ರಾಷ್ಟ್ರ ಪ್ರಶಸ್ತಿ ಪಡೆದ ಬೂದಿಹಾಳ ಪ್ರೌಢಶಾಲೆಗೆ ಅಭಿನಂದನೆ
ಬೈಲಹೊಂಗಲ 21: 2020-21 ನೆಯ ಸಾಲಿನ ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ನಿರ್ವಹಣಾ ಸಂಸ್ಥೆ (ಎನ್‌ಐಇಪಿಎ) ಹಾಗೂ ರಾಷ್ಟ್ರೀಯ ಶಾಲಾ ನಾಯಕತ್ವ ಕೇಂದ್ರ (ಎನ್‌ಸಿಎಸ್‌ಎಲ್) ಯೋಜನೆಯಡಿ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಂಡ ಹಿನ್ನೆಲೆಯಲ್ಲಿ ರಾಷ್ಟ್ರಪ್ರಶಸ್ತಿಗೆ ಬೈಲಹೊಂಗಲ ತಾಲೂಕಿನ ಬೂದಿಹಾಳದ ಸರಕಾರಿ ಪ್ರೌಢಶಾಲೆ ಆಯ್ಕೆಯಾಗಿ ರಾಜ್ಯದ 10 ಶಾಲೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಶಾಲೆಯ ಈ ಸಾಧನೆಯನ್ನು ಮೆಚ್ಚಿ ಬೈಲಹೊಂಗಲ ತಾಪಂ ಸಭಾಭವನದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಹಾಗೂ ಕಿತ್ತೂರ ಶಾಸಕ ಮಹಾಂತೇಶ ದೊಡಗೌಡರ ಬೂದಿಹಾಳ ಪ್ರೌಢಶಾಲೆಯ ಮುಖ್ಯಶಿಕ್ಷಕ ಎನ್.ಆರ್. ಠಕ್ಕಾಯಿ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವಲ್ಲಿ ಶಾಲೆಯ ಶಿಕ್ಷಕರು, ಎಸ್.ಡಿ.ಎಂ.ಸಿ ಪದಾಧಿಕಾರಿಗಳು ಹಾಗೂ ಸಮುದಾಯದ ಪ್ರಯತ್ನ ಮತ್ತು ಪರಿಶ್ರಮವನ್ನು ಶ್ಲಾಘಿಸಿದರು.
ಬೈಲಹೊಂಗಲ ತಹಶೀಲ್ದಾರ ಬಸವರಾಜ ನಾಗರಾಳ, ಕಿತ್ತೂರ ತಹಶೀಲ್ದಾರ ಸೋಮಲಿಂಗ ಹಾಲಗಿ, ತಾಪಂ ಇಓ ಸುಭಾಷ ಸಂಪಗಾವಿ, ಬಿಇಒ ಗುರುನಾಥ ಹೂಗಾರ, ಸಿಡಿಪಿಒ ರೇವತಿ ಹಿರೇಮಠ, ತಾಪಂ ಸಹಾಯಕ ನಿರ್ದೇಶಕ ವಿಜಯ ಪಾಟೀಲ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪ್ರಕಾಶ ಮೆಳವಂಕಿ, ಪ್ರೊಬೇಷನರಿ ತಹಶೀಲ್ದಾರ ಮಹೇಶ ಪತ್ರಿ, ತಾಲೂಕಾ ವೈದ್ಯಾಧಿಕಾರಿ ಡಾ.ಎಸ್.ಎಸ್ ಸಿದ್ದನ್ನವರ, ಕೆ.ಐ ನಾಗನೂರ, ವೀರಣ್ಣ ಆನಿಕಿವಿ, ಸಿ.ಬಿ ಯಮನೂರ, ಶೀಲಾ ಮುರಗೋಡ, ಕೆ. ರಾಮಣ್ಣ, ಐ.ಎಸ್.ಕೋಲಾರ, ಚೇತನ ಸಾಣಿಕೊಪ್ಪ, ಸುರೇಶ ರೋಡಬಸಣ್ಣವರ, ಶಿವಾನಂದ ಗುರ್ಲಕಟ್ಟಿ ಹಾಗೂ ಇನ್ನಿತರ ತಾಲೂಕಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.