ಉರ್ದು ಪ್ರೇಮಿ ಕವಿ ಮಿರ್ಜಾ ಗಾಲಿಬ್ ಅವರ ಜನ್ಮದಿನ
ಸಿರುಗುಪ್ಪ-ಕೋಪ ತಾಪಗಳನ್ನು ಕೆಲವೇ ಕ್ಷಣಗಳಲ್ಲಿ ಹೃದಯವನ್ನು ಅರಳಿಸಿ ಸಂತೋಷ ಮತ್ತು ಸೌಹಾರ್ದತೆಯನ್ನು ಕೊಡುವ ಶಕ್ತಿ ಸುಮಧುರ ಸಂಗೀತ ಗಾಯನ ಸೂಫಿ ಸಂತ ಶರಣ ಮಹಾತ್ಮ ಸಾಹಿತಿ ಕವಿಗಳಲ್ಲಿ ಇದೆ ಎಂದು ಸಮಾಜ ಸಾಹಿತ್ಯ ಬಹುಭಾಷಾ ಕವಿ ಗಾಯಕ ಜನ ಅಭಿಪ್ರಾಯ ಮುಖಂಡ ಅಬ್ದುಲ್ ನಬಿ ಅವರು ಅಭಿಪ್ರಾಯ ಪಟ್ಟರು ನಗರದ ಇಬ್ರಾಹಿಂ ಮಂಜೀಲ್ ನಲ್ಲಿ ಭಾರತೀಯ ಕಾವ್ಯ ಲೋಕ ಉರ್ದು ಪ್ರೇಮಿ ಕವಿ ಮಿರ್ಜಾ ಗಾಲಿಬ್ ಅವರ 226ನೇ ಜನ್ಮದಿನವನ್ನು ನೆನಪಿಸಿ ಗೌರವಿಸಿ ಸ್ಮರಿಸಿ ಮಾತನಾಡುತ್ತಾ ಭಾರತೀಯ ಕಾವ್ಯಲೋಕದ ದ್ರುವ ಕಾರ್ಯಗಳಲ್ಲಿ ಉರ್ದು ಪ್ರೇಮಿ ಮಹಾ ಕವಿ ಮಿರ್ಜಾ ಗಾಲಿಬ್ ಒಬ್ಬರು ಕಾವ್ಯವನ್ನೇ ಬದುಕಿನ ದ್ರವ್ಯವನ್ನಾಗಿಸಿ ಕೊಂಡ ಮಿರ್ಜಾ ಗಾಲಿಬ್ ಬದುಕಿನ ಯಾತನೆಯನ್ನು ಉಲ್ಲಾಸದ ಹಾಡುಗಳನ್ನಾಗಿ ಹಾಡಿದ ಪ್ರೇಮಕವಿ ಮಿರ್ಜಾ ಗಾಲಿಬ್ ಅವರ ಡಿ. 27ಇಂದು ಅವರ ಜನ್ಮದಿನ ಕಾವ್ಯದ ದೃಷ್ಟಿಯಿಂದ ಅವರು ಜನಮಾನಸದಲ್ಲಿ ಅತ್ಯುನ್ನತ ಸ್ಥಾನವನ್ನು ಪಡೆದುಕೊಂಡಿದ್ದರು ಶಿಸ್ತು ಮತ್ತು ಅಚ್ಚು ಕಟ್ಟಿನ ಜೀವನವನ್ನು ಅವರು ನಡೆಸಿದರು ಎಂದು ಅಬ್ದುಲ್ ನಬಿ ಹೇಳಿದರು. ಹಾಜಿ ಹಂಡಿ ಹುಸೇನ್ ಭಾಷಾ, ಹಂಡಿ ಹುಸೇನ್ ಸಾಬ್, ಹಾಜಿ ಅಬ್ದುಲ್ ಹಮೀದ್ ಫಾರೂಕಿ , ಖಾಲಿ ಚೀಲ ಹಾಜಿ ಹುಸೇನ್ ಸಾಬ್, ಹಾಜಿ ಮೊಹಮ್ಮದ್ ಇಬ್ರಾಹಿಂ, ಮೊಹಮ್ಮದ್ ನೌಶಾದ್ ಅಲಿ, ಹಂಡಿ ಹಾಶಿಮ್, ಡಬಲ್ ಬಾಂಡ್ ಹಾಜಿ ಟಿ ಜಿ ಅಬ್ದುಲ್ ಗನಿ, ಎ ಮೊಹಮ್ಮದ್ ರಫಿ, ಬಿಕೆ ಅಲ್ಲಾಭಕ್ಷಿ, ಜಹಿರುದ್ದೀನ್ ಬಾಬು,ಜೆ ನಾಗೇಂದ್ರ ಗೌಡ ಇದ್ದರು.