ಕಂಪ್ಲಿ

ಮಹಿಳಾ ಕುಸ್ತಿ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಬಿಂಗಿ ತೇಜಶ್ವನಿ ಆಯ್ಕೆ

ಮಹಿಳಾ ಕುಸ್ತಿ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಬಿಂಗಿ ತೇಜಶ್ವನಿ ಆಯ್ಕೆ

ಕಂಪ್ಲಿ 27: ಸ್ಥಳೀಯ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಪಾಲ್ಗೊಂಡು ಉತ್ತಮ ಸಾಧನೆ ಮಾಡಿದ್ದು, ಪ್ರಶಸ್ತಿಗಳಿಸಿ ಪಟ್ಟಣಕ್ಕೆ ಕೀರ್ತಿ ತಂದಿದ್ದಾರೆ.  

ಇಲ್ಲಿನ ವಿದ್ಯಾರ್ಥಿನಿ ಬಿಂಗಿ ತೇಜಶ್ವನಿ ಅ.25, 26ರಂದು ಕನಕಪುರದಲ್ಲಿ ನಡೆದ 17 ವರ್ಷದೊಳಗಿನ ಬಾಲಕಿಯರ 65ಕೆ.ಜಿ. ವಿಭಾಗದ ಫ್ರಿಸ್ಟೈಲ್ ಮಹಿಳಾ ಕುಸ್ತಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಾಧನೆ ಮಾಡಿದ ವಿದ್ಯಾರ್ಥಿನಿಗೆ ದೈಹಿಕ ಶಿಕ್ಷಣ ಶಿಕ್ಷಕ ಬಿಂಗಿ ಬೀರಲಿಂಗೇಶ್ವರ, ತರಬೇತುದಾರ ವಿನಾಯಕ್ ಸೇರಿದಂತೆ ಇತರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಇಲ್ಲಿನ ಕಲ್ಮಠ ಪ್ರಭು ಸ್ವಾಮೀಜಿಗಳವರ ಅನುದಾನಿತ ಪ್ರೌಢಶಾಲೆ 10ನೇ ತರಗತಿ ವಿದ್ಯಾರ್ಥಿಪಿ.ಪರಮೇಶ ಕನಕಪುರದಲ್ಲಿ ನಡೆದ ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ 17 ವರ್ಷದೊಳಗಿನ ಬಾಲಕರ ಕುಸ್ತಿ ಪಂದ್ಯಾವಳಿಯ 80ಕೆ.ಜಿ. ವಿಭಾಗದ ಫ್ರಿಸ್ಟೈಲ್ ಕುಸ್ತಿಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಸಾಧನೆಗೈದ ವಿದ್ಯಾರ್ಥಿಗೆ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಕೋಟ್ರೇಶ್ ದೈಹಿಕ ತಾಲೂಕು ಪರೀವೀಕ್ಷಕಿ ಪದ್ಮಾವತಿ ರೆಡ್ಡಿ ತಂಡದ ವ್ಯವಸ್ಥಾಪಕ ಬಿ.ಬೀರಲಿಂಗೇಶ್ವರ, ಮುಖ್ಯ ಗುರು ಎ.ಎಂ.ಬಸವರಾಜ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 


ಸುದ್ದಿ ಓದಿ