ಸಿರುಗುಪ್ಪ

ಮೌಲಾನಾ ಅಬುಲ್ ಕಲಾಂ ಆಜಾದ್ ಜನ್ಮದಿನಾಚರಣೆ

ಮೌಲಾನಾ ಅಬುಲ್ ಕಲಾಂ ಆಜಾದ್ ಜನ್ಮದಿನಾಚರಣೆ

ಸಿರುಗುಪ್ಪ 13: ಸ್ವತಂತ್ರ್ಯ ಭಾರತದ ​‍್ರ​‍್ರಥಮ ಶಿಕ್ಷಣ ಸಚಿವರು ಭಾರತರತ್ನ ಶಿಕ್ಷಣ ಸೇನಾನಿ ಡಾ. ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನವನ್ನು ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಿದರು ನಗರದ ಈದ್ಗಾ ಮತ್ತು ಖಬರ್  ಸ್ಥಾನ ಕಮಿಟಿ ಆಶ್ರಯದಲ್ಲಿ ಮೌಲಾನಾ ಅಬುಲ್ ಕಲಾಂ ಆಜಾದ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮೈದಾನದಲ್ಲಿ ಬಳ್ಳಾರಿ ಜಿಲ್ಲಾ ವಕ್ಫ್‌ ಸಲಹಾ ಸಮಿತಿ ಅಧ್ಯಕ್ಷ ಹುಸೇನ್ ಪೀರ್ ಸಾಬ್ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಭಾರತದ ಸ್ವಾತಂತ್ರ್ಯ ಚಳುವಳಿ ಕಾಲದಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ನ ಪ್ರಮುಖ ಹಿರಿಯ ಮುಖಂಡರಲ್ಲಿ ಮೌಲಾನಾ ಆಜಾದ್ ಅವರೂ ಕೂಡ ಒಬ್ಬರಾಗಿದ್ದರು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಇವರ ಕೊಡುಗೆ ದೇಶಕ್ಕೆ ಅಪಾರ ಸಿರುಗುಪ್ಪ ನಗರದಲ್ಲಿ ಅಬುಲ್ ಕಲಾಂ ಆಜಾದ್ ಅವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯನ್ನು ಉನ್ನತ ಮಟ್ಟಕ್ಕೆ ವಿಶ್ವ ವಿದ್ಯಾ ಲಯ ಯನ್ನಾಗಿ ಮಾಡಲು ನಾವೆಲ್ಲರೂ ಶ್ರಮವಹಿಸೋಣ ಎಂದರು ಮತ್ತು ಅವರು ಈ ವಿದ್ಯಾಸಂಸ್ಥೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದಾಗಿ ಭರವಸೆ ನೀಡಿದರು.  

ಈ ಸಂದರ್ಭದಲ್ಲಿ ಖಾಜಿ ಸಾಹೇಬರು ಖುರಾನ್ ಫಾತೇಹ ಓದಿಕೆದೊಂದಿಗೆ ಸಮಾಧಿಗಳಿಗೆ  ಪುಷ್ಪದೊಂದಿಗೆ ದರ್ಶನ ಪಡೆದರು. ಬಳ್ಳಾರಿ ಜಿಲ್ಲಾ ವಕ್ಫ್‌ ಸಲಹಾ ಸಮಿತಿ ಉಪಾಧ್ಯಕ್ಷ ಇಬ್ರಾಹಿಂ ಸಾಬ್ ಬಳ್ಳಾರಿ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಕಣೆಕಲ್ ಮಹೆಬೂಬ್ ಸಾಬ್ ಬಳ್ಳಾರಿ ಜಿಲ್ಲಾ ವಕ್ಫ್‌ ಮಾಜಿ ಸದಸ್ಯರಾದ ಚಿಟಿಕೆ  ಹುಸೇನ್ ಸಾಬ್ ಹಾಜಿ, ಎ.ಅಬ್ದುಲ್ ನಬಿ, ತಾಲ್ಲೂಕು ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹುಸೇನ್ ಬಾಷಾ, ಖತೀಬ್ ಜಹಿರುದ್ದೀನ್ ಬಾಬು, ಮೆಕಾನಿಕ್ ಹಾಜಿ, ಸೈಯದ್ ಆಲಂ ಬಾಷಾ, ಟೈಲರ್ ಜಿ ಕಾಜ, ಗೌಸ್ ರಬ್ಬಾನಿ, ಬಿ.ಅಫ್ಜಲ್ ಹುಸೇನ್,  ಇನಾಯತ್, ಕೆ.ಮುಹಮ್ಮದ್ ಫಾರೂಕ್, ಮುಲ್ಲಾ ಬಾಬು, ಸೇರಿದಂತೆ ನಗರದ ಸಮುದಾಯದವರು ಭಾಗ ವಹಿಸಿದ್ದರು ಗಣ್ಯರಿಗೆ ಪುಷ್ಪಾ ಮಾಲೆಯೊಂದಿಗೆ ಗೌರವಿಸಿ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ನಗರಸಭಾ ಸದಸ್ಯ ಈದ್ಗಾ ಮತ್ತು ಖಬರ್ ಸ್ತಾನ್ ಕಮಿಟಿಯ ಎಲ್ಲ ಸದಸ್ಯ ನಗರದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಶಾಲಾ ಮುಖ್ಯಗುರುಗಳು ಶಾಲೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು. 


ಸುದ್ದಿ ಓದಿ