ಸೌಂದತ್ತಿ

ಅಮೃತ ನಗರೋತ್ಥಾನ ಕಾಮಗಾರಿಗೆ ಭೂಮಿ ಪೂಜೆ

ಅಮೃತ ನಗರೋತ್ಥಾನ ಕಾಮಗಾರಿಗೆ ಭೂಮಿ ಪೂಜೆ

ಸವದತ್ತಿ 05-: ಪುರಸಭೆಯ ವಿವಿಧ ವಾರ್ಡಗಳ ವ್ಯಾಪ್ತಿಯ ನಗರೋತ್ಥಾನ ಯೋಜನೆಯಡಿ ಮಂಜೂರಾದ 4.61 ಕೋಟಿ ರೂ. ಅನುದಾನದ ಕಾಮಗಾರಿಗೆ ಇಲ್ಲಿನ ಎಸ್ಎಲ್ಎಓ ಕ್ರಾಸ್ನಲ್ಲಿ ಪುರಸಭೆ ಅಧ್ಯಕ್ಷ ರಾಜಶೇಖರ ಕಾರದಗಿ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. 

ಬಳಿಕ ಮಾತನಾಡಿದ ಅವರು, ಪಟ್ಟಣದ ಅಭಿವೃದ್ಧಿಗೆ ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆಯ ಅನುದಾನದಲ್ಲಿ ವಿವಿಧ ವಾರ್ಡಗಳಲ್ಲಿ ರಸ್ತೆ, ಚರಂಡಿ ಕಾಮಗಾರಿಗಳು ಅನುಷ್ಠಾನಗೊಳ್ಳಲಿವೆ. ರಸ್ತೆಗಳ ಅಭಿವೃದ್ಧಿ ಜೊತೆ ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆ ಕಲ್ಪಿಸಲಾಗುವದು ಎಂದರು.

ಈ ವೇಳೆ ಲಕ್ಷ್ಮಣರಾವ್ ಕುಲಕಣರ್ಿ, ಶಿವಾನಂದ ಹೂಗಾರ, ಪಿ.ಎಮ್. ಚನ್ನಪ್ಪನವರ, ಎಚ್.ಎ. ಕದ್ರಾಪೂರಕರ್, ಜೆಇ ನಿರ್ಮಲಾ ನಾಯಕ, ಗುತ್ತಿಗೆದಾರ ಪ್ರಕಾಶ ಅಂಚಿ ಇತರರು ಇದ್ದರು.

 

ಸುದ್ದಿ ಓದಿ