ಶಿಗ್ಗಾವ್

ಬೈಸಿಕಲ್ ವಿತರಣೆ, ಹೊಸ ಹಾಸ್ಟೆಲ್ ನಿರ್ಲಕ್ಷ ಖಂಡನೆ, ಎನ್ಇಪಿ ರದ್ದು ಸ್ವಾಗತ

ಬೈಸಿಕಲ್ ವಿತರಣೆ, ಹೊಸ ಹಾಸ್ಟೆಲ್ ನಿರ್ಲಕ್ಷ ಖಂಡನೆ, ಎನ್ಇಪಿ ರದ್ದು ಸ್ವಾಗತ

ಲೋಕದರ್ಶನ ವರದಿ

ಶಿಗ್ಗಾವಿ 10:  ಎಸ್.ಎಫ್.ಐ ನಿರಂತರವಾಗಿ ವಿರೋಧಿಸುತ್ತಾ ಬಂದಿರುವ ವಿದ್ಯಾರ್ಥಿ  ವಿರೋಧಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರದ್ದು ಮಾಡಿರುವುದನ್ನು ಹಾಗೂ ಹೋರಾಟದ ಅನೇಕ ಬೇಡಿಕೆಗಳಲ್ಲಿ ಸರ್ಕಾರಿ ಶಾಲಾ ಕಾಲೇಜುಗಳ ಕೊಠಡಿ ನಿರ್ಮಾಣಕ್ಕೆ 310ಕೋಟಿ, ಪದವಿ ಪೂರ್ವ ಕಾಲೇಜುಗಳ ಕೊಠಡಿಗಳಿಗೆ 240 ಕೋಟಿ ಸೇರಿ ಒಟ್ಟು 550 ಕೋಟಿ ವೆಚ್ಚದಲ್ಲಿ 8.311 ಕೊಠಡಿಗಳನ್ನು ನಿರ್ಮಿಸಲು ಮತ್ತು 5775 ಶೌಚಾಲಯ ನಿರ್ಮಾಣಕ್ಕೆ 200 ಕೋಟಿ ಅನುದಾನ, ಮಳೆಯಿಂದಾಗಿ ಹಳೆಯ ಶಾಲಾ-ಕಾಲೇಜ್ ಕಟ್ಟಡಗಳ ದುರಸ್ತಿಗೆ 100 ಕೋಟಿ, ನಿರ್ವಹಣೆ ವೆಚ್ಚಕ್ಕಾಗಿ 153 ಕೋಟಿ. ವಿದ್ಯಾಸಿರಿ ಯೋಜನೆ ಮರುಜಾರಿ, ವಿದ್ಯಾರ್ಥಿಗಳ ಪೌಷ್ಟಿಕತೆಯ ದೃಷ್ಟಿಯಿಂದ ಮೊಟ್ಟೆಯನ್ನು ಬರೀ ಕಲ್ಯಾಣ ಕರ್ನಾಟಕಕ್ಕೆ  ಸೀಮಿತಗೊಳಿಸಿತ್ತು  ಹೋರಾಟದ ಪ್ರತಿಫದಿಂದ 1 ರಿಂದ 10 ತರಗತಿಯವರೆಗೆ ಎಲ್ಲಾ ಜಿಲ್ಲೆಗಳಿಗೂ ನೀಡುತ್ತಿರುವುದು ಹಾಗೂ ವಿನೂತನವಾಗಿ ಬುದ್ಧಿಮಾಂದ್ಯ ಮಕ್ಕಳಿಗೆ 7 ಜಿಲ್ಲೆಗಳಲ್ಲಿ 10 ವಸತಿ ನಿಲಯಗಳ ಘೋಷಣೆಯನ್ನು ಭಾರತ ವಿದ್ಯಾಥರ್ಿ ಫೆಡರೇಷನ್ ತಾಲೂಕಾ ಸಮಿತಿಯು ವಿದ್ಯಾರ್ಥಿ ಸಮುದಾಯದ ಪರವಾಗಿ ಸ್ವಾಗತಿಸುತ್ತೇವೆ ಎಂದು ತಾಲೂಕಾಧ್ಯಕ್ಷ ರವಿ ಬಂಕಾಪೂರ ಹೇಳಿದರು.

ಶಿಕ್ಷಣ ಕ್ಷೇತ್ರಕ್ಕೆ ಕೇವಲ 37,587 ಕೋಟಿ ರೂಪಾಯಿ 11% ಹಣ ಮೀಸಲಿಟ್ಟಿದ್ದು ಎಲ್ಲರ ಓಲೈಕೆ ಮಾಡುವ ನೆಪದಲ್ಲಿ ಸಾವಿರಾರು ಕೋಟಿ ರೂಪಾಯಿ ಹಣವನ್ನು ಮೀಸಲಿಡುವುದರ ಮೂಲಕ ಮೆಚ್ಚುಗೆ ಗಳಿಸುತ್ತಿದೆ ಹೊರತು ಶಿಕ್ಷಣ ವ್ಯವಸ್ಥೆಯ ಸಮಗ್ರ ಅಭಿವೃದ್ಧಿಯ ಬಗ್ಗೆ ಯಾವುದೇ ದೂರದೃಷ್ಟಿಕೋನ ಮತ್ತು ಅಭಿವೃದ್ಧಿ ಇಲ್ಲ. ಕಳೆದ ಮೂರು ವರ್ಷಗಳಿಂದ ನಿಂತಿರುವ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಬೈಸಿಕಲ್ ಮರುಜಾರಿ ಸೇರಿದಂತೆ ಉಚಿತ ಲ್ಯಾಪ್ಟಾಪ್, ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್, ಒಂದೇ ಒಂದು ಹೊಸ ಹಾಸ್ಟೆಲ್ ಘೋಷಣೆ ಮಾಡಿಲ್ಲ. ಹಾಸ್ಟೆಲ್ ವಿದ್ಯಾರ್ಥಿಗಳ ಮಾಸಿಕ ಆಹಾರ ಭತ್ಯೆ ಕನಿಷ್ಠ 3500/-ರೂ ಹೆಚ್ಚಿಸಬೇಕೆಂದು ಮುಂತಾದ ಶೈಕ್ಷಣಿಕ ಬೇಡಿಕೆಗಳನ್ನು ಈಡೇರಿಸಲು ಹಾಗೂ ಶಿಕ್ಷಣದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಬಜೆಟ್ ನಲ್ಲಿ 30% ಮೀಸಲಿಡಬೇಕಿತ್ತು. ಘೋಷಣೆಗಳು ಭಾಷಣವಾಗದೆ ಜಾರಿಗೊಳಿಸಲು ಮುಂದಾಗಬೇಕೆಂದು ಎಸ್.ಎಫ್.ಐ ನ ಕಾರ್ಯದರ್ಶಿ ಅರ್ಜುನ ರಜಪೂತ ಒತ್ತಾಯಿಸಿದ್ದಾರೆ 

ಸುದ್ದಿ ಓದಿ