ಹುಟ್ಟು ಆಕಸ್ಮಿಕ ಸಾವು ನಿಶ್ಚಿತ: ಚನ್ನಮಲ್ಲಿಕಾರ್ಜುನ ಶ್ರೀ
ರಾಣೀಬೆನ್ನೂರ 20: ಮನುಷ್ಯನ ಹುಟ್ಟು ಆಕಸ್ಮಿಕ ಅಂತಿಮವಾಗಿ ಸಾವು ನಿಶ್ಚಿತ ಇವೆರಡನ್ನೂ ಅರ್ಥ ಮಾಡಿಕೊಂಡರೆ ಬದುಕು ಶೂನ್ಯವಾಗುತ್ತದೆ. ಭೂಮಿಗೆ ಬಂದ ಪ್ರತಿಯೊಬ್ಬರೂ ನಮ್ಮ ಪಾಲಿಗೆ ಬಂದ ನೆರವೇರಿಸಲೇ ಬೇಕು ಇಲ್ಲವಾದರೆ ಜೀವನ ಸಾರ್ಥಕತೆ ಹೊಂದಲಾರದು. ಹಣ ಶಾಶ್ವತವಲ್ಲ ಮಾಡುವ ಕಾಯಕ ಧಾನ, ಧರ್ಮ ಸದಾಕಾಲ ಶಾಶ್ವತವಾಗಿರುತ್ತದೆ ಎಂದು ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ ಚನ್ನಮಲ್ಲಿಕಾರ್ಜುನ ಶಿವಾ ಚಾರ್ಯ ಮಹಾಸ್ವಾಮಿಗಳು ಹೇಳಿದರು.
ಅವರು ಮಂಗಳ ವಾರ ಮೃತ್ಯುಂಜಯ ನಗರದ ಚನ್ನೇಶ್ವರ ಮಠದಲ್ಲಿ ಬನದ ಹುಣ್ಣಿಮೆಯ 247ನೇ ಜ್ಞಾನವಾಹಿನಿ ಧರ್ಮ ಜಾಗೃತಿ ಧಾರ್ಮಿಕ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ದರು. ಜನ್ಮ ತಾಳಿದ ಮಾನ ವನು ಬದುಕಿನಲ್ಲಿ ಮಾನವೀಯ ಮೌಲ್ಯಗಳನ್ನು ಹೊಂದಿರಬೇಕು. ಸೇವಾ ಮನೋಭಾವನೆ ಅಳವಡಿಸಿಕೊಂಡಿರುವ ಮನುಷ್ಯ ದೊಡ್ಡ ವನಾಗುತ್ತಾನೆಯೇ ಹೊರತು ಹಣವಿರುವವನು ಶ್ರೀಮಂತ ನಲ್ಲ ಎಂದ ಶ್ರೀಗಳು ಸೇವಾ ಮನೋಭಾವನೆ ಹೊಂದಿದ್ದ ಉಜ್ಜಯನಿ ಶ್ರೀಸಿದ್ದಲಿಂಗರು ಪಂಚ ಪೀಠಗಳನ್ನು ಉದ್ಧರಿ ಸಲು ಬಹು ಮುಖ್ಯ ಪಾತ್ರ ವಹಿಸಿದ್ದಾರೆಂದು ಹೇಳಿದರು.
ಪ್ರಸಾದ ಸೇವಾ ಕರ್ತರಾದ ಹೇಮ ಲತಾ ಚಂದ್ರಶೇಖರ ರಾಮಾ ಳದ ಅವರು ಜ್ಯೋತಿ ಬೆಳಗಿಸು ವುದರ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಗ್ರಾಮೀಣ ಪಿಎಸ್ಐ ಶ್ರೀ ಆರ್.ಜಿ. ಹಿರೇಮಠ, ಶಿಕ್ಷಣ ಸಿರಿ ಪ್ರಶಸ್ತಿ ಪುರಸ್ಕೃತ ಜಗದೀಶ ಮಳೀಮಠ, ಶಿವಾನಂದ ತೆವರಿ, ಉಷಾ ಸೊರಟೂರ, ಮಮತಾ ಹುಣಸಿಮರದ, ಶ್ರೀದೇವಿ ಆರ್ ಸೇರಿದಂತೆ ಮತ್ತಿತರರನ್ನು ಶ್ರೀಗಳು ಗುರು ರಕ್ಷೆ ನೀಡಿ ಗೌರವಿಸಿದರು. ವೇದಿಕೆಯಲ್ಲಿ ನಿವೃತ್ತ ಅದ್ಯಾಪಕ ಅ.ಸಿ.ಹಿರೇಮಠ, ಡಾ. ಚನ್ನು ಹಿರೇಮಠ, ಚನ್ನವೀರನಗೌಡ ಪಾಟೀಲ, ಡಾ. ಶಿವಾನಂದ ಹಿತ್ತಲಮನಿ ಮೊದಲಾದವರು ಉಪಸ್ಥಿತರಿದ್ದರು. ವಟುಗಳಿಂದ ವೇದಘೋಷ, ಕಲಾವಿದ ಗುಡ್ಡಪ್ಪ ಹಿಂದಿನಮನಿ, ದಾನೇಶ್ವರಿ ಅಕ್ಕನ ಬಳಗದ ಕಲಾವಿದರು ಪ್ರಾರ್ಥಿಸಿ ಸಂಗೀತ ಸೇವೆ ನೀಡಿದರು. ಕಸ್ತೂರೆಮ್ಮ ಪಾಟೀಲ ಸ್ವಾಗತಿಸಿ, ನಿರೂಪಿಸಿದರು. ಹಾಲಶಿದ್ದಯ್ಯ ಶಾಸ್ತ್ರಿಗಳು ವಂದಿಸಿದರು.