ಬಳ್ಳಾರಿ: ಬೇಸಿಗೆ ರಜಾ ಗಾನ ಮಜಾ ಸಂಗೀತ ಕಾರ್ಯಕ್ರಮ ಉದ್ಘಾಟನೆ
ಬಳ್ಳಾರಿ 26: ಶುಕ್ರವಾರ ಸಂಜೆ 6.30ಕ್ಕೆ ಗುರು ಪುಟ್ಟರಾಜ ಸಂಗೀತ ಪಾಠಶಾಲೆ ಮತ್ತು ಆಲಾಪ್ ಸಂಗೀತ ಕಲಾ ಟ್ರಸ್ಟ್ ಸಹಯೋಗದಲ್ಲಿ ಬೇಸಿಗೆ ರಜಾ ಗಾನ ಮಜಾ ಸಂಗೀತ ಕಾರ್ಯಕ್ರಮವನ್ನು ರಾಘವ ಮೆಮೋರಿಯಲ್ ಅಸೋಸಿಯೇಷನ್ನ ಗೌರವಾಧ್ಯಕ್ಷ ಕೆ.ಚನ್ನಪ್ಪನವರು ಉದ್ಘಾಟಿಸಿ ಮಾತನಾಡಿದ ಕೆ.ಚನ್ನಪ್ಪ ಈ ಎರಡೂ ಸಂಸ್ಥೆಗಳು ಮಕ್ಕಳಿಗೆ ಸಂಗೀತ ಶಿಬಿರ ಮಾಡಿರುವುದು ಅತ್ಯಂತ ಒಳ್ಳೆಯ ಕೆಲಸ. ಇದೇ ರೀತಿಯ ಹೆಚ್ಚಿನ ರೀತಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲೆಂದು ನುಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಎನ್.ಬಸವರಾಜ್ ಮಾತನಾಡುತ್ತಾ, ಇವತ್ತಿನ ಶಿಕ್ಷಣ ಪದ್ಧತಿಯಲ್ಲಿ ಕೇವಲ ಪುಸ್ತಕಗಳಿಗೆ ಅಂಟಿಕೊಂಡು ಅಂಕಗಳಿಗೆ ಬೆನ್ನು ಹತ್ತಿ ಯಾವುದೇ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಶಿಕ್ಷಣವೆಂದರೆ ಪುಸ್ತಕಗಳಲ್ಲಿ ಸಂಗೀತ, ಸಾಹಿತ್ಯ, ನಾಟಕ, ಕಲೆ ಇತ್ಯಾದಿಗಳಲ್ಲಿ ಮಕ್ಕಳು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಬೇಕು. ಈ ದಿಶೆಯಲ್ಲಿ ಈ ಎರಡೂ ಸಂಸ್ಥೆಗಳು ರಜಾ ದಿನಗಳಲ್ಲಿ, ಬೇಸಿಗೆ ರಜಾ ಗಾನ ಮಜಾ ಎಂಬ ಕಾರ್ಯಕ್ರಮದಡಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ಸಂಗೀತ, ಹಾಡುಗಾರಿಕೆಯಲ್ಲಿ ತೊಡಗಿಸಿದ್ದು ಅತ್ಯಂತ ಪ್ರಶಂಸನೀಯ. ಇಂತಹ ಕಾರ್ಯಕ್ರಮಗಳನ್ನು ಸತತ ಮುಂದುವರೆಸಿಕೊಂಡು ಹೋಗಲು ವಿನಂತಿಸಿದರು
ಕೆ.ಎಸ್.ಸತ್ಯನಾರಾಯಣ ಕಲಾವಿದರು ಕೆ.ಎಂ.ಮಂಜುನಾಥ ವರದಿಗಾರರು ಕನ್ನಡಪ್ರಭ ಕೆ.ಶರಣಬಸಪ್ಪ ಉದ್ಯಮಿ, ಮೃತ್ಯುಂಜಯ ಸ್ವಾಮಿ ಮಾತನಾಡುತ್ತಾ ವೇದಿಕೆ ಕಾರ್ಯಕ್ರಮಕ್ಕೂ ಮುಂಚೆ ನಡೆದ ಸಣ್ಣ ಮಕ್ಕಳ ಸಂಗೀತ ಕಾರ್ಯಕ್ರಮ ನೋಡಿ ಬಹಳ ಸಂತಸವಾಯಿತು. ಈ ಸಂಗೀತ ಕಾರ್ಯಕ್ರಮ ಸದಾ ಮುಂದುವರೆಸಿಕೊಂಡು ಹೋಗಲು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರ ಸಿದ್ದರಾಮ ಕಲ್ಮಠ, ಇವತ್ತಿನ ಬೇಸಿಗೆ ಕಾಲದಲ್ಲಿ ಮಕ್ಕಳಿಗೆ ಸಂಗೀತ ಶಿಬಿರ ಏರ್ಪಡಿಸುವುದು ಅಷ್ಟೊಂದು ಸುಲಭವಾದ ಕೆಲಸವಲ್ಲ, ಬಹಳಷ್ಟು ಶ್ರಮವಿರುತ್ತದೆ. ಈ ಶಿಬಿರಕ್ಕೆ ಮಕ್ಕಳಿಗೆ ಕಲಿಯಲು ಪ್ರೋತ್ಸಾಹ ನೀಡುತ್ತಿರುವುದು, ಮೊದಲು ಪೋಷಕರಿಗೆ ಧನ್ಯವಾದಗಳು ತಿಳಿಸುತ್ತೇವೆ. ಅತ್ಯಂತ ಕಡಿಮೆ ಅವಧಿಯಲ್ಲಿ ಮಕ್ಕಳಿಗೆ ಸಂಗೀತವನ್ನು ಅಭ್ಯಾಸ ಮಾಡುವುದಕ್ಕೆ, ಈ ಎರಡೂ ಸಂಸ್ಥೆಗಳಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದು ನುಡಿದರು.
ತದನಂತರ ಬೇಸಿಗೆ ಶಿಬಿರಾಥರ್ಿಗಳಿಂದ ಸುಮಾರು 40 ವಿದ್ಯಾರ್ಥಿಗಳು ಬೇಸಿಗೆ ರಜಾ ಗಾನ ಮಜಾ ಸಂಗೀತ ಕಾರ್ಯಕ್ರಮದಲ್ಲಿ ಪ್ರೇಕ್ಷಕರ ಮನಸೂರೆಗೊಂಡುರ. ದೊಡ್ಡಬಸವಪ್ಪ ಗವಾಯಿ ಸ್ವಾಗತಿಸಿದರೆ, ಕಾರ್ಯಕ್ರಮದ ನಿರೂಪಣೆಯನ್ನು. ಸಾಯಿ ಶೃತಿ ಮತ್ತು ಸ್ವಪ್ನ ನೆರವೇರಿಸಿದರು. ಕೊನೆಯಲ್ಲಿ ಚಂದನ್ ವಂದಿಸಿದರು. ಕಾರ್ಯಕ್ರಮದಲ್ಲಿ ಆಲಾಪ್ ಸಂಗೀತ ಕಲಾ ಟ್ರಸ್ಟ್ ಅಧ್ಯಕ್ಷ ರಮಣಪ್ಪ ಭಜಂತ್ರಿ, ಗುರುಪುಟ್ಟರಾಜ ಸಂಗೀತ ಪಾಠಶಾಲೆ ಅಧ್ಯಕ್ಷರಾದ ದೊಡ್ಡ ಬಸಪ್ಪ ಗವಾಯಿ, ಕಾರ್ಯದರ್ಶಿ ಓಬಳೇಶ, ನೇತಿ ರಘುರಾಮ, ಪಲ್ಲೇದ ನಾಗರಾಜ, ಅಂಬರೇಶ, ಇಂದ್ರ ಭಾಗವಹಿಸಿದ್ದರು. ಅತ್ಯಂತ ಹೆಚ್ಚಿನ ರೀತಿಯಲ್ಲಿ ಪ್ರೇಕ್ಷಕರು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.