ಬಳ್ಳಾರಿ: ತುಂಗಭದ್ರ ಜಲಾಶಯಕ್ಕೆ 75ರ ಸಂಭ್ರಮ ಆರ್ಥಿಕ ಭದ್ರತೆಗೆ ಜಲಾಶಯಗಳೇ ಬುನಾದಿ: ಮಹಾಬಲೇಶ್ವರಪ್ಪ
ಬಳ್ಳಾರಿ 25: ಸಾಮಾಜಿಕ ಆಥರ್ಿಕ ಭದ್ರತೆಗೆ ಜಲಾಶಯಗಳೇ ಬುನಾದಿ ಜಲಾಶಯಗಳು. ಇಂತಹ ಜಲಾಶಯಗಳನ್ನು ಉಳಿಸಿ ಸಂರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಬಿ.ಐ.ಟಿ.ಎಂ ನ ಪ್ರೊಫೆಸರ್ ಡಾ.ಹೆಚ್ ಮಹಾಬಲೇಶ್ವರಪ್ಪ ತಿಳಿಸಿದರು.
ಈ ಕುರಿತು ಗುರುವಾರ ನಗರದ ಬಿಡಿಎಎ ಸಭಾಂಗಣದಲ್ಲಿ ತುಂಗಭದ್ರ ರೈತ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ತುಂಗಭದ್ರ ಜಲಾಶಯದ 75 ನೇ ವರ್ಷದ ಅಮೃತ ಮಹೋತ್ಸವ ಸಂಭ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು 33 ಟಿಎಂಸಿ ಹೂಳು ಎತ್ತಲು ಆಗದವರು ಇನ್ನು ಮತ್ತೊಂದು ಜಲಾಶಯ ನಿರ್ಮಿಸಲು ಸಾದ್ಯವೇ ಈ ನಿಟ್ಟಿನಲ್ಲಿ ಜಲಾಶಯದ ವ್ಯಾಪ್ತಿಯಲ್ಲಿ ಬರುವ ಕನರ್ಾಟಕದ ಮೂರು ಜಿಲ್ಲೆ ಮತ್ತು ಆಂಧ್ರಪ್ರದೇಶದ ನಾಕು ಜಿಲ್ಲೆಗಳ ಜನ ಇದರ ಸಂರಕ್ಷಣೆಗೆ ಮುಂದಾಗಬೇಕೆಂದರು.
ಆಗಿನ ಕಾಲದ ಮದ್ರಾಸ್ ಸಂಸ್ಥಾನ, ಹೈದ್ರಾಬಾದ್ ಸಂಸ್ಥಾನ, ಮೈಸೂರು ಸಂಸ್ಥಾನ ಮತ್ತು ಮುಂಬೈ ಸಂಸ್ಥಾನ ಸೇರಿದಂತೆ ನಾಲ್ಕು ಸಂಸ್ಥಾನಗಳಲ್ಲಿ ತುಂಗಭದ್ರ ಜಲಾಶಯ ನಿರ್ಮಿಸುವ ಬಗ್ಗೆ ಉಂಟಾದ ಹಲವು ಗೊಂದಲೆಗಳ ಮದ್ಯೆ ಸತತ 85 ವರ್ಷಗಳ ಪ್ರಯತ್ನದ ನಂತರ ಜಲಾಶಯಕ್ಕೆ ಅಡಿಗಲ್ಲು ಹಾಕಲಾಯಿತು. ಇದರ ನಿರ್ಮಾಣಕ್ಕೆ ಹಲವಾರು ರೈತರು ಕೂಲಿ ಕಾರ್ಮಿಕರು ಅಧಿಕಾರಿಗಳು ಶ್ರಮ ವಹಿಸಿದ್ದಾರೆ. ಅವರ ಪರಿಶ್ರಮದಿಂದಲೇ ಇಂದು ಜಲಾಶಯ ವ್ಯಾಪ್ತಿಯ ಜನ ಸುಖವಾಗಿ ಜೀವನ ಸಾಗಿಸುತಿದ್ದಾರೆ. ಇಂತಹಾ ಇತಿಹಾಸವನ್ನು ಯಾರು ಮರೆಯಬಾರದು. ಕಾಖರ್ಾನೆಯ ವ್ಯಾಪ್ತಿಯಲ್ಲಿ ಒಟ್ಟು 21 ಕಾರ್ಖಾನೆಗಳು ಈ ನೀರಿನ ಬಳಕೆ ಮಾಡಿಕೊಳ್ಳುತ್ತಿದೆ. ಇವುಗಳಿಂದಲೂ ಸಹ ಕಾಖರ್ಾನೆಗಳ ಸುತ್ತಮುತ್ತಲಿನ ಗ್ರಾಮಗಳ ಜನತೆಗೆ ಉದ್ಯೋಗ ಸೃಷ್ಟಿಸಲಾಗಿದೆ. ನಾಡಿನ ಜನತೆಗೆ ಅನ್ನ ನೀಡುವ ತುಂಗಭದ್ರ ತಾಯಿಒಯನ್ನು ಯಾರೂ ಮರೆಯಬಾರದು ಎಂದರು. ಜಲಾಶಯದ ಉಳುವಿಗಾಗಿ ಮತ್ತು ಅದರ ಸಂರಕ್ಷಣೆಗಾಗಿ ಇಂದು ಹೋರಾಟ ಅನಿವಾರ್ಯವಾಗಿದೆ ಎಂದರು.
ಈ ಸಮಾರಂಭವನ್ನು ಕೊಟ್ಟೂರು ಸ್ವಾಮಿ ಸಂಸ್ಥಾನಮಠದ ಸಂಗನಬಸವ ಮಹಾಸ್ವಾಮಿಗಳು ಉದ್ಘಾಟನೆ ಮಾಡಿದರು. ಹಗರಿ ಬೊಮ್ಮನಳ್ಳಿಯ ನಂದೀ ಪುರದ ಮಹೇಶ್ವರ ಸ್ವಾಮಿ ನೇತೃತ್ವ ವಹಿಸಿದ್ದರು. ಹಾಗು ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ್ ಅಧ್ಯಕ್ಷತೆ ವಹಿಸಿದ್ದರು. ತುಂಗಭದ್ರ ಜಲಾಶಯದ ನಿವೃತ್ತ ಅಧಿಕಾರಿಗಳಾದ ವಿ.ಪಿ.ಉದ್ದೀಹಾಳ್ , ಕೆ.ಗೋವಿಂದುಲು, ವೀರೇಶಯ್ಯ, ಚನ್ನಬಸಪ್ಪ, ರಾಮರಾವ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು. ನಿವೃತ್ತ ಅಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ತುಂಗಭದ್ರ ರೈತ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ದರೂರ್ ಸ್ವಾಗತಿಸುವ ಮೂಲಕ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಕಾರ್ಯಕ್ರಮಕ್ಕೆ ಹಲವಾರು ಜಿಲ್ಲೆಗಳ ನೂರಾರು ರೈತರು ಸಂಘದ ಪಧಾದಿಕಾರಿಗಳು ಉಪಸ್ಥಿತರಿದ್ದರು.