ಬಳ್ಳಾರಿ

ಕಾಮ್ರೇಡ್ ಶಿವದಾಸ್ ಘೋಸ್‌ರವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ

ಕಾಮ್ರೇಡ್ ಶಿವದಾಸ್ ಘೋಸ್‌ರವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ

ಕಾಮ್ರೇಡ್ ಘೋಷ್ ನೈಜ ಕಮ್ಯುನಿಸ್ಟ್‌ ಪಕ್ಷ ಸ್ಥಾಪನೆ ಮಾಡಿ ಹೊಸ ಇತಿಹಾಸಕ್ಕೆ ನಾಂದಿ ಹಾಡಿದರು: ಡಾ. ಪ್ರಮೋದ್ 

ಬಳ್ಳಾರಿ 23: ಅತ್ಯಂತ ತ್ರಾಸದಾಯಕ ಹೋರಾಟವನ್ನು ಕಾಮ್ರೇಡ್ ಘೋಷ್ ರವರು ಬೆರಳೆಣಿಕೆಯ ಕಾಮ್ರೇಡ್‌ರೊಂದಿಗೆ ಸೇರಿ 1948 ಏಪ್ರಿಲ್ 24ರಂದು ಈ ನೆಲದಲ್ಲಿ ಒಂದು ನೈಜ ಕಮ್ಯುನಿಸ್ಟ್‌ ಪಕ್ಷ ಸ್ಥಾಪನೆ ಮಾಡಿ ಒಂದು ಹೊಸ ಇತಿಹಾಸಕ್ಕೆ ನಾಂದಿ ಹಾಡಿದರು ಎಂದು ಡಾ. ಪ್ರಮೋದ್ ರವರು ಹೇಳಿದರು. 

ಮಹಾನ್ ಮಾರ್ಕ್ಸ್‌ ವಾದಿ ಚಿಂತಕರು, ದುಡಿಯುವ ವರ್ಗದ ಮಹಾನ್ ನಾಯಕರಾದ ಕಾಮ್ರೇಡ್ ಶಿವದಾಸ್ ಘೋಷ್‌ರವರ ಜನ್ಮ ಶತಮಾನೋತ್ಸವದ ಅಂಗವಾಗಿ ಶನಿವಾರ ಎಸ್‌.ಯು.ಸಿ.ಐ ಕಮ್ಯುನಿಸ್ಟ್‌ ಸಂಘಟನಾ ಸಮಿತಿ ವತಿಯಿಂದ ಪಕ್ಷದ ಕಛೇರಿಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾ ಸಲಹೆಗಾರರಾದ ಕಾಮ್ರೇಡ್ ಡಾ. ಪ್ರಮೋದ್ ರವರು ಮಾತನಾಡುತ್ತಾ, "ಭಾರತದ ನೆಲದಲ್ಲಿ ನಿಜವಾದ ಸಮಾಜವಾದಿ ಚಿಂತನೆಗಳು ಬೆಳೆಯಬಾರದು ಎಂದು ಸಮಾಜವಾದದ ಹೆಸರಿನಲ್ಲಿ ನಕಲಿ ಕಮ್ಯುನಿಸ್ಟ್‌ ಪಕ್ಷಗಳನ್ನು, ನಕಲಿ ಸಮಾಜವಾದಿ ಪಕ್ಷಗಳು ಹುಟ್ಟಿರುವ ಸನ್ನಿವೇಶದಲ್ಲಿ ನೈಜ ಕಮ್ಯುನಿಸ್ಟ್‌ ಪಕ್ಷ ಎಸ್‌ಯುಸಿಐ(ಸಿ) ಸ್ಥಾಪನೆ ಮಾಡಿದ ಕಾಮ್ರೇಡ್ ಶಿವದಾಸ್ ಘೋಸ್‌ರವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಆಗಸ್ಟ್‌ 5 ರಿಂದ ಇಡೀ ದೇಶದಾದ್ಯಂತ ವರ್ಷಪೂರ್ತಿ ಅತ್ಯಂತ ಗೌರವದಿಂದ ಆಚರಿಸಲಾಗುತ್ತಿದೆ” ಎಂದರು. 

ಹದಿಮೂರನೇ ವಯಸ್ಸಿಗೆ ಸ್ವಾತಂತ್ರ್ಯ ಹೋರಾಟದ ಕಣದಲ್ಲಿ ಧುಮುಕಿದ ಕಾಮ್ರೇಡ್ ಶಿವದಾಸ್ ಘೋಷ್, ಕ್ರಾಂತಿಕಾರಿಗಳ ಗುಂಪಾದ ಅನುಶೀಲನ್ ಸಮಿತಿಯಲ್ಲಿ ಸಕ್ರಿಯರಾಗಿ, 3 ವರ್ಷಗಳ ಕಾಲ ಸೆರೆಮನೆ ವಾಸ ಅನುಭವಿಸಿದರು. ಆದರೆ ಲಕ್ಷಾಂತರ ಶೋಷಿತ ಜನರ ತ್ಯಾಗ ಬಲಿದಾನದ ಫಲವಾಗಿ ದೊರೆಯುತ್ತಿರುವ ಸ್ವಾತಂತ್ರ್ಯವೂ ಟಾಟಾ, ಬಿರ್ಲಾಗಳಂತಹ ಬಂಡವಾಳಶಾಹಿಗಳ ಕೈವಶವಾಗುತ್ತಿರುವುದನ್ನು ಕಂಡು ಅವರ ಮನಸ್ಸು ವೇದನೆಗೊಳ ಪಟ್ಟಿತು.  ರಾಜಿ ರಹಿತ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್ ರಂತವರ ಕನಸಿನ ಶೋಷಣಾ ರಹಿತ ಸಮಾಜವಾದ, ಕನಸಾಗಿಯೇ ಉಳಿಯಿತು. ನಂತರ ಕಾಮ್ರೇಡ್ ಘೋಷ್ ರವರು ನೈಜ ಕಮ್ಯುನಿಸ್ಟ್‌ ಪಕ್ಷ ಸ್ಥಾಪನೆ ಮಾಡಿ ಒಂದು ಹೊಸ ಇತಿಹಾಸಕ್ಕೆ ನಾಂದಿ ಹಾಡಿದರು ಎಂದರು. 

ಕಾಮ್ರೇಡ್ ಎರಿ​‍್ರಸ್ವಾಮಿ ರವರು ಮಾತನಾಡುತ್ತಾ ದೇಶದಲ್ಲಿ ಕಾಂಗ್ರೇಸ್, ಬಿಜೆಪಿ ಪಕ್ಷ ಸೇರಿದಂತೆ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸಹ ಜನತೆಯ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ. ಬದಲಾಗಿ ಶ್ರೀಮಂತರ ಪರವಾದ ಪಾಲಸಿಗಳನ್ನು ತರುವ ಮೂಲಕ ದೇಶದ ದುಡಿಯುವ ಜನತೆಯನ್ನು ಸಂಕಷ್ಟಕ್ಕೆ ನೂಕಿವೆ. ಅಗತ್ಯ ವಸ್ತುಗಳ ಬೆಲೆ ಏರಿಕೆ, ವಿದ್ಯುತ್ ಖಾಸಗಿಕರಣ, ಶಿಕ್ಷಣ ವ್ಯಾಪಾರಿಕರಣ ಮತ್ತು ನಿರುದ್ಯೋಗ, ಮಹಿಳೆಯರ ಮೇಲಿನ ಅಗೌರವಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇವೆ. ಇಂತಹ ಸಂದರ್ಭದಲ್ಲಿ ಸುಳ್ಳು ಆಶ್ವಾಸನೆಗಳ ಮೂಲಕ ಅಧಿಕಾರಕ್ಕೆ ಬಂದ ಪಕ್ಷಗಳು ಬಂಡವಾಳ ಶಾಹಿಗಳ ಏಜೆಂಟ್‌ಗಳಾಗಿ ಕೆಲಸ ಮಾಡುತ್ತಿವೆ. ಇಂತಹ ಸಮಸ್ಯೆಗಳಿಗೆ ಕೊನೆ ಹಾಕಲು ಒಂದೇ ಒಂದು ಮಾರ್ಗವೆಂದರೆ ದೇಶದ ಜನತೆ ತಮ್ಮನ್ನು ತಾವು ಕಾರ್ಮಿಕ ವರ್ಗದ ಚಳುವಳಿಯೊಂದಿಗೆ ಬೆಸೆದುಕೊಂಡು ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿಯನ್ನು ನೆರವೇರಿಸುವುದು” ಎಂದು ಕರೆನೀಡಿದರು. 

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸಮಿತಿಯ ಸದಸ್ಯರಾದ ಪಂಪಾಪತಿ ವಹಿಸಿದ್ದರು. ಈ ಸಂದರ್ಭದಲ್ಲಿ ಎಸ್‌.ಯು.ಸಿ.ಐ ಕಮ್ಯುನಿಸ್ಟ್‌ ಪಕ್ಷದ ಜಿಲ್ಲಾ ಸಮಿತಿಯ ಸದಸ್ಯರಾದ ಕಲ್ಮೇಶ್, ಪ್ರಕಾಶ್, ಅಭಿಷೇಕ್, ಅಜ್ಜಯ್ಯ, ಪಾಲಾಕ್ಷ ಹಡಗಲಿ ಇನ್ನೂ ಮುಂತಾದ ಪಕ್ಷದ ಸದಸ್ಯರು ಮತ್ತು ನಾಗರಿಕರು ಉಪಸ್ಥಿತರಿದ್ದರು. 


ಸುದ್ದಿ ಓದಿ