜಯಪ್ಪ ಅಡಗಟ್ಟಿ, ಲಕ್ಷ್ಮಣ ಇಟಗಿ ಮತ್ತಿತರಿದ್ದರು. 


ಸುದ್ದಿ ಓದಿ