ಕರ್ನಾಟಕ ವಿವಿಧೋದ್ದೇಶ ಸಂಸ್ಥೆಗೆ ಉತ್ತಮ ಸೌಹಾರ್ದ ಸಹಕಾರಿ ಪ್ರಶಸ್ತಿ
ಚಿಕ್ಕೋಡಿ 10: ಇಲ್ಲಿನ ಕರ್ನಾಟಕ ಮಲ್ಟಿಪರ್ಪಜ ಸೌಹಾರ್ದ ಸಹಕಾರಿ ಸಂಸ್ಥೆಗೆ ಉತ್ತಮ ಸೌಹಾರ್ದ ಸಹಕಾರಿ ಪ್ರಶಸ್ತಿ ಲಭಿಸಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ವಾರ್ಷಿಕ ಸಭೆಯಲ್ಲಿ ಉತ್ತಮವಾಗಿ ಗ್ರಾಹಕರಿಗೆ ಸೇವೆ ನೀಡಿದ ಚಿಕ್ಕೋಡಿಯ ಕರ್ನಾಟಕ ಮಲ್ಟಿಪರ್ಪಜ ಸೌಹಾರ್ದ ಸಹಕಾರಿಗೆ ಪ್ರಸಕ್ತ ವರ್ಷದ ಉತ್ತಮ ಸಹಕಾರಿ ಸಂಸ್ಥೆ ಎಂದು ಪ್ರಶಸ್ತಿ ಪಡೆದುಕೊಂಡಿದೆ.
ಸಹಕಾರ ಸಚಿವ ಎಚ್.ಕೆ.ಪಾಟೀಲ, ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಜಿ.ನಂಜನಗೌಡ, ಸಂಚಾಲಕ ಜಗದೀಶ ಕವಟಗಿಮಠ ಅವರು ಸಂಸ್ಥೆಯ ಅಧ್ಯಕ್ಷ ಆರ್.ಐ.ಖೋತ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.
ಸಂಸ್ಥೆಯ ಸಂಚಾಲಕ ಪ್ರಲ್ಹಾದ ಕದಮ್, ಸಂಜಯ ಚೌಗಲಾ, ವಿಜೇಂದ್ರ ನಲವಡೆ, ಸಿದ್ದೇಶ್ವರ ಪಾಟೀಲ, ಮಧುಕರ ಯರಂಡೋಳೆ, ಕೃಷ್ಣಾ ವಚಕಲ, ಮಾರುತಿ ದಿವಟೆ, ವೆಂಕಟೇಶ್ವರ ಕದಮ್, ಶಾಂತಾ ಕದಮ್, ಸ್ವೇತಾ ಕುಲಕರ್ಣಿ, ಪದ್ಮಾ ಚೌಗಲಾ, ವ್ಯವಸ್ಥಾಪಕ ಅಕ್ತರಹುಸೆನ್ ರಾಜಗೋಳಿ ಇದ್ದರು.