ಬೆಳಗಾವಿ

ಬೆಳಗಾವಿಯಲ್ಲಿಂದು ಬೈಕ್ ರಾ​‍್ಯಲಿ, 26ರಂದು ಕಾರ್ಗಿಲ್ ವಿಜಯೋತ್ಸವ

ಬೆಳಗಾವಿಯಲ್ಲಿಂದು ಬೈಕ್ ರಾ​‍್ಯಲಿ,  26ರಂದು ಕಾರ್ಗಿಲ್ ವಿಜಯೋತ್ಸವ

ಬೆಳಗಾವಿ 24: ಕಾರ್ಗಿಲ್ ವಿಜಯೋತ್ಸವದ 27ನೇ ವರ್ಷದ ಅಂಗವಾಗಿ  ಬೆಳಗಾವಿ ಜಿಲ್ಲೆ ಮಾಜಿ ಸೈನಿಕರ ಸಂಘಟನೆಗಳ ಮಹಾಒಕ್ಕೂಟವು ಜುಲೈ 25 ಮತ್ತು 26ರಂದು ವಿವಿಧ ಕಾರ್ಯಕ್ರಮಗಳನ್ನು  ಹಮ್ಮಿಕೊಳ್ಳಲಾಗಿದೆ ಎಂದು  ಮಹಾಒಕ್ಕೂಟದ ಅಧ್ಯಕ್ಷ ಜಗದೀಶ ಪೂಜೇರಿ ಹೇಳಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು,  ಕಾರ್ಗಿಲ್ ಯುದ್ಧದಲ್ಲಿ ವೀರಮರಣ ಹೊಂದಿದ ಯೋಧರನ್ನು ಸ್ಮರಿಸುವುದು, ಸೈನಿಕರಿಗೆ ಆತ್ಮಸ್ಥೆರ್ಯ ತುಂಬುವುದು ಹಾಗೂ ಯುವಜನರಲ್ಲಿ ದೇಶಭಕ್ತಿ ಜಾಗೃತಗೊಳಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ.ಜುಲೈ 25ರಂದು ಬಸವೇಶ್ವರ ಸರ್ಕಲ್ (ಗೋವಾವೇಸ್)ದಿಂದ ಧರ್ಮನಾಥ ಭವನದವರೆಗೆ ಬೈಕ್ ರ್ಯಾಲಿ ಆಯೋಜಿಸಲಾಗಿದ್ದು, ಮಾಜಿ ಸೈನಿಕರು, ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನೀರೀಕ್ಷೆಯಿದೆ ಎಂದು ಹೇಳಿದರು.

ಜುಲೈ 26ರಂದು ನಗರದ ಧರ್ಮನಾಥ ಭವನದಲ್ಲಿ ನಡೆಯಲಿರುವ ಮುಖ್ಯ ಕಾರ್ಯಕ್ರಮದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು. ಕಾರ್ಗಿಲ್ ಹುತಾತ್ಮ ಯೋಧರ ಕುಟುಂಬದವರಿಗೆ ಗೌರವ ಸನ್ಮಾನ, ’ಬೆಳಗಾವಿ ಸೈನಿಕ ರತ್ನ’ ಪ್ರಶಸ್ತಿ ಪ್ರದಾನ ಹಾಗೂ ಅತ್ಯುತ್ತಮ ಶಿಕ್ಷಕ, ವೈದ್ಯ ಮತ್ತು ಪ್ರಗತಿಪರ ರೈತರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹೋಟ್, ಸಂಸದ ಜಗದೀಶ್ ಶೆಟ್ಟರ್ ಹಾಗೂ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಭಾಗವಹಿಸಲಿದ್ದಾರೆ.

ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಸಂಸದ ಈರಣ್ಣ ಕಡಾಡಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಹಸಿರು ಸೇನೆಯ ರಾಜ್ಯ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ, ಚುನಪ್ಪಾ ಪೂಜಾರಿ, ಶಾಸಕರಾದ ಅಭಯ ಪಾಟೀಲ್ ಮತ್ತು ಆಸಿಫ್ ಸೇರ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಸಿಂಧೆ, ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಗುಲಾಬರಾವ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಸೇರಿದಂತೆ ಮಾಜಿ ಸೈನಿಕರು, ಯೋಧರು ಹಾಗೂ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್ಸಿ ಹಾಗೂ ಪಿಯುಸಿಯಲ್ಲಿ ಶೇ.95ಕ್ಕಿಂತ ಹೆಚ್ಚು ಅಂಕ ಗಳಿಸಿದ ಮಾಜಿ ಸೈನಿಕರ ಮಕ್ಕಳಿಗೆ ಸನ್ಮಾನ ಮಾಡಿ ಪುಸ್ತಕಗಳನ್ನು ವಿತರಿಸಲಾಗುವುದು. ಹಾಗೂ ಪ್ರಗತಿಪರ ರೈತರಿಗೆ ಸಮಾನಿಸಲ್ಲಾಗುವುದು, ವೀರನಾರಿಯರನ್ನು ಗೌರವಿಸುವುದರ ಜೊತೆಗೆ 1965 ಹಾಗೂ 1971ರ ಯುದ್ಧಗಳಲ್ಲಿ ಭಾಗವಹಿಸಿದ್ದ ಹಿರಿಯ ಮಾಜಿ ಸೈನಿಕರಿಗೂ ವಿಶೇಷ ಸನ್ಮಾನ ನೀಡಲಾಗುವುದು ಎಂದು ವಿವರಿಸಿದರು. ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಆಯೋಜಿಸಿರುವ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯೋಧರಿಗೆ ಗೌರವ ಸಲ್ಲಿಸುವಂತೆ ಮಹಾಒಕ್ಕೂಟ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ  ಗೌರವ ಅಧ್ಯಕ್ಷರು ರಮೇಶ್ ಬೌಗಲೆ, ಮಡಿವಾಲಪ್ಪ ಕಲಭಾವಿ, ಅಶೋಕ್ ಮಜಗಿ, ಚಂದ್ರಶೇಖರ್ ಸವದಿ, ಕವಿತಾ ಮಿಶ್ರಾ ಸೇರಿದಂತೆ ಹಲವು ಮೇಜಿನ ಸೈನಿಕರು ಇದ್ದರು. 


ಸುದ್ದಿ ಓದಿ