ಸೌಂದತ್ತಿ

ಶರಣರ ದರ್ಶನದಿಂದ ಜನ್ಮ ಪಾವನ: ಬಸವ ಮಹಾಂತಶ್ರೀ

ಶರಣರ ದರ್ಶನದಿಂದ ಜನ್ಮ ಪಾವನ: ಬಸವ ಮಹಾಂತಶ್ರೀ

ಲೋಕದರ್ಶನ ವರದಿ 


ಸವದತ್ತಿ 31: ಸಮೀಪದ ಅಸುಂಡಿ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ಯ ಒಂದು ತಿಂಗಳವರೆಗೆ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಹಾಗೂ ಬಸವ ಪೂಜೆಯ ಮೂಲಕ ಉದ್ಘಾಟಿಸಲಾಯಿತು. 


ಪ್ರಾಸ್ತಾವಿಕವಾಗಿ ಮಾತನಾಡಿದ ರಾಷ್ಟ್ರೀಯ ಬಸವ ದಳದ ಅಧ್ಯಕ್ಷರಾದ ಸುದೀರ ವಾಲಿ ಶರಣರು 12ನೇ ಶತಮಾನದಲ್ಲಿ ಶರಣ ಕ್ರಾಂತಿಯನ್ನು ಮಾಡಿದರು. ಅವರು ರಚಿಸಿದ ವಚನಗಳು ಕ್ರಾಂತಿಯ ವಿಚಾರಗಳನ್ನು ಹೊಂದಿವೆ. ಶರಣರಲ್ಲಿ ಎಲ್ಲಾ ಜಾತಿಯ ಜನರು ಇದ್ದರು. ಮೇಲ್ವರ್ಗದ ಜನರು ಹಾಗು ಕೆಳವರ್ಗದ ಜನರು ಎಲ್ಲರೂ ಒಟ್ಟಿಗೆ ಸೇರಿ ಸಾಮಾಜಿಕ ಸಮಾನತೆಗಾಗಿ ಹೋರಾಡಿದರು. ಅವರಲ್ಲಿ ಪ್ರಮುಖರು ಅಲ್ಲಮ ಪ್ರಭು, ಬಸವಣ್ಣ, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಉರಿಲಿಂಗ ಪೆದ್ದಿ, ಸೂಳೆ ಸಂಕವ್ವ ಪ್ರಮುಖರು. ಇವರೆಲ್ಲರು ಸಹಸ್ರಾರು ಸಂಖ್ಯೆಯಲ್ಲಿ ವಚನಗಳನ್ನು ಬರೆದಿದ್ದಾರೆ. 


ಎಲ್ಲರನ್ನೂ ಸಮಾನವಾಗಿ ಕಾಣುವ, ಸರ್ವರನ್ನೂ ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರಣೆ ನೀಡುವ ಧರ್ಮ ಶರಣ ಧರ್ಮವಾಗಿದೆ. 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು. ಶರಣ ಧರ್ಮವು ಉದಾರ, ವೈಚಾರಿಕ ಹಾಗೂ ಸಾಮಾಜಿಕ ಕಳಕಳಿ ಹೊಂದಿದ್ದು, ರೂಢಿಗತವಾಗಿ ಲಿಂಗಾಯತ, ವೀರಶೈವ ಧರ್ಮ ಎಂದು ಕರೆಯುವ ಬದಲಿಗೆ ಶರಣ ಧರ್ಮ ಎನ್ನುವುದೇ ಸೂಕ್ತ’ ಎಂದು ಹೇಳಿದರು. 


ನಂತರ ಪೂಜ್ಯ ಶ್ರೀ ಬಸವಮಹಾಂತ ಮಹಾಸ್ವಾಮಿಗಳಿಂದ ಶರಣ ದರ್ಶನ ಪ್ರವಚನ ಉದ್ದೇಶಿಸಿ ಮಾತನಾಡಿದರು ‘ಶರಣರ ಜೀವನ ದರ್ಶನ ಮತ್ತು ವಚನ ಅಂತರಾಳ’. ಭವ ಬಂಧನವ ಕಳೆಯುವಾತ ಬಸವಣ್ಣ, ಮಹಾದೇವ ಭೂಪಾಲ ಮಾರಯ್ಯನಾದ ಬಗೆ, ಯೋಗಿಯಾದರೆ ಸಿದ್ದರಾಮನಂತಾಗಬೇಕು, ಉರಿಲಿಂಗ ಪೆದ್ದಿ ಶರಣನಾದ ಬಗೆ, ಜೇಡರ ದಾಸಿಮಯ್ಯನವರು, ಅಮುಗಿದೇವಯ್ಯನವರು, ಸಕಲೇಶ ಮಾದರಸ, ಹಡಪದ ಅಪ್ಪಣ್ಣ, ಶರಣ ಹರಳಯ್ಯ, ಸೇರಿದಂತೆ 11 ಶರಣರ ಜೀವನ ವೃತ್ತಾಂತವನ್ನು ಅವರ ವಚನಗಳೊಂದಿಗೆ ವಿಶ್ಲೇಷಿಸಿದರು. 


ಉದ್ಘಾಟನೆ ಬಿ. ಎಮ್‌. ಬಾಣಿ, ಅಧ್ಯಕ್ಷತೆ ಲಕ್ಷ್ಮೀ ಮಡಿವಾಳರ, ಭೀಮಪ್ಪ ಅಬ್ಬಾರ, ಯಲ್ಲಪ್ಪ ಗಾಣಿಗೇರ, ವೀರೆಶ ಹಲಕಿ, ಮಹಾಂತೇಶ ಮಟ್ಟಿ, ತಾ. ಪಂ. ಸದಸ್ಯರಾದ ಕಮಲಾಕ್ಷಿ ಚಿಕ್ಕಣ್ಣವರ, ನೇತ್ರಾ ಗಾಣಿಗೇರ, ಮಹಾದೇವ ಮೂಗಬಸವ, ಈರಣ್ಣಾ ಹುಲ್ಲೂರ, ರವಿ ಬಾಗೋಡಿ ಸೇರಿದಂತೆ ಅಂಸುಡಿ ಗ್ರಾಮಸ್ಥರು ರಾಷ್ಟ್ರೀಯ ಬಸವದಳ ಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ