ಶಿಗ್ಗಾವ್

ಜಾನಪದ ಕಲಾರತ್ನ ಪ್ರಶಸ್ತಿಗೆ ಭಾಜನ

ಜಾನಪದ ಕಲಾರತ್ನ ಪ್ರಶಸ್ತಿಗೆ ಭಾಜನ

ಲೋಕದರ್ಶನ ವರದಿ

ಶಿಗ್ಗಾವಿ 18: ಪಟ್ಟಣದ ಸಮಾಜ ಸೇವಕಿ ಹಾಗೂ ಕಲಾವಿದೆ ವಿಜಯಲಕ್ಷ್ಮೀ ಹರವಿ ಅವರು ಜಾನಪದ ಕಲಾರತ್ನ ಪ್ರಶಸ್ತಿಗೆ ಭಾಜನರಾಗಿದ್ದು ಅವರಿಗೆ ವಚನ ನಿಧಿ ವನಿತಾ ಸಂಘದ ಅಧ್ಯಕ್ಷೆ ಡಾ. ಲತಾ ನಿಡಗುಂದಿ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ಸುಶೀಲಕ್ಕ ಪಾಟೀಲ, ವಚನ ನಿಧಿ ಸಂಘದ ಸದಸ್ಯ ಪ್ರತಿಭಾ ನಿಜಗುಣಿ, ಅನಿತಾ ಗೊಬ್ಬರಗುಂಪಿ, ವಿಜಯಲಕ್ಷ್ಮೀ ಹೆಸರೂರ, ಸುಜಾತಾ ಬಳಿಗಾರ ಸೇರಿದಂತೆ ವಚನ ನಿಧಿ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು 

ಸುದ್ದಿ ಓದಿ