ಬಳ್ಳಾರಿ

ಸರ್ಕಾರದ ಯೋಜನೆಗಳನ್ನು ಪ್ರತಿಯಂದು ಅರ್ಹ ಕುಟುಂಬ ಉಪಯೋಗ ಪಡೆದುಕೊಳ್ಳಲಿ, ಭೀಮಪ್ಪ ಕರೆ

ಸರ್ಕಾರದ ಯೋಜನೆಗಳನ್ನು ಪ್ರತಿಯಂದು  ಅರ್ಹ ಕುಟುಂಬ ಉಪಯೋಗ ಪಡೆದುಕೊಳ್ಳಲಿ, ಭೀಮಪ್ಪ ಕರೆ

ಬಳ್ಳಾರಿ : ಜೂ (25)ರಂದು ಹಿಂದುಳಿದ ಸಮಾಜ ಆರ್ಥಿಕ ಅಭಿವೃದ್ಧಿ ಹೊಂದಲು, ರಾಜ್ಯ ಸರ್ಕಾರ ಕಲ್ಪಿಸುವ ಹಲವಾರು ಯೋಜನೆಗಳನ್ನು ಜಿಲ್ಲೆಯಲ್ಲಿರುವ ಅರ್ಹತೆವುಳ್ಳ ಕುಟುಂಬಗಳು  ಉಪಯೋಗ ಪಡೆಯಲು, ಮುಂದಾಗ ಬೇಕೆಂದು ತಿಳಿಸಿದರು. ನಂತರ ಈ  ಇಲಾಖೆ ವತಿಯಿಂದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಲು ಸ್ವಯಂ ಸೇವಾ ಸಾಲ ಯೋಜನೆ, ಸಂಪ್ರದಾಯಿಕ ಸಾಲ ಸೌಲಭ್ಯ ಯೋಜನೆ, ಸಣ್ಣ ಇಡುವಳಿ ರೈತರು ಹಾಗೂ ರೈತಾಪಿ ವರ್ಗದವರಿಗೆ ಗಂಗಾ ಕಲ್ಯಾಣ ಯೋಜನೆ ಈ ಯೋಜನೆಯು ಎರಡು ಎಕರೆಯಿಂದ 5 ಎಕರೆ ಒಳಗಡೆ ಇರುವಂತಹ ಫಲಾನುಭವಿಗಳು ಮಾತ್ರ ಅರ್ಜಿ ಸಲ್ಲಿಸು ತಕ್ಕದ್ದು ಇವರು ಮಾತ್ರ ಈ ಯೋಜನೆಗೆ ಅರ್ಹರಿರುತ್ತಾರೆ. 

5 ಎಕರೆಗಿಂತ ಹೆಚ್ಚಿನ ಭೂಮಿ ಒಂದಿದ್ದರೆ ಅವರಿಗೆ ಈ ಯೋಜನೆಯು ಅನ್ವಯ ಆಗುವುದಿಲ್ಲ, ತರುವಾಯ ಬಡತನ ರೇಖೆಗಿಂತ ಕೆಳಗಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹಾಗೂ ವರ ರಾಜ್ಯ ದೇಶಗಳಲ್ಲಿ ವಿದ್ಯಾಭ್ಯಾಸ ಪಡೆಯಲು ಶೇಕಡ 3ಅ ರಷ್ಟು ಅತಿ ಕಡಿಮೆ ಬಡ್ಡಿ ದರದಲ್ಲಿ ಶಿಕ್ಷಣದ ಸಾಲುರೂಪವಾಗಿ ಆಯಾ ಹೋಬಳಿ ಹಾಗೂ ವಲಯಗಳ ಮಟ್ಟಕ್ಕೆ ಸಂಬಂಧಿಸಿದ ಬ್ಯಾಂಕುಗಳ ಮುಖಾಂತರವಾಗಿ   ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಡಿ.ದೇವರಾಜ ಅರಸ್, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಬಳ್ಳಾರಿ ಜಿಲ್ಲಾ  ವ್ಯವಸ್ಥಾಪಕರು, ಭೀಮಪ್ಪ  ಕರೆ ನೀಡಿದರು. 

ರಾಜ್ಯದ ಹಿಂದುಳಿದ  ವರ್ಗಗಳಲ್ಲಿ, ಸೇರಿದ ವಿವಿಧ ಕುಲಗಳಿಗೆ  ಪ್ರಧಾನವಾಗಿ, ಸ್ವಯಂ ಉದ್ಯೋಗ ಸಾಲ ಯೋಜನೆ, ಗಂಗಾ ಕಲ್ಯಾಣ ನೀರಾವರಿ ಯೋಜನೆ, ಸಮಾಜಕ್ಕೆ ಸೇರಿದ ವಿದ್ಯಾರ್ಥಿಗಳಿಗಾಗಿಅರಿವು, ಶೈಕ್ಷಣಿಕ ಸಾಲ ಯೋಜನೆ, ವಿದೇಶಿ ವ್ಯಾಸಾಂಗ ಸಾಲ ಯೋಜನೆಗಳು ಅನುಷ್ಠಾನಗೊಳಿಸಿ ಇರುವುದಾಗಿ, ಇವನ್ನು, ಕರ್ನಾಟಕ ಒಕ್ಕಲಿಗರ ಸಮುದಾಯದ ಅಭಿವೃದ್ಧಿ ನಿಗಮ ಮುಖಾಂತರ ಅನುಷ್ಠಾನಗೊಳಿಸುತ್ತಿರುವದಾಗಿ ತಿಳಿಸಿದರು.  

ವ್ಯಕ್ತಿಗತ ವ್ಯಾಪಾರ ನಡೆಸಲು ಸಾಂಪ್ರದಾಯಿಕ ಸಾಲ ಯೋಜನೆ ಅಡಿ 1 ಲಕ್ಷ ನೀಡುತ್ತಿರುವದಾಗಿ, ಅದೇ ರೀತಿಯಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಕುಟುಂಬದ ವ್ಯಕ್ತಿಗೆ ಜಮೀನು ಇದ್ದರೆ, ಗಂಗಾ ಕಲ್ಯಾಣ ಯೋಜನೆ ಅಡಿ ಬೋರುಕೂಡಿಸಲು ಎರಡು ಲಕ್ಷ ಸಾಲ ನೀಡುತ್ತಿರುವುದಾಗಿ ತಿಳಿಸಿದರು.  ಮಕ್ಕಳು ವಿದ್ಯಾವಂತರಾಗಲು ರೂ. 1 ಲಕ್ಷ ಅರಿವು ಯೋಜನೆ ಯಡೆ ಶೈಕ್ಷಣಿಕ ಸಾಲ ನೀಡಲಾಗುವುದು ಎಂದರು. ಇದೇ ರೀತಿಯಾಗಿ ವಿದೇಶಿ ವ್ಯಾಸಾಂಗ ಸಾಲ ಯೋಜನೆ ಅಡಿ 10 ಲಕ್ಷದಿಂದ 20 ಲಕ್ಷ ರೂಪಾಯಿವರೆಗೂ, ಶೇಕಡ 2  ರ ಬಡ್ಡಿ ದರದಲ್ಲಿ ಮಂಜೂರು ಮಾಡಲಾಗುವುದು ಎಂದು ತಿಳಿಸಿದರು. 

ಹಿಂದುಳಿದ ವರ್ಗಗಳ ಸಮಾಜ ಸಂಪೂರ್ಣ ಆರ್ಥಿಕ ಅಭಿವೃದ್ಧಿ ಹೊಂದಲು ಸರ್ಕಾರ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವುದು, ಇದನ್ನು ಪ್ರತಿ ಕುಟುಂಬ ಉಪಯೋಗ ಪಡೆದುಕೊಳ್ಳಬೇಕು ಎಂದು, ಈ ಸಂದರ್ಭದಲ್ಲಿ ಭೀಮಪ್ಪ ಅವರು ತಿಳಿಸಿದರು. ಸಾಲ ಯೋಜನೆಗಳ ಬಗ್ಗೆ ಸಂಪೂರ್ಣ ಹೆಚ್ಚಿನ  ಮಾಹಿತಿ ಪಡೆಯಲು  ಕಚೇರಿಗೆ ಸಂಪರ್ಕಿಸಬಹುದು. 


ಸುದ್ದಿ ಓದಿ