ರಾಷ್ಟ್ರೀಯ

ಡ್ರಗ್ಸ್ ಪ್ರಕರಣ: ಬಿನೀಶ್ ವಿಚಾರಣೆ ಆರಂಭ

ಡ್ರಗ್ಸ್ ಪ್ರಕರಣ: ಬಿನೀಶ್ ವಿಚಾರಣೆ ಆರಂಭ

ತಿರುವನಂತಪುರಂ, 18: ಡ್ರಗ್ಸ್ ಪೆಡ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಸಿಪಿಐಎಂ ಘಟಕದ ಮಾಜಿ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೀಶ್ ಕೊಡಿಯೇರಿಯ ವಿಚಾರಣೆ ಆರಂಭವಾಗಿದೆ.

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಬುಧವಾರ ಬೆಂಗಳೂರಿನಲ್ಲಿ ವಿಚಾರಣೆಗೆ ಗುರಿಪಡಿಸಿದೆ.  ಮಂಗಳವಾರ ಮಧ್ಯಾಹ್ನ  ಬಿನೀಶ್ ಕೊಡಿಯೇರಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಮಾದಕವಸ್ತು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ಸಹ ಬಂಧಿಸಲಾಗಿತ್ತು.

ಎನ್‌ಸಿಬಿ ಅಧಿಕಾರಿಗಳು ನವೆಂಬರ್ 20 ರವರೆಗೆ ಬಿನೀಶ್ ಕೊಡಿಯೇರಿಯನ್ನು ವಿಚಾರಣೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸುದ್ದಿ ಓದಿ