ಜೈನ ಜನಪದ ಸಿರಿ ಪ್ರಶಸ್ತಿಗೆ ಭಾರತಿ ಛಬ್ಬಿ ಭಾಜನ
ಶಿಗ್ಗಾವಿ 23: ಕರ್ನಾಟಕ ಜೈನ ಧರ್ಮ ಬಳಗ ಜಿನಗಾನ ಸುಧಾಬಳಗ ಮತ್ತು ಸುಹಾಸ್ತಿ ಯುವ ಜೈನ ಮಿಲನ್ ಬೆಂಗಳೂರು ಆಯೋಜನೆಯಲ್ಲಿ ನಡೆದ ಜೈನ ಜನಪದ ಸೀಜನ್ -2 ರ ಫೈನಲ್ಸ್ ಕಾರ್ಯಕ್ರಮದಲ್ಲಿ ಜೈನ ಜನಪದ ಹಾಡುಗಾರಿಕೆ ಕ್ಷೇತ್ರದಲ್ಲಿ ಅಪಾರ ಸಾಧನೆಗೈದ ಭಾರತಿ ವರ್ಧಮಾನ್ ಛಬ್ಬಿ ಕಿತ್ತೂರ ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದೆ ಜೈನ ಜನಪದ ಸಿರಿ ಎಂಬ ಪ್ರಶಸ್ತಿ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಶ್ರೀ ಜ್ವಾಲಾಮಾಲಿನಿ ದೇವಿ ಅತಿಶಯ ಕ್ಷೇತ್ರ ಪೆನಗೊಂಡೆ ಮಹಾಸಂಸ್ಥಾನ ಅತಿಶಯ ಕ್ಷೇತ್ರ ಸಿಂಹನಗದ್ದೆ ನರಸಿಂಹರಾಜಪುರ. ಇವರ ಆಶ್ರಯದಲ್ಲಿ ಪ. ಪೂ. ಸ್ವಸ್ತಿ ಶ್ರೀ ಲಕ್ಷ್ಮೀಶೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿಯವರ ಶುಭ ಆಶೀರ್ವಾದಿಸಿದರು.
ಈ ಸಂದರ್ಭದಲ್ಲಿ. ಸಂಘಟಕಿ ಕವಿತ್ರಿ ಜ್ಯೋತಿ ನೇಮರಾಜ, ಜನಪದ ತಜ್ಞರು ಹಿರಿಯ ಸಾಹಿತಿ ಸಂಶೋಧಕರು ಡಾ. ಎಸ್.ಪಿ. ಪದ್ಮಪ್ರಸಾದ, ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ ಡಾ. ನೀರಜಾ ನಾಗೇಂದ್ರ ಕುಮಾರ ಡಾ. ಜೀವನ ಜೈನ್. ರತ್ನಕುಮಾರ್ ಜೈನ್. ಅಜಿತ್ ಮುರುಗುಂಡಿ ಸಾಂಕಿಕ ಸಚಿವರು. ಎಸ್ ಟಿ ಮುನವಳ್ಳಿ ಚಿಕ್ಕೋಡಿ ಹಿರಿಯ ವಕೀಲರು. ಇನ್ನು ಅನೇಕ ಗಣ್ಯ ಮಾನ್ಯರು ಉಪಸ್ಥಿತರಿದ್ದರು.