ಬಳ್ಳಾರಿ: ದೇವಸ್ಥಾನದ ಅಕ್ರಮ ಆಡಳಿತ ತಡೆಯಲು 11 ರಂದು ಪ್ರತಿಭಟನೆ

ಬಳ್ಳಾರಿ: ದೇವಸ್ಥಾನದ ಅಕ್ರಮ ಆಡಳಿತ ತಡೆಯಲು 11 ರಂದು ಪ್ರತಿಭಟನೆ

ಬಳ್ಳಾರಿ 02: ನಗರದ ಆರಾಧ್ಯ ದೇವತೆ ಕನಕದುರ್ಗಮ್ಮ ದೇವಸ್ಥಾನದ ಆಡಳಿತ ನಿರ್ವಹಣೆಯಲ್ಲಿ ಹಲವಾರು ಲೋಪಗಳನ್ನು ಸರಿಪಡಿಸಲು ಹಾಗೂ ಅಕ್ರಮವನ್ನು ತಡೆಯಲು ಆಗ್ರಹಿಸಿ ಮೇ.11ರಂದು ನಗರದ ಹಲವಾರು ಭಕ್ತರೊಂದಿಗೆ ಕನರ್ಾಟಕ ಜನಸೈನ್ಯ ಸಂಘಟನೆಯು ಜಿಲ್ಲಾಡಳಿತದ ಗಮನ ಸೆಳೆಯಲ ಮುಂದಾಗಿದೆ. ಈ ಕುರಿತು ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ಕೆ.ಯರಿಸ್ವಾಮಿ, ಜಿಲ್ಲಾಧ್ಯಕ್ಷ ಕೆ.ಎಸ್.ಅಶೋಕ್, ರಾಜ್ಯ ಉಪಾಧ್ಯಕ್ಷ ಕೆ.ಹೊನ್ನುರುಸ್ವಾಮಿ ಮತ್ತಿತರರು ಪತ್ರಿಕಾಗೋಷ್ಟಿ ನಡೆಸಿ ಮಾತನಾಡುತ್ತಾ ದುರ್ಗಮ್ಮ ದೇವಸ್ಥಾನದ ಅಭಿವೃದ್ದಿಗಾಗಿ ಜನತೆ ನಮ್ಮ ಹೋರಾಟಕ್ಕೆ ಕೈ ಜೋಡಿಸಲಿದೆ ಎಂದರು. 

ದೇವಸ್ಥಾನದ ವತಿಯಿಂದ ಸರ್ಕಾರ ಹಲವಡಿಸಿರುವ ಮೂರು ಹುಂಡಿಗಳು ತುಂಬಿ ನಲವತ್ತೆರಡೂ ದಿನ ಕಳೆದಿದೆ. ಇಲ್ಲಿಯವರೆಗೆ ಅದನ್ನು ಎಣಿಕೆ ಮಾಡಿಲ್ಲ. ಇದರಿಂದ ಭಕ್ತರು ಕಾಣಿಕೆ ಹಾಕುವ ಪರ್ಯಾಯ  ವ್ಯೆವೆಸ್ಥೆಯನ್ನು ಕೂಡ ಸಹ ಮಾಡಿಲ್ಲ. ಇದರಿಂದ ಸರಕಾರಕ್ಕೆ ಬರುವ ದಿನನಿತ್ಯದ ಲಕ್ಷ್ಯಾಂತರ ರೂಪಾಯಿ ಆದಾಯ ಅಲ್ಲಿಯ ಪೂಜಾರಿಗಳ ಪಾಲಾಗಲಿದೆ. ಜೊತೆಗೆ ಅಲ್ಲಿಯ ಪೂಜಾರಿಗಳು ಅಕ್ರಮವಾಗಿ ಅವರೇ ಸೃಷ್ಟಿಸಿರುವ ಹುಂಡಿಗಳನ್ನು ಇರಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಸಹಕಾರ ಇರಬೇಕು ಎಂದರು. 

ದೇವಸ್ಥಾನಕ್ಕೆ ಪ್ರಧಾನ ಅರ್ಚಕರೆಂದು ಗಾದೆಪ್ಪ ಅವರು ಹೇಳುತ್ತಾರೆ. ಆದರೆ ಅವರು ಪೂಜಾರಿಯೂ ಹೌದು. ಈ ಎರಡನ್ನು ಹೊಂದಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದರು. ಜೊತೆಗೆ ಅವರು ದೇವಸ್ಥಾನಕ್ಕೆ ಬರುವ ಸಿರೆ, ಬೆಳ್ಳಿ, ಬಂಗಾರ, ಆಭರಣಕ್ಕೆ ಲೆಕ್ಕದ ಪುಸ್ತಕವಿಲ್ಲ ಎಂದು ಆರೋಪಿಸಿದರು. ಅಂತಯೇ ಎಲ್ಲಾ ದೇವಸ್ಥಾನಗಳಲ್ಲಿ ಮುಜುರಾಯಿ ಇಲಾಖೆ ತೆಂಗಿನಕಾಯಿ ಮಾರಟಕ್ಕೆ ಟೆಂಡರ್ಗಳನ್ನು ಕರೆದು ಕೊಡುತ್ತಾರೆ. ಆದರೆ ಈ ದೇವಸ್ಥಾನದಲ್ಲಿ ಎಲ್ಲಾ ಕಾನೂನುಗಳನ್ನು ಗಾಳಿಗೆ ತುರಿದ್ದಾರೆ. ಇದು ಸಹ ಸರಕಾರದ ಆದಾಯಕ್ಕೆ ಹೊಡೆತ ಕೊಟ್ಟಿದೆ. ಈ ಕುರಿತು ಕಳೆದ ಒಂದುವರ್ಷದಿಂದ ಇಲಾಖೆಯ ಆಯುಕ್ತರಿಗೆ, ಜಿಲ್ಲಾಡಳಿತಕ್ಕೆ, ಮುಜಾರಾಯಿ ಸಚಿವರಿಗೆ ದೂರು ನೀಡಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ರಾಜಕೀಯ ಕೈವಾಡದಿಂದ ಹೀಗಾಗುತ್ತಿದೆ ಎನ್ನಲಾಗಿದೆ. ಅದಕ್ಕಾಗಿ ಸರಕಾರ ಕಣ್ಣುಮುಚ್ಚಿ ಕುಳಿತಿರುವ ಅಧಿಕಾರಿಗಳು, ಸಚಿವರು, ಜಿಲ್ಲಾಡಳಿತ, ಇವರ ಗಮನಸೆಳೆಯಲು ಮೇ.11ರಂದು ಉಗ್ರಪ್ರತಿಭಟನೆ ಜೊತೆಗೆ ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆಹಾಕುವ ನಿಧರ್ಾರವನ್ನು ಕೈಗೊಳ್ಳಲಾಗಿದೆ ಎಂದು ವಿವರಿಸಿದರು. 

ಪತ್ರಿಕಾಗೋಷ್ಟಿಯಲ್ಲಿ ಚನ್ನಬಸವರಾಜ್, ಚಂಚಯ್ಯ, ಸೇರಿದಂತೆ ಇನ್ನೂ ಹಲವಾರು ಸಂಘಟನೆಯ ಮುಖಂಡರುಗಳು ಭಾಗವಹಿಸಿದ್ದರು. 

ಸುದ್ದಿ ಓದಿ