ರಾಣೆಬೆನ್ನೂರ

ಪ್ರಾಧ್ಯಾಪಕರಿಗೆ ಬೆಸ್ಟ್ ಇ-ಕಂಟೆಂಟ್ ಡೆವಲಪರ್ ಗೌರವ

ಪ್ರಾಧ್ಯಾಪಕರಿಗೆ ಬೆಸ್ಟ್ ಇ-ಕಂಟೆಂಟ್ ಡೆವಲಪರ್ ಗೌರವ

ರಾಣೇಬೆನ್ನೂರು 15:  ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಬೋಧನೆ ಮತ್ತು ಕಲಿಕೆಯಲ್ಲಿ ಅಮೂಲಾಗ್ರ ಬದಲಾವಣೆ ತರುವ ಉದ್ದೇಶದಿಂದ ರಾಜ್ಯ ಸರ್ಕಾರವು ಕಲಿಕಾ ನಿರ್ವಹಣೆ ವ್ಯವಸ್ಥೆ (ಎಲ್‍ಎಂಎಸ್)ಡಿಜಿಟಲ್ ಕಲಿಕೆಯನ್ನು ಜಾರಿ ಮಾಡಿದೆ.ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ನಿರ್ವಹಿಸುತ್ತಿರುವ ಎಲ್.ಎಂ.ಎಸ್ ಕಲಿಕೆಯ  ಕಂಟೆಂಟ್‍ನ್ನು ತಯಾರಿಸಿದ ಕರ್ನಾಟಕ ವಿಶ್ವವಿಧ್ಯಾಲಯ ವ್ಯಾಪ್ತಿಯ ಮೂರು ಸರ್ಕಾರಿ ಪ್ರಥಮ ಧರ್ಜೆ ಕಾಲೇಜುಗಳ ಮೂವರು ಪ್ರಾಧ್ಯಾಪಕರಿಗೆ ಬೆಸ್ಟ್ ಇ-ಕಂಟೆಂಟ್ ಡೆವಲಪರ್ ಗೌರವ ನೀಡಿ ಅಭಿನಂದಿಸಿದೆ.

ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ವಿವಿಧ ವಿಷಯಗಳ ಮೇಲೆ ಕಂಟೆಂಟ್ ಸಿದ್ದ ಪಡಿಸಲು ಕಾಲೇಜು ಶಿಕ್ಷಣ ಇಲಾಖೆ ಆಯಾ ವಿಷಯಗಳ ಪ್ರಾದ್ಯಾಪಕರಿಗೆ ಅವಕಾಶ ಕಲ್ಪಿಸಿತ್ತು ಅದರಲ್ಲಿ ರಾಣೇಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಶಾಸ್ರ್ತ ವಿಭಾಗದ ಸಹಾಯಕ ಪ್ರಾದ್ಯಾಪಕರಾದ ಸುನೀಲ್ ಎಂ. ಎಸ್ ಅವರು ತಮ್ಮ ವೈಚಾರಿಕ ಪ್ರತಿಭೆÉ ಮೆರೆದು ಕಾಲೇಜಿಗೆ ಮತ್ತು ಜಿಲ್ಲೆಗೆ ಹಾಗೂ ಶಿಕ್ಷಣ ಇಲಾಖೆಗೆ ಕೀರ್ತಿ ತಂದಿದ್ದಾರೆ. ಇವರೂಂದಿಗೆ ಬ್ಯಾಡಗಿ ಪ್ರಥಮ ದರ್ಜೆ ಕಾಲೇಜಿನ ಜೆ.ಸಿ ಇಂಡಿಮಠ ಹಾಗೂ ಉತ್ತರ ಕನ್ನಡ ಶಿರಸಿ ಪ್ರಥಮ ದರ್ಜೆ ಕಾಲೇಜಿನ ಅಧ್ಯಾಪಕಿ ಡಾ.ಅನಿತಾ ಮೋಹನ ಬೆಳಗಾಂವಕರ್ ಇವರುಗಳು ತಮ್ಮ ಸಾಧನೆ ಮೆರೆದಿದ್ದಾರೆ. ಅಯಾ ಕಾಲೇಜಿನ ಪ್ರಾಂಶುಪಾಲರು, ಅಧ್ಯಾಪಕರು ಮತ್ತು ಸಿಬ್ಬಂದಿ ಹಾರ್ದಿಕವಾಗಿ ಅಭಿನಂದಿಸಿದ್ದಾರೆ.

ಸುದ್ದಿ ಓದಿ