ಬಳ್ಳಾರಿ

ಬಳ್ಳಾರಿ-1 ಕಛೇರಿಯನ್ನು ಪುನರಾಂಭಿಸಿ: ನಾರಾಯಣಸ್ವಾಮಿ ಒತ್ತಾಯ

ಬಳ್ಳಾರಿ-1 ಕಛೇರಿಯನ್ನು ಪುನರಾಂಭಿಸಿ: ನಾರಾಯಣಸ್ವಾಮಿ ಒತ್ತಾಯ


ಬಳ್ಳಾರಿ ಫೆ 10: ರಂದು ನಗರ ಭಾಗದ ಮೋತಿ ವೃತ್ತದ ಬಳಿ ಇರುವ ಬುಡಾ ಕಾಂಪ್ಲೆಕ್ಸ್‌ನಲ್ಲಿರುವ ಬಳ್ಳಾರಿ-1 ಕಛೇರಿಯು ಕಳೆದ 5-6 ವರ್ಷಗಳಿಂದ ಇಲ್ಲಿ ಬರುವಂತಹ ಸಾರ್ವಜನಿಕರಿಗೆ  ಆಧಾರ್ ಕಾರ್ಡ, ಪಡಿತರ ಚೀಟಿ,ಮನೆ ತೆರಿಗೆ, ವಿದ್ಯಾರ್ಥಿಗಳ, ಕಾಲೇಜಿನ ಶುಲ್ಕ ಪಾವತಿ, ವಿದ್ಯುತ್ ಬಿಲ್,ಇನ್ನು ಇತರೆ ಸೇವೆಗಳನ್ನು ಉತ್ತಮವಾಗಿ ಒದಗಿಸುತ್ತಾ ಬಂದಿರುತ್ತದೆ. ಆದರೆ ಕಳೆದ ವರ್ಷ 16.02.2012 ರಂದು ವಿದ್ಯುತ್ ಸ್ಪರ್ಶದಿಂದಾಗಿ ಕಛೇರಿಯಲ್ಲಿ ಎಲ್ಲ ಉಪಕರಣಗಳು, ಕಂಪ್ಯೂಟರ್‌ಗಳು ಇನ್ನೂ ಇತರೆ ವಸ್ತುಗಳು  ಸುಟ್ಟು ಹೋಗಿರುತ್ತವೆ. ಆದರೆ ಈ ಕಛೇರಿಯನ್ನು ಸಮ ಪ್ರಾರಂಭಿಸದೇ ಇರುವುದು ವಿಷಾದನೀಯ! ಏಕೆಂದರೆ ಆದರೂ ಸಹ ಇಲ್ಲಿ ದಿನನಿತ್ಯ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಬಂದು ಬಳ್ಳಾರಿ-1 ಕಛೇರಿಯನ್ನು ಮುಚ್ಚಿರುವುದು ನೋಡಿ ನಿರಾಸೆಯಿಂದ ಹಿಂದಿರುಗಿರುತ್ತಾರೆ. ಬುಡಾ ಕಾಂಪ್ಲೆಕ್ಸ್‌ನಲ್ಲಿರುವ ಬಳರಿ-1 ಕಛೇರಿಯು ಕೆ.ಎಸ್‌.ಆರಿ​‍್ಟ.ಸಿ ಮತ್ತು ಖಾಸಗಿ ಬಸ್ ನಿಲ್ದಾಣಗಳು ಹತ್ತಿರವಿರುವುದರಿಂದ ಸುತ್ತಮುತ್ತಲಿನಿಂದ ಬಂದ ಹಳ್ಳಿ ಜನರಿಗೆ ಇದರಿಂದ ತುಂಬಾ ತೊಂದರೆಯಾಗುತ್ತಿದೆ. ಹಾಗೂ ಉತ್ತಮ ಸಮಾಜಕ್ಕಾಗಿ ನಗರದ ಸಾರ್ವಜನಿಕರಿಗೆ ಉಪಯೋಗವಾಗುವ ಹಿತದೃಷ್ಟಿಯಿಂದ ತಾವುಗಳು ಬುಡಕಾಂಪ್ಲೆಕ್ಸ್‌ ನಲ್ಲಿರುವ ಬಳ್ಳಾರಿ-1 ಕಚೇರಿಯನ್ನು ಪುನಃ ಪ್ರಾರಂಭಿಸಲು ತಮ್ಮಲ್ಲಿ  ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದು ಹೇಳಿ ಜಿಲ್ಲಾಧಿಕಾರಿಯವರಿಗೆ ಮನವಿ ಪತ್ರ ಸಲ್ಲಿಸಿದಿವೆ. ಎಂದು ಸುದ್ದಿ ಗೋಷ್ಠಿಯಲ್ಲಿ  ನಾರಾಯಣಸ್ವಾಮಿ ಅವರು ತಿಳಿಸಿದರು.                                                        

ಸುವರ್ಣ ಕರ್ನಾಟಕ ವೇದಿಕೆ ಸಂಘದ ರಾಜ್ಯಾಧ್ಯಕ್ಷ ನಾರಾಯಣಸ್ವಾಮಿ.ಬಿ, ರಾಜ್ಯ ಪ್ರಧಾನ ಕಾರ್ಯದಶಿ ಪಿ. ರಾಜಸಾಬ್, ಬಳ್ಳಾರಿ ಜಿಲ್ಲಾ ಅಧ್ಯಕ್ಷ ಮಂಜುನಾಥ್ ರೆಡ್ಡಿ, ಉಮೇಶ್, ಮನೋಹರ ವಂಶಿ ಕೃಷ್ಣ ಸಂಘದ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದ್ದರು. 


ಸುದ್ದಿ ಓದಿ