ಸಿಂಧಗಿ

ಸಮುದಾಯ ಭವನ ಕಾಮಗಾರಿಗೆ ಭೂಮಿ ಪೂಜೆ

ಸಮುದಾಯ ಭವನ ಕಾಮಗಾರಿಗೆ ಭೂಮಿ ಪೂಜೆ

ಸಿಂದಗಿ 09:  ಗ್ರಾಮೀಣ ಪ್ರದೇಶಗಳ ರಸ್ತೆಗಳು, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಸಮರ​‍್ಕವಾಗಿ ಒದಗಿಸಿದಾಗ ಗ್ರಾಮೀಣ ಪ್ರದೇಶಗಳು ಅಭಿವೃದ್ದಿಯಾಗುವುದರೊಂದಿಗೆ ದೇಶದ ಉನ್ನತಿಗೂ ಕಾರಣವಾಗುತ್ತವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. 

ತಾಲೂಕಿನ ಯಂಕಂಚಿ ಗ್ರಾಮದಲ್ಲಿ ಜಿಲ್ಲಾಪಂಚಾಯತ ವಿಜಯಪುರ ಪಂಚಾಯತ ರಾಜ್ಯ ಇಂಡಿ ಉಪ ವಿಭಾಗ ಸಿಂದಗಿ 2023-24 ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಗ್ರಾಮದ ವಾರ್ಡ 4 ರಲ್ಲಿ ರೂ 40 ಲಕ್ಷದಲ್ಲಿ ಸಿಸಿ ರಸ್ತೆ ನಿರ್ಮಾಣ ಹಾಗೂ 2023-24 ನೇ ಸಾಲಿನ ಸ್ಥಳಿಯ ಶಾಸಕರ ಪ್ರದೇಶ ಅಭಿವೃದ್ದಿ ಯೋಜನೆಯಡಿಯಲ್ಲಿ ಜಟ್ಟಿಂಗರಾಯ ದೇವಸ್ಥಾನದ ಹತ್ತಿರ ರೂ 4 ಲಕ್ಷದಲ್ಲಿ ಸಮುದಾಯ ಭವನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. 

ಗ್ರಾಮೀಣ ಪ್ರದೇಶದ ಜನರು ಮೂಲಬೂತ ಸೌಕರ್ಯಗಳಿಂದ ವಂಚಿತರಾಗಬಾರದು. ಈ ದೇಶ ಹಳ್ಳಿಗಳಿಂದ ಕೂಡಿದ ದೇಶ. ಮತ ಕ್ಷೇತ್ರದ ಪ್ರತಿ ಹಳ್ಳಿಗಳು ಎಲ್ಲ ಮೂಲಭೂತ ಸೌಕರ್ಯಗಳಿಂದ ಕೂಡಿರಬೇಕು ಎಂಬ ಉದ್ದೇಶದಿಂದ ಅನೇಕ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದೇವೆ. ಮುಂಬರುವ ದಿನಗಳಲ್ಲಿ ಉತ್ತಮ ರಸ್ತೆ, ಬೀದಿ ದೀಪ ಮತ್ತು ಆರೋಗ್ಯ, ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಲಾಗುವುದು ಎಂದರು. 

ಈ ವೇಳೆ ಗ್ರಾಮ ಪಂಚಾಯತ ಅಧ್ಯಕ್ಷ ಬಸವರಾಜ ಅಳ್ಳಗಿ, ಜಗದೀಶ ಹೂನಳ್ಳಿ, ಶರಣು ತಳಗೇರಿ, ರಮೇಶ ತಳಗೇರಿ, ಕರೆಪ್ಪ ತಳಗೇರಿ, ಗುರ​‍್ಪ ನಾಯ್ಕೋಡಿ, ವಾಯ್‌.ಪಿ.ನಾಯ್ಕೋಡಿ, ಹಣಮಂತ ತೆನ್ನಳ್ಳಿ, ಶಂಕರಗೌಡ ಬಿರಾದಾರ, ನಿಂಗನಗೌಡ ಬಿರಾದಾರ, ಚಂದ್ರಕಾಂತ ಕುಲಕರ್ಣಿ, ರಾಜಾಸಾಬ ಡೊಣುರ, ಪರುಶುರಾಮ ನಾಯ್ಕೋಡಿ, ಪ್ರಕಾಶ ಮುಜಾವರ, ಹಿರೇಮಠ, ಚೇತನಗೌಡ ಪಾಟೀಲ, ರುದ್ರಗೌಡ ಪಾಟೀಲ, ಯಮುನಪ್ಪ ಸುಂಬಡ, ಮಲ್ಲು ನಾಯ್ಕೋಡಿ ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ