ಕೊರೋನ ಸೇರಿದಂತೆ ಜಾಗತಿಕ ವಿಚಾರಗಳ ಕುರಿತು ಬೈಡೆನ್ - ಮೋದಿ ಮಾತುಕತೆ
ನವದೆಹಲಿ,
ನವೆಂಬರ್ 18: ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ನೂತನ
ಅಧ್ಯಕ್ಷರಾಗಿ ನಿಯೋಜನೆಗೊಂಡಿರುವ ಜೋ ಬೈಡನ್ ಅವರೊಂದಿಗೆ ದೂರವಾಣಿ ಮೂಲಕ ಮಹತ್ವದ ಸಮಾಲೋಚನೆ ನಡೆಸಿದ್ದಾರೆ.
ಕೊರೋನ ಪಿಡುಗು ನಿಗ್ರಹ , ಹವಾಮಾನ ವೈಪರೀತ್ಯ ಹಾಗೂ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿನ ಸಹಕಾರ ಸೇರಿದಂತೆ ನಮ್ಮ ಆದ್ಯತೆಗಳ ಹಂಚಿಕೆ ಮತ್ತು ಸವಾಲುಗಳ ಬಗ್ಗೆ ಚರ್ಚೆ ಮಾತುಕತೆ ನಡೆಸಲಾಗಿದೆ ನಂತರ ಮೋದಿ ಟ್ವೀಟ್ ಮಾಡಿದ್ದಾರೆ
ಜೋ ಬೈಡನ್ ಮತ್ತು ಅವರ ಸಹೋದ್ಯೋಗಿ ಕಮಲಾ ಹ್ಯಾರಿಸ್ ಅಮೆರಿಕ ಚುನಾವಣೆಯಲ್ಲಿನ ಎಲೆಕ್ಟೊರಲ್ ಕಾಲೇಜ್ ಮತಗಳಲ್ಲಿ ಬಹುಮತದ ಗಡಿಯನ್ನು ದಾಟಿ ಆಯ್ಕೆಯಾದ ನಂತರ ಬಳಿಕ ಜಗತ್ತಿನ ಎರಡು ಪ್ರಮುಖ ದೇಶಗಳ ಅಗ್ರ ನಾಯಕರು ಮಾತುಕತೆ ನಡೆಸಿರುವುದು ಇದು ಮೊದಲ ಬಾರಿ.
'ಅಮೆರಿಕ ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಅವರನ್ನು ಅಭಿನಂದಿಸಿಸಲಾಗಿದೆ. ಭಾರತ-ಅಮೆರಿಕ ಕಾರ್ಯತಂತ್ರ ಸಹಭಾಗಿತ್ವದೆಡೆಗಿನ ದೃಢ ಬದ್ಧತೆಯನ್ನು ಈ ಸಂದರ್ಭದಲ್ಲಿ ಪುನರುಚ್ಚರಿಸಲಾಗಿದೆ.
'ಉಪಾಧ್ಯಕ್ಷೆಯಾಗಿ ಚುನಾಯಿತರಾಗಿರುವ ಕಮಲಾ ಹ್ಯಾರಿಸ್ ಅವರಿಗೂ ಈ ವೇಳೆ ಅಭಿನಂದನೆ ಹೇಳಿದ್ದಾರೆ.
ಭಾರತ-ಅಮೆರಿಕ ಸಂಬಂಧವನ್ನು ಬಲಪಡಿಸಲು ಬೃಹತ್ ಮೂಲವಾಗಿರುವ ಭಾರತ-ಅಮೆರಿಕನ್ ಸಮುದಾಯದ ಸದಸ್ಯರಿಗೆ ದೊಡ್ಡ ಹೆಮ್ಮೆ ಮತ್ತು ಸ್ಪೂರ್ತಿದಾಯಕಾಗಿದೆ ಎಂದೂ ನರೇಂದ್ರ ಮೋದಿ ಹೇಳಿದ್ದಾರೆ.