ರಸ್ತೆ ಕಾಮಗಾರಿಗೆ ಭೂಮಿ ಪೂಜೆ
ಬಳ್ಳಾರಿ/ಹೊಸಪೇಟೆ, ಆಗುಸ್ಟ್.21: 2019-20ನೇ ಸಾಲಿನ ಲೋಕೋಪಯೋಗಿ ಇಲಾಖೆಯ ವತಿಯಿಂದ ನಗರದ ಕೊಂಡನಾಯಕನ ಹಳ್ಳಿಯಿಂದ ನಂ.82 ಡಣಾಪುರ ರಸ್ತೆವರೆಗೆ ಅಯ್ದ ಭಾಗಗಳಲ್ಲಿ ಒಟ್ಟು 1ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶುಕ್ರವಾರದಂದು ಭೂಮಿಪೂಜೆ ನೆರವೇರಿಸಲಾಯಿತು.
ಲೋಕೋಪಯೊಗಿ ಇಲಾಖೆಯ 2019-20ನೇ ಸಾಲಿನ ಅಪೆಂಡಿಕ್ಸ್-ಇ ಯೋಜನೆಯ ಅಡಿಯಲ್ಲಿ ಮಂಜೂರಾದ 1 ಕೋಟಿ ರೂ. ವೆಚ್ಚದಲ್ಲಿ ಕೊಂಡನಾಯಕನಹಳ್ಳಿಯಿಂದ ನಂ.82 ಡಣಾಪುರ ಮಾರ್ಗದ ರಸ್ತೆಯ ವಿವಿಧ ಆಯ್ದ ಭಾಗಗಳಲ್ಲಿ ಮರುಡಾಂಬರೀಕರಣ ಕಾಮಗಾರಿಗೆ ಹೊಸಪೇಟೆ ತಾಲೂಕು ಪಂಚಾಯತಿ ಅಧ್ಯಕ್ಷರಾದ ನಾಗವೇಣಿ ಬಸವರಾಜ್ ಅವರು ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಹುಡಾ ಅಧ್ಯಕ್ಷರಾದ ಅಶೋಕ್ ಜೀರೆ, ಮಾಜಿ ಹುಡಾ ಅಧ್ಯಕ್ಷಾರದ ಅಯ್ಯಾಳಿ ತಿಮ್ಮಪ್ಪ, ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕರಾದ ಧಮೇಂದ್ರ ಸಿಂಗ್, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಾದ ಲಕ್ಷ್ಮಣ ಸೇರಿದಂತೆ ಎಲ್.ಸಿದ್ಧನಗೌಡ, ಬಸವರಾಜ, ಆರ್.ಕೊಟ್ರೇಶ್ ಹಾಗೂ ಗ್ರಾಮದ ಮುಖಂಡರು ಇದ್ದರು.