ತಾಳಿಕೋಟಿ

ರಾಮಲಿಂಗಯ್ಯ ಶ್ರೀಗಳಿಗೆ ಜಗದ್ಗುರುಗಳಿಂದ ಆಶೀರ್ವಾದ

ರಾಮಲಿಂಗಯ್ಯ ಶ್ರೀಗಳಿಗೆ ಜಗದ್ಗುರುಗಳಿಂದ ಆಶೀರ್ವಾದ

ತಾಳಿಕೋಟಿ:   ರಾಷ್ಟ್ರೀಯ ಬೇಡ ಜಂಗಮ ಸಮಾಜದ ಗೌರವ ಅಧ್ಯಕ್ಷರು ಜ್ಯೋತಿಷ್ಯ ರತ್ನ ಚಬನೂರು ಹಿರೇಮಠದ ಪರಮಪೂಜ್ಯ ಶ್ರೀರಾಮಲಿಂಗಯ್ಯ ಮಹಾಸ್ವಾಮಿಗಳು ಉಜ್ಜಯಿನಿ ಜಗದ್ಗುರುಗಳಿಂದ ಆಶೀರ್ವಾದ ಪಡೆದುಕೊಂಡರು. ಇತ್ತೀಚಿಗೆ ಉಜ್ಜಯಿನಿ ಜಗದ್ಗುರುಗಳಿಗೆ ನಾವದಗಿ ರಾಜೇಂದ್ರ ಒಡೆಯರ್ ಪುಟ್ಟ ದೇವರು ಇವರ ಗುರು ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮಕ್ಕೆ ಆಮಂತ್ರಿಸಲು ಹೋದ ಸಂದರ್ಭದಲ್ಲಿ ಅವರು ಜಗದ್ಗುರುಗಳಿಂದ ಆಶೀರ್ವಾದ ಪಡೆದುಕೊಂಡರು 2024 ಫೆಬ್ರವರಿ 27ರಿಂದ 29 ರವರೆಗೆ ನಾವದಗಿ ಗ್ರಾಮದಲ್ಲಿ ನಡೆಯಲಿರುವ ಈ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮದ ಜವಾಬ್ದಾರಿಯನ್ನು ಹೊತ್ತಿರುವ ರಾಮಲಿಂಗಯ್ಯ ಶ್ರೀಗಳು ಹಾಗೂ ಕೊಡೆಕಲ್ ಶಿವಕುಮಾರ ಶ್ರೀಗಳು ಮತ್ತು ಹಲವು ಪೂಜ್ಯರು ನಾವದಗಿಯ ದೈವದವರೊಂದಿಗೆ ಸೇರಿ ಜಗದ್ಗುರುಗಳನ್ನು ಭೇಟಿ ಮಾಡಿದರು.  ಈ ಭೇಟಿಯ ಸಂದರ್ಭದಲ್ಲಿ ಕಲಕೇರಿಯ ಸಿದ್ದರಾಮ ಶಿವಾಚಾರ್ಯರು. ನಾವದಗಿಯ ಪಟ್ಟದೇವರು ತಾಳಿಕೋಟಿಯ ಮಹಂತ ಶ್ರೀಗಳು. ಜಿಪಂ ಮಾಜಿ ಸದಸ್ಯ ಬಸನಗೌಡ ಒಣಕಿಹಾಳ. ಮುಖಂಡ ಭೀಮನಗೌಡ ಪಾಟೀಲ ನಾವದಗಿ. ಘಜದಂಡಯ್ಯ ಸ್ವಾಮಿಗಳು ನಾವದಗಿಯ  ದೈವ ದವರು ಮತ್ತಿತರರು ಇದ್ದರು.

ಸುದ್ದಿ ಓದಿ