ಬಳ್ಳಾರಿ: ಸ್ವಯಂ ಪ್ರೇರಿತ ರಕ್ತದಾನ ಶಿಬಿರ: ಸೇವೆಸಲ್ಲಿಸಿದವರಿಗೆ ಪ್ರಶಸ್ತಿ

ಬಳ್ಳಾರಿ: ಸ್ವಯಂ ಪ್ರೇರಿತ ರಕ್ತದಾನ ಶಿಬಿರ: ಸೇವೆಸಲ್ಲಿಸಿದವರಿಗೆ ಪ್ರಶಸ್ತಿ

ಬಳ್ಳಾರಿ 24:  ಮೋಕಾದ ಸಮುದಾಯ ಆರೋಗ್ಯ ಕೇಂದ್ರಲ್ಲಿ ಮಾರ್ಚ ತಿಂಗಳಲ್ಲಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಅತ್ಯುತ್ತಮವಾಗಿ ಸೇವೆಸಲ್ಲಿಸಿದವರಿಗೆ ಮೋಕದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ.ಸಿ.ಭಾರತಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಸಮಾರಂಭದಲ್ಲಿ ಹೆರಿಗೆ ತಜ್ಞರಾದ ಡಾ.ಪರಿಮಳ ದೇಸಾಯಿ, ಮಕ್ಕಳ ತಜ್ಞರಾದ ಡಾ.ಸಂಜೀವ್ ಮತ್ತಿತರರು ಇದ್ದರು.

ಕಾರ್ಯಕ್ರಮದಲ್ಲಿ ಉತ್ತಮವಾಗಿ 130 ಬ್ಲಡ್ ಯುನಿಟ್ಸ್ ಶೇಖರಿಸಿದ ಉಪಕೇಂದ್ರಗಳಾದ ಬಸರಕೋಡು, ಹಡ್ಲಿಗಿ ಆರೋಗ್ಯ ಸಹಾಯಕರಿಗೆ, ಆಶಾ ಕಾರ್ಯಕರ್ತರಿಗೆ ಹಾಗೂ ಕಾರ್ಯಕ್ರಮದಲ್ಲಿ ಉತ್ತಮವಾಗಿ ಐಇಸಿ ಮಾಡಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಿಗೆ ಪ್ರಶಸ್ತಿ ವಿತರಿಸಲಾಯಿತು.

ಖುಶರ್ಿದ್ ಬೇಗಂ, ಚಂದ್ರಮ್ಮ, ಮಾರುತಿ, ವಿರುಪಮ್ಮ, ನೀಲಮ್ಮ ಹಾಗೂ ವರಲಕ್ಷ್ಮಿ ಗೀತಾ, ರತ್ನಮ್ಮ, ಶಶಿಕಲಾ, ಗಂಗಮ್ಮ ಹಾಗೂ ಶ್ರೀಲತಾ ನಾಗವೇಣಿ ಅವರಿಗೆ ಪ್ರಶಸ್ತಿ ವಿತರಿಸಿದ ಆಡಳಿತ ವೈದ್ಯಾಧಿಕಾರಿಗಳಾದ ಡಾ.ಸಿ.ಭಾರತಿ ಅವರು ಆರೋಗ್ಯ ಸಹಾಯಕರಿಗೆ ಹಾಗೂ ಆಶಾಕಾರ್ಯಕತರ್ೆಯರಿಗೆ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ಉತ್ತಮವಾಗಿ ಉತ್ಸಾಹದಿಂದ ನಡೆಸಿಕೊಂಡು ಹೋಗಲು ತಿಳಿಸಿದರು 

ಸುದ್ದಿ ಓದಿ